For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಯ ಸನಿಹದಲ್ಲಿ '99' ಚಿತ್ರಕ್ಕೆ ಎದುರಾಯ್ತು ಸಂಕಷ್ಟ

  |

  Recommended Video

  99 kannada movie : ಕೋರ್ಟ್ ಮೆಟ್ಟಿಲೇರಿದ ಗಣೇಶ್ ಸಿನಿಮಾ..! | Filmibeat Kannada

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಮೇ1 ಕಾರ್ಮಿಕರ ದಿನದಂದು ಚಿತ್ರಮಂದಿರಕ್ಕೆ ಎಂಟ್ರಿಯಾಗುತ್ತಿದೆ. ಹೀಗಿರುವಾಗ ಹರೀಶ್ ಕುಮಾರ್ ವ್ಯಕ್ತಿ ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ.

  ಚಿತ್ರದ ನಿರ್ಮಾಪಕ ತನ್ನ ಬಳಿ ಸಾಲ ಪಡೆದಿದ್ದು ಹಿಂತಿರುಗಿಸಿಲ್ಲ. ಹಾಗಾಗಿ, ಅವರ ಸಿನಿಮಾ ರಿಲೀಸ್ ಗೆ ತಡೆ ನೀಡಬೇಕೆಂದು ಕೆಳಹಂತದ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

  ಪ್ರಕರಣ ಕೈಗೆತ್ತಿಕೊಂಡ ಕೋರ್ಟ್ ಚಿತ್ರಕ್ಕೆ ತಡೆ ನೀಡಲು ನಿರಾಕರಿಸಿದೆ. ಆದ್ರೆ, ನಿರ್ಮಾಪಕ ರಾಮು ಅವರಿಗೆ ತುರ್ತು ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಸಂಬಂಧ ನಾಳೆ ಮತ್ತೆ ವಿಚಾರಣೆ ನಡೆಯಲಿದೆ.

  'ಅಣ್ಣಾಬಾಂಡ್' ಆದ್ಮೇಲೆ '99' ಚಿತ್ರದಿಂದ ಅಪರೂಪದ ಬಿಡುಗಡೆ 'ಅಣ್ಣಾಬಾಂಡ್' ಆದ್ಮೇಲೆ '99' ಚಿತ್ರದಿಂದ ಅಪರೂಪದ ಬಿಡುಗಡೆ

  ಗಂಗಾ ಸಿನಿಮಾ ಮಾಡಬೇಕಾದರೇ, ಲಕ್ಷ್ಮಿ ಫೈನಾನ್ಸ, ಪಲ್ಲವಿ ಚಿತ್ರಮಂದಿರದ ಮಾಲೀಕರಾದ ಹರೀಶ್ ಕುಮಾರ್ ಅವರಿಂದ 65 ಲಕ್ಷ ಸಾಲ ಪಡೆದಿದ್ದರಂತೆ. ಈ ಸಾಲವನ್ನ ಮರುಪಾವತಿ ಮಾಡಿಲ್ಲ ಎಂದು ಆರೋಪ ಈಗ ಕೇಳಿಬಂದಿದೆ.

  ಅಂದ್ಹಾಗೆ, 2015ರಲ್ಲಿ ತೆರೆಕಂಡಿದ್ದ ಗಂಗಾ ಚಿತ್ರವನ್ನ ರಾಮು ನಿರ್ಮಿಸಿದ್ದರು. ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರವನ್ನ ಸಾಯಿ ಪ್ರಕಾಶ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಅಭಿನಯಕ್ಕೆ ಮಾಲಾಶ್ರೀ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು.

  Legal problem for 99 movie release

  99 ಟ್ರೈಲರ್: ಭಾವನಾತ್ಮಕವಾಗಿ ಕಟ್ಟಿಹಾಕುವ ರಾಮ್-ಜಾನು 99 ಟ್ರೈಲರ್: ಭಾವನಾತ್ಮಕವಾಗಿ ಕಟ್ಟಿಹಾಕುವ ರಾಮ್-ಜಾನು

  ಇನ್ನು 99 ಸಿನಿಮಾ ತಮಿಳಿನ 96 ಚಿತ್ರದ ರೀಮೇಕ್. ಪ್ರೀತಂ ಗುಬ್ಬಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಮು ನಿರ್ಮಿಸಿದ್ದಾರೆ. ಗಣೇಶ್, ಭಾವನಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅರ್ಜುನ್ ಜನ್ಯ ಅವರಿಗೆ ಇದು 100ನೇ ಚಿತ್ರವಾಗಿದೆ.

  English summary
  Golden star ganesh starrer 99 movie releasing on may 1st. but, now this movie facing Legal problem for release. the movie produced by Ramu.
  Monday, April 29, 2019, 19:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X