For Quick Alerts
  ALLOW NOTIFICATIONS  
  For Daily Alerts

  ಅದ್ದೂರಿಯಾಗಿ ನೆರವೇರಿತು 'ಕುರುಕ್ಷೇತ್ರ' ಆಡಿಯೋ ಲಾಂಚ್

  |
  Kurukshetra Kannada Movie: ಅದ್ದೂರಿಯಾಗಿ ನೆರವೇರಿತು 'ಕುರುಕ್ಷೇತ್ರ' ಆಡಿಯೋ ಲಾಂಚ್ | FILMIBEAT KANNADA

  ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ'ದ ಆಡಿಯೋ ಬಿಡುಗಡೆಯಾಗಿದೆ. ನಿನ್ನೆ (ಜುಲೈ 7) ಅದ್ದೂರಿ ಕಾರ್ಯಕ್ರಮದ ಮೂಲಕ ಹಾಡುಗಳು ಅನಾವರಣ ಆಗಿದೆ.

  ಬೆಂಗಳೂರಿನ ಕೋರಮಂಗಲದಲ್ಲಿ ದೊಡ್ಡ ಕಾರ್ಯಕ್ರಮದ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ನಟ ದರ್ಶನ್, ನಟಿ ಹರಿಪ್ರಿಯಾ, ಶಶಿ ಕುಮಾರ್, ಡ್ಯಾನಿಷ್ ಅಖ್ತರ್ ಸೈಫ್, ಸೋನು ಸೂದ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  ದರ್ಶನ್ ಅಭಿಮಾನಿಗಳ ಜಾತ್ರೆ ಕಾರ್ಯಕ್ರಮದಲ್ಲಿ ನಡೆದಿದೆ. ಡಿ ಬಾಸ್ ಕ್ರೇಜ್ ಜೋರಾಗಿದ್ದು, ಅವರ ಎಂಟ್ರಿಗೆ ಎಲ್ಲರೂ ಜೈಕಾರ ಹಾಕಿದ್ದಾರೆ. ಸಿನಿಮಾದ ಮೊದಲ ಹಾಡು 'ಸಾಹೋರೇ ಸಾಹೋ..' ಮೂಲಕ ಅವರನ್ನು ವೇದಿಕೆಗೆ ಸ್ವಾಗತ ಮಾಡಲಾಗಿದೆ.

  ಇನ್ನು, ಹಾಡುಗಳ ಜೊತೆಗೆ ಟ್ರೇಲರ್ ಕೂಡ ರಿಲೀಸ್ ಆಗಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮ ಸದ್ಯದಲ್ಲಿಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ವಿ ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ. ನಾಗಣ್ಣ, ವಿ ನಾಗೇಂದ್ರ ಪ್ರಸಾದ್, ಎಸ್ ವಿ ಪ್ರಸಾದ್ ಹಾಗೂ ದೇವರಾಜ್ ಸಿನಿಮಾಗೆ ನಾಲ್ಕು ನಿರ್ದೇಶಕರು ಕೆಲಸ ಮಾಡಿದ್ದಾರೆ.

  ರಾಕ್ ಲೈನ್ ವೆಂಕಟೇಶ್ ಪಾಲಾದ ಕುರುಕ್ಷೇತ್ರ ವಿತರಣೆ ಹಕ್ಕು

  ಈ ಸಿನಿಮಾವನ್ನು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿಕುಮಾರ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Challenging star Darshan's 50 movie 'Kurukshetra' audio released Yesterday (july 7th). Music scored by V Harikrishna and lyrics by V Navendra Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X