For Quick Alerts
  ALLOW NOTIFICATIONS  
  For Daily Alerts

  ಬೆಟ್ಟಿಂಗ್ ಕಟ್ಟುವ ಆತುರದಲ್ಲಿ 'ಕುರುಕ್ಷೇತ್ರ' ರಿಲೀಸ್ ದಿನಾಂಕ ಹೇಳಿದ ಮುನಿರತ್ನ

  |

  ಎರಡು ವಾರದ ಹಿಂದೆ ನಿರ್ಮಾಪಕ ಮುನಿರತ್ನ ಅವರನ್ನ 'ಕುರುಕ್ಷೇತ್ರ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಸರ್' ಎಂದು ಕೇಳಿದ್ದಕ್ಕೆ ಒಂದೇ ಒಂದು ಸಣ್ಣ ಸುಳಿವು ಕೂಡ ಕೊಟ್ಟಿಲ್ಲ.

  ಆದ್ರೀಗ, ತಮ್ಮ ರಾಜಕೀಯ ಆಟದಲ್ಲಿ ಈಗ ಕುರುಕ್ಷೇತ್ರ ಚಿತ್ರವನ್ನೇ ಪಣಕ್ಕಿಟ್ಟಿದ್ದಾರೆ. ಹೌದು, ಕುರುಕ್ಷೇತ್ರ ಯುದ್ಧ ನಡೆಯೋಕೆ ಒಂದು ರೀತಿ ಕೌರವರು ಮತ್ತು ಪಾಂಡವರ ನಡುವೆ ನಡೆದ ಜೂಜಾಟವೂ ಕಾರಣ. ಇದೀಗ, ಕುರುಕ್ಷೇತ್ರ ಚಿತ್ರವನ್ನೇ ಪಣಕ್ಕಿಟ್ಟು ಬೆಟ್ಟಿಂಗ್ ಕಟ್ಟಿದ್ದಾರೆ ನಿರ್ಮಾಪಕ ಮುನಿರತ್ನ.

  'ಕುರುಕ್ಷೇತ್ರ'ದ ಈ ವಿಚಾರದ ಬಗ್ಗೆ ರವಿಚಂದ್ರನ್ ಗೆ ಬೇಸರ ಇದೆಯಂತೆ

  ಈ ಬೆಳವಣಿಗೆಯಲ್ಲಿ ಕುರುಕ್ಷೇತ್ರ ಚಿತ್ರದ ರಿಲೀಸ್ ದಿನಾಂಕವನ್ನ ಸ್ವತಃ ನಿರ್ಮಾಪಕರ ಘೋಷಿಸಿದ್ದಾರೆ. ಕುರುಕ್ಷೇತ್ರ ಯಾವಾಗ, ಯಾವಾಗ ಎಂದು ಕೇಳುತ್ತಿದ್ದವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಅಷ್ಟಕ್ಕೂ, ಕುರುಕ್ಷೇತ್ರ ಯಾವಾಗ? ಮುಂದೆ ಓದಿ....

  ಏಪ್ರಿಲ್ ಮೊದಲ ವಾರ ಕುರುಕ್ಷೇತ್ರ

  ಏಪ್ರಿಲ್ ಮೊದಲ ವಾರ ಕುರುಕ್ಷೇತ್ರ

  ಕುರುಕ್ಷೇತ್ರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಮುನಿರತ್ನ ಅವರೇ ಹೇಳಿರುವಂತೆ ಕುರುಕ್ಷೇತ್ರ ಸಿನಿಮಾ ಏಪ್ರಿಲ್ 5ರಂದು ತೆರೆಕಾಣಲಿದೆಯಂತೆ. ಅದಕ್ಕೂ ಮುಂಚೆ ಚಿತ್ರದ ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ.

  ದರ್ಶನ್ 'ಪಾಶುಪತಾಸ್ತ್ರ'ದ ಹಿಂದೆ ರಾಜಕೀಯ.!

  ನಾಲ್ಕು ಭಾಷೆಯಲ್ಲಿ ಬರಬಹುದು

  ನಾಲ್ಕು ಭಾಷೆಯಲ್ಲಿ ಬರಬಹುದು

  ಎರಡು ವಾರದ ಹಿಂದೆ ಮಾತನಾಡಿದ್ದ ನಿರ್ಮಾಪಕ ಮುನಿರತ್ನ ಅವರು, ಸದ್ಯ ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ ಡಬ್ಬಿಂಗ್ ನಡೆಯುತ್ತಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಎಂದು ಹೇಳಿದ್ದರು. ನಂತರ ಉತ್ತರ ಭಾರತದ ಭಾಷೆಯಲ್ಲೂ ಡಬ್ಬಿಂಗ್ ಕೆಲಸ ಆರಂಭವಾಗಲಿದೆ ಎಂದಿದ್ದರು. ಹಾಗ್ನೋಡಿದ್ರೆ, ಮೊದಲ ನಾಲ್ಕು ಭಾಷೆಯಲ್ಲಿ ಸಿನಿಮಾ ಬರಬಹುದು ಎನ್ನಲಾಗಿದೆ.

  'ಕುರುಕ್ಷೇತ್ರ'ದ ಬಗ್ಗೆ 'ಅದೊಂದು' ಬಿಟ್ಟು ಎಲ್ಲ ಹೇಳಿದ್ರು ನಿರ್ಮಾಪಕ ಮುನಿರತ್ನ

  ಏನಿದು ಕುರುಕ್ಷೇತ್ರ ಬೆಟ್ಟಿಂಗ್

  ಏನಿದು ಕುರುಕ್ಷೇತ್ರ ಬೆಟ್ಟಿಂಗ್

  ಫೆಬ್ರವರಿ 8 ರಂದು ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಆದ್ರೆ, ಬಿಜೆಪಿಯವರು ಈ ಬಜೆಟ್ ಮಂಡನೆ ಆಗಲ್ಲ ಎನ್ನುತ್ತಿದ್ದಾರೆ. ಹಾಗಾಗಿ, ರಾಜರಾಜೇಶ್ವರಿ ನಗರದ ಶಾಸಕ ''ಒಂದು ವೇಳೆ ಬಜೆಟ್ ಮಂಡನೆ ಆಗಿಲ್ಲ ಅಂದ್ರೆ ನನ್ನ ಕುರುಕ್ಷೇತ್ರ ಸಿನಿಮಾ 5 ಕೋಟಿಗೆ ಬಿಜೆಪಿಯವರಿಗೆ ಮಾರಾಟ ಮಾಡ್ತೀನಿ, ಬಜೆಟ್ ಮಂಡನೆ ಆಗುತ್ತೆ, ಯಾರಾದರೂ ಪಂದ್ಯ ಕಟ್ಟಬಹುದು'' ಎಂದಿದ್ದಾರೆ.

  ಚುನಾವಣಾ ಅಕ್ರಮ ಪ್ರಕರಣದಲ್ಲಿ 'ಕುರುಕ್ಷೇತ್ರ' ನಿರ್ಮಾಪಕ ಮುನಿರತ್ನ ಖುಲಾಸೆ

  50 ಕೋಟಿ ಬಜೆಟ್ ಎನ್ನಲಾಗಿದೆ

  50 ಕೋಟಿ ಬಜೆಟ್ ಎನ್ನಲಾಗಿದೆ

  ಇನ್ನು ಕುರುಕ್ಷೇತ್ರ ಚಿತ್ರವನ್ನ ಬೆಟ್ಟಿಂಗ್ ಕಟ್ಟುವ ಆತುರದಲ್ಲಿ ನಿರ್ಮಾಪಕ ಮುನಿರತ್ನ ಅವರು, ತಮ್ಮ ಸಿನಿಮಾದ ಬಜೆಟ್ 50 ಕೋಟಿ ಎಂದು ಹೇಳಿಕೊಂಡಿದ್ದಾರೆ. ಹಾಗೆ, ರಿಲೀಸ್ ಬಗ್ಗೆ ಎಲ್ಲಿಯೂ ಮಾತನಾಡದ ಮುನಿರತ್ನ ಏಪ್ರಿಲ್ 5 ರಂದು ರಿಲೀಸ್ ಮಾಡಬೇಕು ಎಂದುಕೊಂಡಿದ್ದೇನೆ'' ಎಂದು ಕೂಡ ಬಿಟ್ಟುಕೊಟ್ಟಿದ್ದಾರೆ.

  English summary
  Challenging star darshan starrer most expected movie kurukshetra will releasing on april 5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X