For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' 50ನೇ ದಿನದ ಸಂಭ್ರಮಾಚರಣೆ : ಅಭಿಮಾನಿಗಳಿಂದ ರಕ್ತದಾನ

  |

  ಆಗಸ್ಟ್ 9 ರಂದು ಬಿಡುಗಡೆಯಾಗಿದ್ದ 'ಕುರುಕ್ಷೇತ್ರ' ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ 50 ದಿನಗಳನ್ನು ಪೂರೈಸಲಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ಕುರುಕ್ಷೇತ್ರ' ಐವತ್ತರ ಸಂಭ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.

  Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'

  ದೊಡ್ಡಬಳ್ಳಾಪುರದಲ್ಲಿ ದರ್ಶನ್ ಅಭಿಮಾನಿಗಳು ರಕ್ತದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸೌಂದರ್ಯ ಮಹಲ್ ನಲ್ಲಿ ಈ ಕಾರ್ಯಕ್ರಮಗಳು, ಸಪ್ಟೆಂಬರ್ 21 ರಂದು ನಡೆಯಲಿದೆ. ಇಡೀ ದಿನ 'ಕುರುಕ್ಷೇತ್ರ'ದ ವಿಜಯೋತ್ಸವ ಇದೆ.

  ಬೆಳಗ್ಗೆ 8:30 ರಿಂದ ರಾತ್ರಿ 7ರ ವರೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ದರ್ಶನ್ ಕಟ್ ಔಟ್ ಗೆ ಮಾಲಾರ್ಪಣೆ, ಸಿಹಿ ಹಂಚುವುದು, ರಕ್ತದಾನ, ಅನ್ನ ಸಂತರ್ಪಣೆ ಹೀಗೆ ಅನೇಕ ಕಾರ್ಯಕ್ರಮಗಳು ಆ ದಿನ ನಡೆಯಲಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

  Kurukshetra Movie 50 Days Celebration In Doddaballapur

  ದಿನ ಪತ್ರಿಕೆಗಳಲ್ಲಿ 'ಕುರುಕ್ಷೇತ್ರ' ಗುಣಗಾನ: ಯಾರು ಎಷ್ಟು ಸ್ಟಾರ್ ಕೊಟ್ಟಿದ್ದಾರೆ?ದಿನ ಪತ್ರಿಕೆಗಳಲ್ಲಿ 'ಕುರುಕ್ಷೇತ್ರ' ಗುಣಗಾನ: ಯಾರು ಎಷ್ಟು ಸ್ಟಾರ್ ಕೊಟ್ಟಿದ್ದಾರೆ?

  'ಕುರುಕ್ಷೇತ್ರ' ಸಿನಿಮಾ ನೂರು ಕೋಟಿ ಗಳಿಕೆ ಮಾಡಿ ಮುನ್ನುಗುತ್ತಿದೆ. ನೂರು ಕೋಟಿ ಕ್ಲಬ್ ಸೇರಿದ ಎರಡನೇ ಕನ್ನಡ ಸಿನಿಮಾ ಇದಾಗಿದೆ. ಬಹಳ ವರ್ಷಗಳ ನಂತರ ದರ್ಶನ್ ಪೌರಾಣಿಕ ಸಿನಿಮಾ ಮಾಡಿದ್ದು, ಅಭಿಮಾನಿಗಳು ತಬ್ಬಿಕೊಂಡಿದ್ದಾರೆ. ದುರ್ಯೋಧನ ಅಬ್ಬರ ಜೋರಾಗಿ ಸಾಗಿದೆ.

  English summary
  'Kurukshetra' movie 50 days celebration in Doddaballapur.
  Thursday, September 19, 2019, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X