For Quick Alerts
  ALLOW NOTIFICATIONS  
  For Daily Alerts

  ಹೊಸ ಚಿತ್ರಕ್ಕಾಗಿ ಹೊಸ ಅಭಿಯಾನ ಶುರು ಮಾಡಿದ ಪ್ರೇಮ್

  By Pavithra
  |

  ನೆನಪಿರಲಿ ಪ್ರೇಮ್, ಪ್ರಜ್ವಲ್ ಹಾಗೂ ಹರಿಪ್ರಿಯಾ ಅಭಿನಯದ "ಲೈಫ್ ಜೊತೆ ಒಂದ್ ಸೆಲ್ಫಿ" ಸಿನಿಮಾ ತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಆಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಚಿತ್ರಕ್ಕೆ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದು ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಸಿನಿಮಾಗಾಗಿ ಹೊಸ ಅಭಿಯಾನ ಆರಂಭಿಸಿದ್ದಾರೆ.

  "ಲೈಫ್ ಜೊತೆ ಒಂದ್ ಸೆಲ್ಫಿ" ಸಿನಿಮಾ ಟೈಟಲ್ ಹೇಳುವಂತೆ ನಿಮ್ಮ ಲೈಫ್ ನ ಬೆಸ್ಟ್ ಸೆಲ್ಫಿಯನ್ನು ತೆಗೆದುಕೊಂಡು 9743873656 ಈ ನಂಬರ್ ಗೆ ವಾಟ್ಸಪ್ ಮಾಡಬೇಕು. ಕಳಿಸಿದ ಬೆಸ್ಟ್ ಸೆಲ್ಫಿಗೆ"ಲೈಫ್ ಜೊತೆ ಒಂದ್ ಸೆಲ್ಫಿ" ಚಿತ್ರತಂಡದ ಜೊತೆ ಡಿನ್ನರ್ ಮಾಡುವ ಅವಕಾಶವನ್ನು ಸಿನಿಮಾತಂಡ ಮಾಡಿಕೊಡುತ್ತಿದೆ.

  ಹಾಗೆ "ಲೈಫ್ ಜೊತೆ ಒಂದ್ ಸೆಲ್ಫಿ" ಫೇಸ್ಬುಕ್ ಪೇಜಿಗೆ ಟ್ಯಾಗ್ ಮಾಡಬೇಕು. ಮೊಟ್ಟ ಮೊದಲ ಸೆಲ್ಪಿಯನ್ನು ನಟ ಪ್ರೇಮ್ ಮಾಡಿದ್ದು ಈ ಮೂಲಕ ಅಭಿಮಾನಿಗಳಿಗೂ ಹೊಸ ರೀತಿಯ ಸಿನಿಮಾ ಪ್ರಚಾರದ ಅಭಿಯಾನಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.

  "ಲೈಫ್ ಜೊತೆ ಒಂದ್ ಸೆಲ್ಫಿ" ದಿನಕರ್ ತೂಗುದೀಪ ನಿರ್ದೇಶನದ ನಾಲ್ಕನೇ ಸಿನಿಮಾ. ದಿನಕರ್ ಅವರ ಪತ್ನಿ ಮಾನಸ ಬರೆದಿರುವ ಕಥೆಯನ್ನು ಆಧರಿಸಿ ಸಿನಿಮಾವೇ 'ಲೈಫ್ ಜೊತೆ ಒಂದ್ ಸೆಲ್ಫಿ' ಉದ್ಯಮಿ ಸಮೃದ್ಧಿ ಮಂಜುನಾಥ್ ಅವರ ವಿರಾಟ್ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತಿದ್ದು ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

  English summary
  Kannada 'Life jothe ondu Selfie' movie promotion campaign is doing differently. Prem, Prajwal and Haripriya have acted in the 'Life jothe ondu Selfie' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X