'ಕುರುಕ್ಷೇತ್ರ' ಮತ್ತೆ ಮುಂದಕ್ಕೆ : ದರ್ಶನ್ ಅಭಿಮಾನಿಗಳಲ್ಲಿ ಮುನಿರತ್ನ ಕ್ಷಮೆ
Recommended Video
17 days to go... 16 th days to go.. ಅಂತ 'ಕುರುಕ್ಷೇತ್ರ' ಸಿನಿಮಾದ ಪೋಸ್ಟರ್ ಗಳು ದಿನಕೊಂದು ಬಿಡುಗಡೆ ಆಗುತ್ತಿದ್ದವು. ದರ್ಶನ್ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದರು. ಆದರೆ, ಚಿತ್ರದ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ.
'ಕುರುಕ್ಷೇತ್ರ' ಬಿಡುಗಡೆಯ ದಿನಾಂಕ ಪದೇ ಪದೇ ಬದಲಾಗುತ್ತಿತ್ತು. ಆದರೆ, ಆಗಸ್ಟ್ 2 ರಂದು ಸಿನಿಮಾ ಬಿಡುಗಡೆ ಪಕ್ಕಾ ಎಂದು ಅನೇಕ ಪೋಸ್ಟರ್ ಗಳು ಬಂದಿದ್ದವು. ಅಚ್ಚರಿ ಎಂದರೆ, ಈಗ ಆ ದಿನವೂ ಸಿನಿಮಾ ರಿಲೀಸ್ ಆಗುತ್ತಿಲ್ಲ.
ಕೆಲವು ಅನಿವಾರ್ಯ ಕಾರಣಗಳಿಂದ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆಯಂತೆ. ಆಗಸ್ಟ್ 2ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ, ಒಂದು ವಾರ ಮುಂದಕ್ಕೆ ಹೋಗಿದೆ. ಆಗಸ್ಟ್ 9 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.

ಸಿನಿಮಾದ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದ್ದು, ದರ್ಶನ್ ಅಭಿಮಾನಿಗಳಲ್ಲಿ ಮುನಿರತ್ನ ಕ್ಷಮೆ ಕೇಳಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ನಿನ್ನೆ 'ಕುರುಕ್ಷೇತ್ರ' ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗಿನಲ್ಲಿಯೂ ಸಿನಿಮಾ ಟ್ರೇಲರ್ ಹೊರಬಂದಿದೆ.
ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











