»   » 5 ಎಕರೆ ಹೊಲ ಇರುವ ಅಭಿಮಾನಿ ಲಕ್ಷ್ಮಿ ರೈಗೆ ಮದುವೆ ಆಗು ಅಂದ

5 ಎಕರೆ ಹೊಲ ಇರುವ ಅಭಿಮಾನಿ ಲಕ್ಷ್ಮಿ ರೈಗೆ ಮದುವೆ ಆಗು ಅಂದ

Posted By:
Subscribe to Filmibeat Kannada
5 ಎಕರೆ ಹೊಲ ಇರುವ ಅಭಿಮಾನಿ ಲಕ್ಷ್ಮಿ ರೈಗೆ ಮದುವೆ ಆಗು ಅಂದ | Filmibeat Kannada

ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾ ತಾರೆಯರು ನೇರವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಅನೇಕ ಸ್ಟಾರ್ ಗಳು ಟ್ವಿಟ್ಟರ್ ನಲ್ಲಿ ಸಕ್ರೀಯರಾಗಿದ್ದು ಅದರ ಮೂಲಕ ಅಭಿಮಾನಿಗಳ ಜೊತೆಗೆ ಅನೇಕ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆದರೆ ಇದೇ ಅಭಿಮಾನಿಗಳು ಕೆಲವೊಮ್ಮೆ ತಮ್ಮ ಸ್ಟಾರ್ ಜೊತೆಗೆ ಏನಾದರೂ ಮಾತನಾಡಿ ಬಿಡುತ್ತಾರೆ.

ಸದ್ಯ ನಟಿ ಲಕ್ಷ್ಮಿ ರೈಗೆ ಇದೀಗ ಅಂತಹ ಪರಿಸ್ಥಿತಿ ಎದುರಾಗಿದೆ. ಅವರ ಅಭಿಮಾನಿಯೊಬ್ಬ ಟ್ವಿಟ್ಟರ್ ಖಾತೆಯ ಮೂಲಕ ಮದುವೆ ಪ್ರಪೊಸಲ್ ಅನ್ನು ಅವರ ಮುಂದೆ ಇಟ್ಟಿದ್ದಾನೆ. ''ನೀವು ನನ್ನನ್ನು ಮದುವೆ ಆಗುತ್ತೀರಾ?, ನನ್ನ ಹತ್ತಿರ ಐದು ಎಕರೆ ಹೊಲ ಇದೆ. ಒಂದು ಸುಂದರ ಮನೆ ಮತ್ತು ಒಂದು ಸ್ಕೂಟರ್ ಇದೆ, ಜೊತೆಗೆ ನನ್ನ ಆಗಾದ ಪ್ರೀತಿ ಇದೆ'' ಎಂದು ಟ್ವೀಟ್ ಮಾಡಿದ್ದಾನೆ. ಅಭಿಮಾನಿಯ ಈ ಪ್ರಶ್ನೆಗೆ ಲಕ್ಷ್ಮಿ ರೈ ನಗುತ್ತಾ ಸಮಾಧಾನದಿಂದ ಉತ್ತರ ನೀಡಿದ್ದಾರೆ.

Lakshmi Rai got a marriage proposal from her fan

''ನಿಮ್ಮ ಪ್ರಪೊಸಲ್ ಗೆ ಥ್ಯಾಂಕ್ಯು. ಆದರೆ ನನಗೆ ಈಗ ಮದುವೆಯಾಗುವ ಯಾವುದೇ ಪ್ಲಾನ್ ಇಲ್ಲ. ನಿಮ್ಮ ಜೀವನಕ್ಕೆ ಒಳ್ಳೆಯ ಸುಂದರ ಹುಡುಗಿ ಸಿಗಲಿ ಎಂದು ಶುಭ ಆರೈಸುತ್ತೇನೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನೆ ಇರದ ಆ ಫ್ಯಾನ್ ಮದುವೆ ಆಗಲು ಆಫರ್ ನೀಡಿದಕ್ಕೆ ಕಾರಣ ಸಹ ಹೇಳಿದ್ದಾನೆ. ''ನಮ್ಮ ತಾಯಿ ಮತ್ತು ನಿಮ್ಮ ತಾಯಿಯ ಹೆಸರು ಒಂದೇ ಇದೆ ಅದಕ್ಕೆ ನಾನು ನಿಮಗೆ ಪ್ರಪೊಸ್ ಮಾಡಿದ್ದು'' ಎಂದು ಹೇಳಿ ಸಮಜಾಯಿಷಿ ನೀಡಿದ್ದಾನೆ. ಅಭಿಮಾನಿಯ ಟ್ವೀಟ್ ಗೆ ಲಕ್ಷ್ಮಿ ಹಾಸ್ಯಮಯವಾಗಿ ಉತ್ತರಿಸಿದ್ದಾರೆ.

ಅಂದಹಾಗೆ, ಸೌತ್ ಸಿನಿರಂಗದಲ್ಲಿ ಸ್ಟಾರ್ ಆಗಿದ್ದ ಲಕ್ಷ್ಮಿ ರೈ 'ಜೂಲಿ 2' ಸಿನಿಮಾ ಮೂಲಕ ಕಳೆದ ವರ್ಷ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ನಂತರ ಮತ್ತೆ ಇದೀಗ ತಮಿಳು ಹಾಗೂ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಟನೆಯ 'ಕಲ್ಪನ' ಸಿನಿಮಾದಲ್ಲಿ ಕೂಡ ನಟಿ ಲಕ್ಷ್ಮಿ ರೈ ಅಭಿನಯಿಸಿದ್ದರು.

English summary
Actress Lakshmi Rai got a marriage proposal from her fan in twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X