For Quick Alerts
  ALLOW NOTIFICATIONS  
  For Daily Alerts

  ರಾಕ್ ಲೈನ್ ಬ್ಯಾನರಡಿಯಲಿ ಬಂದ ಹಿಟ್ ಚಿತ್ರಗಳು

  |

  ವೆಂಕಟೇಶ್ ಆಲಿಯಾಸ್ ರಾಕ್ ಲೈನ್ ವೆಂಕಟೇಶ್ ಕನ್ನಡದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. ಇದುವರೆಗೆ ಸುಮಾರು 25 ಚಿತ್ರಗಳನ್ನು ನಿರ್ಮಿಸಿರುವ ರಾಕ್ ಲೈನ್ ವೆಂಕಟೇಶ್ 1996ರಲ್ಲಿ ರಾಕ್ ಲೈನ್ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟು ಹಾಕಿದರು.

  ಮೊದಲು ಆಯುಧ ಎನ್ನುವ ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದ ವೆಂಕಟೇಶ್ ಆ ಚಿತ್ರಕ್ಕೆ ಡಿಸ್ಟ್ರಿಬ್ಯೂಟರ್ ಕೂಡಾ ಆಗಿದ್ದರು. 1997ರಲ್ಲಿ ಅಗ್ನಿ ಐಪಿಎಸ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾದ ವೆಂಕಟೇಶ್ ಉತ್ತಮ ನಟ ಕೂಡಾ.

  ಡಾ.ವಿಷ್ಣುವರ್ಧನ್, ಡಾ.ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ದರ್ಶನ್ ಮುಂತಾದ ಪ್ರಮುಖರನ್ನು ಹಾಕಿಕೊಂಡು ಚಿತ್ರ ನಿರ್ಮಿಸಿದ್ದರು.

  ಲಾಲಿ, ಕುರುಬನ ರಾಣಿ, ಯಾರೇ ನೀ ಚೆಲುವೆ, ನಾನು ನನ್ನ ಹೆಂಡ್ತೀರು, ಕೃಷ್ಣಲೀಲೆ, ಜೋಡಿ, ಉಸಿರೇ, ನಾಗರಹಾವು, ವರ್ಷಾ, ಸಿರಿವಂತ, ಬೊಂಬಾಟ್ ಮುಂತಾದ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ.

  ವಿಕ್ರಂ, ಆಸಿನ್, ವಡಿವೇಲು ಮುಂತಾದ ಬಹುತಾರಾಗಣದ 'ಮಜಾ' ಎನ್ನುವ ತಮಿಳು ಚಿತ್ರವನ್ನೂ ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದರು. ಆದರೆ ಆ ಚಿತ್ರ ದಯನೀಯ ಸೋಲು ಅನುಭವಿಸಿತ್ತು.

  ರಾಕ್ಲೈನ್ ಪ್ರೊಡಕ್ಷನ್ ಬ್ಯಾನರಡಿಯಲಿ ಬಂದ ಸೂಪರ್ ಹಿಟ್ ಚಿತ್ರಗಳು.

  ಪ್ರೀತ್ಸೆ

  ಪ್ರೀತ್ಸೆ

  ಬಿಡುಗಡೆಯಾದ ವರ್ಷ: 2000
  ನಿರ್ದೇಶನ: ಡಿ ರಾಜೇಂದ್ರ ಬಾಬು
  ತಾರಾಗಣದಲ್ಲಿ : ಶಿವರಾಜ್ ಕುಮಾರ್, ಉಪೇಂದ್ರ, ಸೋನಾಲಿ ಬೇಂದ್ರ
  ಸಂಗೀತ: ಹಂಸಲೇಖ

  ಪ್ರೀತ್ಸೋದು ತಪ್ಪಾ

  ಪ್ರೀತ್ಸೋದು ತಪ್ಪಾ

  ಬಿಡುಗಡೆಯಾದ ವರ್ಷ: 2000
  ನಿರ್ದೇಶನ: ವಿ ರವಿಚಂದ್ರನ್
  ತಾರಾಗಣದಲ್ಲಿ : ವಿ ರವಿಚಂದ್ರನ್, ಶಿಲ್ಪಾ ಶೆಟ್ಟಿ, ಪ್ರಕಾಶ್ ರೈ, ವಿನಯಾ ಪ್ರಸಾದ್
  ಸಂಗೀತ: ಹಂಸಲೇಖ

  ದಿಗ್ಗಜರು

  ದಿಗ್ಗಜರು

  ಬಿಡುಗಡೆಯಾದ ವರ್ಷ: 2001
  ನಿರ್ದೇಶನ: ಡಿ ರಾಜೇಂದ್ರ ಬಾಬು
  ತಾರಾಗಣದಲ್ಲಿ : ಡಾ. ವಿಷ್ಣುವರ್ಧ, ಡಾ. ಅಂಬರೀಶ್, ಲಕ್ಷ್ಮಿ, ಸಾಂಘ್ವಿ
  ಸಂಗೀತ: ಹಂಸಲೇಖ

  ಡಕೋಟ ಎಕ್ಸ್ ಪ್ರೆಸ್

  ಡಕೋಟ ಎಕ್ಸ್ ಪ್ರೆಸ್

  ಬಿಡುಗಡೆಯಾದ ವರ್ಷ: 2002
  ನಿರ್ದೇಶನ: ಎಂ ಎಸ್ ರಾಜಶೇಖರ್
  ತಾರಾಗಣದಲ್ಲಿ : ರಾಕ್ಲೈನ್ ವೆಂಕಟೇಶ್, ಓಂ ಪ್ರಕಾಶ್ ರಾವ್, ಅಮೃತಾ
  ಸಂಗೀತ: ಹಂಸಲೇಖ

  ಮೌರ್ಯ

  ಮೌರ್ಯ

  ಬಿಡುಗಡೆಯಾದ ವರ್ಷ: 2004
  ನಿರ್ದೇಶನ: ಎಸ್ ನಾರಾಯಣ್
  ತಾರಾಗಣದಲ್ಲಿ : ಪುನೀತ್ ರಾಜಕುಮಾರ್, ಮೀರಾ ಜಾಸ್ಮಿನ್, ರೋಜಾ, ದೇವರಾಜ್
  ಸಂಗೀತ: ಗುರುಕಿರಣ್

  ಅಜಯ್

  ಅಜಯ್

  ಬಿಡುಗಡೆಯಾದ ವರ್ಷ: 2006
  ನಿರ್ದೇಶನ: ಮೆಹರ್ ರಮೇಶ್
  ತಾರಾಗಣದಲ್ಲಿ : ಪುನೀತ್ ರಾಜಕುಮಾರ್, ಅನುರಧಾ ಮೆಹ್ತಾ, ಪ್ರಕಾಶ್ ರೈ, ಶ್ರೀನಾಥ್
  ಸಂಗೀತ: ಮಣಿ ಶರ್ಮಾ

  ಜಂಗ್ಲಿ

  ಜಂಗ್ಲಿ

  ಬಿಡುಗಡೆಯಾದ ವರ್ಷ: 2009
  ನಿರ್ದೇಶನ: ದುನಿಯಾ ಸೂರಿ
  ತಾರಾಗಣದಲ್ಲಿ : ದುನಿಯಾ ವಿಜಯ್, ಐಂದ್ರಿತಾ ರೇ, ಆದಿ ಲೋಕೇಶ್, ರಂಗಾಯಣ ರಘು
  ಸಂಗೀತ: ವಿ ಹರಿಕೃಷ್ಣ

  ಮನಸಾರೆ

  ಮನಸಾರೆ

  ಬಿಡುಗಡೆಯಾದ ವರ್ಷ: 2009
  ನಿರ್ದೇಶನ: ಯೋಗರಾಜ್ ಭಟ್
  ತಾರಾಗಣದಲ್ಲಿ : ದಿಗಂತ್, ಐಂದ್ರಿತಾ ರೇ, ರಾಜು ತಾಳಿಕೋಟೆ
  ಸಂಗೀತ: ಮನೋಮೂರ್ತಿ

  ಸೂಪರ್

  ಸೂಪರ್

  ಬಿಡುಗಡೆಯಾದ ವರ್ಷ: 2010
  ನಿರ್ದೇಶನ: ಉಪೇಂದ್ರ
  ತಾರಾಗಣದಲ್ಲಿ : ಉಪೇಂದ್ರ, ನಯನ್ ತಾರಾ, ಸಾಧು ಕೋಕಿಲಾ, ತುಲಿಪ್ ಜೋಶಿ, ರಾಕ್ಲೈನ್ ವೆಂಕಟೇಶ್
  ಸಂಗೀತ: ವಿ ಹರಿಕೃಷ್ಣ

  English summary
  List of Super Hit movies from Rockline Venkatesh owned Rockline Productions. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X