»   » ಕುರುಕ್ಷೇತ್ರ ಸೆಟ್ ಗೆ ಹೋಗಿದ್ದ ಪತ್ರಕರ್ತರಿಗೆ ಸಿಕ್ಕ ಸರ್ಪ್ರೈಸ್ ಸಂಗತಿಗಳು

ಕುರುಕ್ಷೇತ್ರ ಸೆಟ್ ಗೆ ಹೋಗಿದ್ದ ಪತ್ರಕರ್ತರಿಗೆ ಸಿಕ್ಕ ಸರ್ಪ್ರೈಸ್ ಸಂಗತಿಗಳು

Posted By:
Subscribe to Filmibeat Kannada

ಅದ್ದೂರಿ ತಾರಾಗಣ, ಹೈ ಬಜೆಟ್ ಚಿತ್ರ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ದುರ್ಯೋಧನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ. ಕುರುಕ್ಷೇತ್ರ ಸಿನಿಮಾ ಸೆಟ್ಟೇರಿದಾಗಿಂದಲೂ ಚಿತ್ರೀಕರಣದ ಸಂಪೂರ್ಣ ಮಾಹಿತಿಯನ್ನ ಹಂತ ಹಂತವಾಗಿ ಫಿಲ್ಮೀ ಬೀಟ್ ಮೂಲಕ ತಿಳಿಸುತ್ತಾ ಬಂದಿದ್ದೇವೆ.

ಸದ್ಯ ಕುರುಕ್ಷೇತ್ರ ಸೆಟ್ ನಲ್ಲಿ ಏನು ನಡೆಯುತ್ತಿದೆ? ಸಿನಿಮಾದ ಬಗ್ಗೆ ನಿರ್ಮಾಪಕ ಹಾಗೂ ನಿರ್ದೇಶಕರ ಅಭಿಪ್ರಾಯವೇನು ? ಪೌರಾಣಿಕ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಗ್ಗೆ ನಟ ದರ್ಶನ್ ಏನು ಹೇಳುತ್ತಿದ್ದಾರೆ ಇವೆಲ್ಲವುದರ ಬಗ್ಗೆ ಮಾಹಿತಿ ನಿಮಗಾಗಿ ತಂದಿದ್ದೇವೆ.

ಹೈದ್ರಾಬಾದ್ ನ 'ರಾಮೋಜಿ ಫಿಲ್ಮಂ ಸಿಟಿ'ಯಲ್ಲಿ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಮಾಧ್ಯಮದವರಿಗಾಗಿ ಸುದ್ದಿಗೋಷ್ಠಿ ನಡೆಸಿರೋ ಚಿತ್ರತಂಡ ಸಿನಿಮಾ ಬಿಡುಗಡೆ ಬಗ್ಗೆ. ಚಿತ್ರೀಕರಣದ ಬಗ್ಗೆ ಮಾತನಾಡಿದೆ. ಏನೆಲ್ಲಾ ಇಂಟ್ರೇಸ್ಟಿಂಗ್ ವಿಚಾರ ಹೇಳಿದ್ದಾರೆ ಅನ್ನುವುದನ್ನ ತಿಳಿದುಕೊಳ್ಳಬೇಕಾದರೆ ಮುಂದೆ ಓದಿ ..

ಇತಿಹಾಸ ಬರೆಯಲಿದೆ ಕುರುಕ್ಷೇತ್ರ

75 ವರ್ಷದ ಇತಿಹಾಸದಲ್ಲಿ ಮಹಾಭಾರತಕ್ಕೆ ಸಂಬಂದಿಸಿದ ಚಿತ್ರ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾರಂಗದಲ್ಲಿ ಇಂತದೊಂದು ಸಿನಿಮಾ ನಿರ್ಮಾಣ ಆಗಿದೆ. ಕುರುಕ್ಷೇತ್ರ ಚಿತ್ರ ಬಿಡುಗಡೆ ಆದ ನಂತರ ಖಂಡಿತವಾಗಿಯೂ ಇತಿಹಾಸ ಬರೆಯಲಿದೆ ಎಂದಿದ್ದಾರೆ ನಿರ್ಮಾಪಕ ಮುನಿರತ್ನ.

ಕನ್ನಡಿಗರೇ ಅಭಿನಯಿಸಿದ ಸಿನಿಮಾ

ಕುರುಕ್ಷೇತ್ರ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರೆಲ್ಲರೂ ಕನ್ನಡಿಗರು. ಅತೀ ಹೆಚ್ಚು ಕನ್ನಡದ ಕಲಾವಿದರನ್ನೇ ಬಳಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ಆಕ್ಟರ್ ಗಳನ್ನ ಆಯ್ಕೆ ಮಾಡಿದ್ದಾರಂತೆ ನಿರ್ಮಾಪಕ ಮುನಿರತ್ನ

ಕುಂಬಳಕಾಯಿ ಹೊಡೆಯಲು ಸಜ್ಜು

ಕುರುಕ್ಷೇತ್ರ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಕೊನೆಯ ಹಾಡಿನ ಚಿತ್ರೀಕರಣದಲ್ಲಿ ಸಿನಿಮಾತಂಡ ಬ್ಯುಸಿ ಆಗಿದೆ. ದರ್ಶನ್ ಇಂಟ್ರಡಕ್ಷನ್ ಹಾಡಿನ ಶೂಟಿಂಗ್ ನಡೆಯುತ್ತಿದ್ದು ಜನವರಿ 5 ರಂದು ಕುಂಬಳಕಾಯಿ ಹೊಡೆಯೋ ಮೂಲಕ ಚಿತ್ರೀಕರಣ ಮುಕ್ತಾಯವಾಗಲಿದೆ.

ಮಾರ್ಚ್ ಮೊದಲ ವಾರ ರಿಲೀಸ್

ಕುರುಕ್ಷೇತ್ರ ಸಿನಿಮಾ ಮಾರ್ಚ್ 9 ರಂದು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ ತಿಂಗಳಲ್ಲಿ ಸೆನ್ಸಾರ್ ನಡೆಯಲಿದ್ದು ಮಾರ್ಚ್ ಮೊದಲ ವಾರ ಚಿತ್ರ ತೆರೆಗೆ ಬರ್ತಿದೆ. ಚಿತ್ರೀಕರಣಕ್ಕೆ ಅದ್ದೂರಿ ಸೆಟ್ ಗಳನ್ನ ಬಳಸಲಾಗಿದ್ದು ಸುಮಾರು 18 ರಿಂದ 20 ಸೆಟ್ ಗಳನ್ನ ಹಾಕಲಾಗಿದೆ.

ನಿರ್ಮಾಪಕರನ್ನ ಮೆಚ್ಚಿಕೊಂಡ ದರ್ಶನ್

ಸಿನಿಮಾ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಚಾಲೆಂಜಿಂಗ್ ಸ್ಟಾರ್ ಎಲ್ಲಾ ಕ್ರೆಡಿಟ್ ನಿರ್ಮಾಪಕರಿಗೆ ನೀಡಿದ್ದಾರೆ. ಕಲಾವಿದರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ದರ್ಬಾರ್ ಹಾಲ್ ಗೆ ಎಸಿ ಫಿಕ್ಸ್ ಮಾಡಿಸಿದ್ದಾರಂತೆ ಮುನಿರತ್ನ.

English summary
Kurukshetra kannada movie press conference held in Hyderabad, Darshan and Muniratna speak about the film, Kurukshetra is a milestone in the history of Kannada cinema

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X