»   » ದಯಾಮರಣದ ಬಗ್ಗೆ ಲಂಬಾಣಿ ಚಿತ್ರ 'ಆಂಸು'

ದಯಾಮರಣದ ಬಗ್ಗೆ ಲಂಬಾಣಿ ಚಿತ್ರ 'ಆಂಸು'

Posted By:
Subscribe to Filmibeat Kannada

'ದಯಾಮರಣ' ಈಗ ಪ್ರಪಂಚದಾದ್ಯಂತ ಬಹು ಚರ್ಚಿತವಾಗುತ್ತಿರುವ ವಿಷಯ. ಇದೇ ಅಂಶವನ್ನಿಟ್ಟುಕೊಂಡು ಈಗ ಲಂಬಾಣಿ ಭಾಷೆಯಲ್ಲಿ 'ಆಂಸು' (ಕಣ್ಣೀರು) ಎಂಬ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ.

ಈ ಹಿಂದೆ ಓಂ ಪ್ರಕಾಶ್ ನಾಯಕ್ ಆಗಿ ಹಲವಾರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದ ಪ್ರಕಾಶ್ ಕುಮಾರ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ತನ್ನ ಅಂತಿಮ ದಿನಗಳನ್ನು ಎದುರು ನೋಡುತ್ತಿರುವ ವೃದ್ಧ ತಂದೆಯ ನೋವು ವೇದನೆಯನ್ನು ನೋಡಲಾಗದೆ ತಳಮಳಿಸುವ ಮಗನ ಪಾತ್ರವನ್ನು ಪ್ರಕಾಶ್ ಕುಮಾರ್ ನಿರ್ವಹಿಸಿದ್ದಾರೆ. [ಓಂ 'ಢಿಶುಂ ಢಿಶುಂ' ತಪ್ಪು ಮಾಡಿದ್ರೆ ಹೊಡೀತೀನಿ]

Lambani movie 'Aamsu' based on euthanasia

ಹಿರಿಯ ವಿತರಕ 82 ವರ್ಷದ ಶಾಂತಾರಾಂ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಗಂಗಾವತಿ ಜಿಲ್ಲೆಯ ಚಿರ್ಚಿನಗುಡ್ಡ ತಾಂಡಾವೊಂದರಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.

ಮಹದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಟಿ.ಲಲಿತಾ ನಾಯಕ್ ಅರ್ಪಿಸುವ ಈ ಚಿತ್ರಕ್ಕೆ ತರ್ಜುನ್, ಪ್ರಕಾಶ್ ಕುಮಾರ್, ಛಾಯಾಗ್ರಹಣ, ಕ್ರೇಜಿಬಾಯ್ಸ್ ತಂಡದ ಸಂಗೀತ ಸಂಯೋಜನೆ, ಶಿವಕುಮಾರ್ ಸ್ವಾಮಿ ಸಂಕಲನವಿದೆ.

ಪ್ರಕಾಶ್ ಕುಮಾರ್, ಜ್ಯೋತಿ, ಶಾಂತರಾಂ, ಶಿವಕುಮಾರ್, ಸಂತೋಷ್ ಮೇದಪ್ಪ, ರೂಪಸಿಂಗ್ ಬಿಜಾಪುರ, ಮೋಹನ್, ಮಾ. ಅಬ್ದುಲ್ ತಾರಾಬಳಗದಲ್ಲಿದ್ದಾರೆ. ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
A Lambani movie titled as 'Aamsu' (tears) based on euthanasia. The film being directed by Prakash Kumar (Om Prakash Niak). BT Lalith Naik presenting the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada