»   » 'ತುಪ್ಪದ ಬೆಡಗಿ'ಗೆ ಸಿಕ್ಕ ಹೊಸ ಬಿರುದು ಯಾವುದು ಗೊತ್ತಾ?

'ತುಪ್ಪದ ಬೆಡಗಿ'ಗೆ ಸಿಕ್ಕ ಹೊಸ ಬಿರುದು ಯಾವುದು ಗೊತ್ತಾ?

Posted By:
Subscribe to Filmibeat Kannada

ಚಂದನವನದಲ್ಲಿ ತುಪ್ಪದ ಬೆಡಗಿ ಅಂದ್ರೆ ನಿಮಗೆ ಪಕ್ಕನೆ ನೆನಪಾಗೋದು ಯಾರು ಹೇಳಿ ನಟಿ ರಾಗಿಣಿ ದ್ವಿವೇದಿ ಅವರು ಅಲ್ವಾ?. ಇನ್ನು 'ಲೇಡಿ ಅಂಬರೀಶ್' ಅಂದಾಗಲೂ ನಿಮಗೆ ಸಡನ್ ಆಗಿ ರಾಗಿಣಿ ಅವರೇ ನೆನಪಾಗಬೇಕು.

ಯಾಕಂತೀರಾ, ಯಾಕೆಂದರೆ?, 'ಲೇಡಿ ಅಂಬರೀಶ್' ಅಂತ ನಟಿ ರಾಗಿಣಿ ದ್ವಿವೇದಿ ಅವರಿಗೆ ಸಿಕ್ಕಿರುವ ಹೊಸ ಬಿರುದು. ಅಂದಹಾಗೆ ನಟಿ ರಾಗಿಣಿ ದ್ವಿವೇದಿ ಅವರಿಗೆ ಈ ಬಿರುದು ದಯಪಾಲಿಸಿದವರು ಕೆಎಫ್ ಸಿಸಿ ಮಾಜಿ ಅಧ್ಯಕ್ಷ ಕಮ್ ಚಿತ್ರ ನಿರ್ಮಾಪಕ ಉಮೇಶ್ ಬಣಕಾರ್ ಅವರು.[ಕಥೆ ವ್ಯಥೆ, ಕಷ್ಟ ಸುಖಗಳ ಡಿಕ್ಷನರಿಯೇ ಭಟ್ಟರ 'ಪರಪಂಚ'!]

'Lady Ambareesh' new title for Kannada Actress Ragini Dwivedi

ಇನ್ನು ರಾಗಿಣಿ ಅವರಿಗೆ ಇಂತಹ ವಿಶಿಷ್ಟ ಬಿರುದು ಸಿಕ್ಕಿದ್ದು ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ 'ವೀರ ರಣಚಂಡಿ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ. ಪಕ್ಕಾ ಆಕ್ಷನ್ ದೃಶ್ಯಗಳಿರುವ 'ರಣಚಂಡಿ' ಸಿನಿಮಾದಲ್ಲಿ ತುಪ್ಪದ ಹುಡುಗಿ ಭಯಂಕರ ಫೈಟ್ ಮಾಡಿದ್ದಾರೆ.

ನಿರ್ದೇಶಕ ಆನಂದ್ ಪಿ.ರಾಜು ಆಕ್ಷನ್-ಕಟ್ ಹೇಳಿರುವ 'ವೀರ ರಣಚಂಡಿ' ಸಿನಿಮಾ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ. ಯಾಕೆಂದರೆ ಚಿತ್ರದಲ್ಲಿ ಹೊಡೆದಾಟದ ದೃಶ್ಯಗಳಿದ್ದು, ಸಖತ್ ಮಾಸ್ ಅಂಶಗಳಿವೆ. ಈ ಚಿತ್ರಕ್ಕೆ ನಾಲ್ವರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದು, ಒಂದಿಷ್ಟು ಅದ್ಭುತವಾದ ಸ್ಟಂಟ್ ಗಳು ಚಿತ್ರದಲ್ಲಿವೆ.['ನಾಟಿ ಕೋಳಿ' ನಿರ್ದೇಶಕನ ಮೇಲೆ ರಾಗಿಣಿ ಕೋಪವೇಕೆ?]

'Lady Ambareesh' new title for Kannada Actress Ragini Dwivedi

ಈ ಬಾರಿ ರಾಗಿಣಿ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಗ್ಲಾಮರ್ ಮತ್ತು ಐಟಂ ಸಾಂಗ್ ಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿದ್ದಾರೆ. ಆದರೂ ಬೈಕ್ ಓಡಿಸಿ ಲಾಂಗು-ಮಚ್ಚು ಕೈಯಲ್ಲಿ ಹಿಡಿದು ರೌಡಿಗಳ ಜೊತೆ ಸೆಣಸಾಡಿ ಜಬರ್ದಸ್ತ್ ಆಗಿ ಮಿಂಚಿದ್ದಾರೆ.

ಒಟ್ನಲ್ಲಿ 'ವೀರ ರಣಚಂಡಿ'ಯಾಗಿ ನಟಿ ರಾಗಿಣಿ ಅವರು ಅಂಬರೀಶ್ ಅವರ ಫೈಟ್ ಅನ್ನು ಮೀರಿಸುವಂತೆ ಪೈಟ್ ಮಾಡಿ 'ಲೇಡಿ ಅಂಬರೀಶ್' ಎಂದು ಹೊಸ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ. ರಾಗಿಣಿ ಅವರ ಫೈಟ್ ನೋಡಲು ಈ ಟ್ರೈಲರ್ ಝಲಕ್ ನೋಡಿ...

http://photos.filmibeat.com/kannada-events/veera-ranachandi-teaser-launch-pressmeet/photos-c24-e56442-p655795.html
English summary
Kannada Movie 'Veera Ranachandi' Trailor released. On this occasion, Kannada Actress Ragini Dwivedi has got new title 'Lady Ambareesh' from 'Veera Ranachandi' movie team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada