For Quick Alerts
    ALLOW NOTIFICATIONS  
    For Daily Alerts

    ಆರಂಭದಲ್ಲಿ ಗೆದ್ದು ನಂತರದ ದಿನಗಳಲ್ಲಿ ಮುಗ್ಗರಿಸಿದ ಕನ್ನಡದ 7 ನಟಿಯರಿವರು!

    |

    ಈಗಿನ ಭಾರತ ಚಿತ್ರರಂಗದಲ್ಲಿ ಕನ್ನಡದ ನಟಿಯರು ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಹೌದು, ಕರ್ನಾಟಕ ಮೂಲದ ನಟಿಯರು ತೆಲುಗು ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ಪರಭಾಷೆಗೆ ಹಾರಿದರೆ ಕೆಲ ನಟಿಯರು ಕನ್ನಡ ಚಿತ್ರಗಳನ್ನು ಮಾಡಿ ನಂತರ ಪರಭಾಷೆಗಳಿಗೆ ಆಯ್ಕೆಗೊಂಡಿದ್ದಾರೆ.

    ಹೀಗೆ ಸಕ್ಸಸ್‌ಫುಲ್ ನಟಿಯರನ್ನು ನೀಡಿರುವ ಕನ್ನಡ ಚಿತ್ರರಂಗದಲ್ಲಿ ಈ ಹಿಂದಿನಿಂದಲೂ ಸ್ಟಾರ್ ನಟಿ ಪಟ್ಟಕ್ಕಾಗಿ ಪೈಪೋಟಿ ಇದ್ದೇ ಇದೆ. ಪರಭಾಷಾ ನಟಿಯರನ್ನು ಕರೆತಂದು ಚಿತ್ರ ಮಾಡಲಾಗುವ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗುವ ಮಟ್ಟಕ್ಕೆ ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ಇತ್ತೀಚೆಗೆ ರಚಿತಾ ರಾಮ್ ಈ ಹಾದಿಯಲ್ಲಿ ಯಶಸ್ವಿಯಾಗಿದ್ದು ಈ ಹಿಂದೆ ರಾಧಿಕಾ ಪಂಡಿತ್, ರಮ್ಯಾ, ರಕ್ಷಿತ ರೀತಿಯ ನಟಿಯರು ಕನ್ನಡ ಚಿತ್ರರಂಗದ ಸ್ಟಾರ್ ನಟಿಯರು ಎನಿಸಿಕೊಂಡಿದ್ದರು.

    ಆರಂಭದಲ್ಲಿ ಗೆದ್ದರೂ ನಂತರ ಸಕ್ಸಸ್ ಕಾಣುವಲ್ಲಿ ಸೋತ ಕನ್ನಡದ ಆರು ನಟರಿವರು!ಆರಂಭದಲ್ಲಿ ಗೆದ್ದರೂ ನಂತರ ಸಕ್ಸಸ್ ಕಾಣುವಲ್ಲಿ ಸೋತ ಕನ್ನಡದ ಆರು ನಟರಿವರು!

    ಇನ್ನೂ ಕೆಲ ನಟಿಯರು ಈ ಮೇಲ್ಕಂಡ ನಟಿಯರ ರೀತಿಯೇ ಆರಂಭದಲ್ಲೇ ಯಶಸ್ಸು ಸಾಧಿಸಿ ನಂತರದ ದಿನಗಳಲ್ಲಿ ತೆರೆಮರೆಗೆ ಸರಿದಿದ್ದಾರೆ. ಹೌದು, ಭರ್ಜರಿ ಆರಂಭ ಪಡೆದುಕೊಂಡು ಈಕೆ ಮುಂದೊಂದು ದಿನ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಟಿಯರ ಪಟ್ಟಿ ಸೇರಬಹುದು ಎನ್ನುವಂತಹ ಅಭಿಪ್ರಾಯ ಮೂಡಿಸಿದ್ದ ಹಲವು ನಟಿಯರು ವಿವಿಧ ಕಾರಣಗಳಿಂದ ಆ ಘಟ್ಟ ತಲುಪುವಲ್ಲಿ ವಿಫಲರಾಗಿದ್ದಾರೆ. ಅಂತಹ ನಟಿಯರ ಪಟ್ಟಿ ಇಲ್ಲಿದೆ..

    ದೀಪಾ ಸನ್ನಿಧಿ

    ದೀಪಾ ಸನ್ನಿಧಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಾರಥಿ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ದೀಪಾ ಸನ್ನಿಧಿ ಅದೇ ವರ್ಷ ಪುನೀತ್ ರಾಜ್‌ಕುಮಾರ್ ಜತೆಗೆ ಪರಮಾತ್ಮ ಚಿತ್ರದಲ್ಲಿ ನಟಿಸಿದ್ದರು. ನಂತರ ಯಶ್, ಗಣೇಶ್ ರೀತಿಯ ಸ್ಟಾರ್ ನಟರ ಜತೆ ನಟಿಸಿದ ದೀಪಾ ಸನ್ನಿಧಿ ತಮಿಳಿನ ಎರಡು ಚಿತ್ರಗಳಲ್ಲಿಯೂ ಸಹ ನಟಿಸಿದರು. ನಂತರ ಚೌಕ ಹಾಗೂ ಚಕ್ರವರ್ತಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ ನಟಿ ದೀಪಾ ಸನ್ನಿಧಿ ಸದ್ಯ ಯಾವುದೇ ಚಿತ್ರಕ್ಕಾಗಿಯೂ ಕೆಲಸ ನಿರ್ವಹಿಸುತ್ತಿಲ್ಲ. ಒಟ್ಟಿನಲ್ಲಿ ಸಾರಥಿ ಹಾಗೂ ಪರಮಾತ್ಮ ಸಮಯದಲ್ಲಿ ಈ ನಟಿ ಕುರಿತು ಹುಟ್ಟಿಕೊಂಡಿದ್ದ ನಿರೀಕ್ಷೆಗಳು ನಿಜವಾಗಲಿಲ್ಲ.

    ನಿಧಿ ಸುಬ್ಬಯ್ಯ

    ನಿಧಿ ಸುಬ್ಬಯ್ಯ

    ತನ್ನ ಆರಂಭದ ಚಿತ್ರಗಳಲ್ಲಿ ತನ್ನ ನಟನೆಯ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದ ನಟಿ ನಿಧಿ ಸುಬ್ಬಯ್ಯ ಬೇಡಿಕೆಯನ್ನೂ ಸಹ ಹುಟ್ಟುಹಾಕಿದ್ದರು. ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ ನಿಧಿ ಸುಬ್ಬಯ್ಯ ಬಾಲಿವುಡ್ ಚಿತ್ರರಂಗದಲ್ಲೂ ಕೆಲಸ ನಿರ್ವಹಿಸಿದ್ದರು. ಹೀಗೆ ಆರಂಭದ ದಿನಗಳಲ್ಲಿ ಒಂದೊಳ್ಳೆ ಯಶಸ್ಸನ್ನು ಸಾಧಿಸಿದ್ದ ನಟಿ ನಿಧಿ ಸುಬ್ಬಯ್ಯ ನಂತರ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳದೇ ತೆರೆಮರೆಗೆ ಸರಿದರು.

    ಶರ್ಮಿಳಾ ಮಾಂಡ್ರೆ

    ಶರ್ಮಿಳಾ ಮಾಂಡ್ರೆ

    ದೀಪಾ ಸನ್ನಿಧಿ ರೀತಿಯೇ ಕನ್ನಡದ ಸ್ಟಾರ್ ನಟಿಯರ ಪಟ್ಟಿ ಸೇರಲಿದ್ದಾರೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿ ವಿಫಲರಾದವರಲ್ಲಿ ಶರ್ಮಿಳಾ ಮಾಂಡ್ರೆ ಕೂಡ ಓರ್ವರು. ಆರಂಭದಲ್ಲಿ ಒಳ್ಳೆಯ ಹೈಪ್ ಪಡೆದುಕೊಂಡಿದ್ದ ಶರ್ಮಿಳಾ ಮಾಂಡ್ರೆ ನಂತರದಲ್ಲಿ ಹೆಚ್ಚೇನೂ ಹಿಟ್ ಆದಂತಹ ಚಿತ್ರಗಳಲ್ಲಿ ನಟಿಸಲಿಲ್ಲ. ಇನ್ನು ತೆಲುಗು ಹಾಗೂ ತಮಿಳು ಚಿತ್ರರಂಕ್ಕೂ ಕಾಲಿಟ್ಟ ನಟಿ ಶರ್ಮಿಳಾ ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಆಫರ್ ಪಡೆಯಲಿಲ್ಲ. ಇನ್ನು ಈ ವರ್ಷ ಗಾಳಿಪಟ 2 ಮೂಲಕ ಕಮ್‌ಬ್ಯಾಕ್ ಮಾಡಿರುವ ಶರ್ಮಿಳಾ ಮಾಂಡ್ರೆ ಇನ್ನೆರಡು ಚಿತ್ರಳಿಗೆ ಸಹಿ ಹಾಕಿದ್ದಾರೆ.

    ಪಾರುಲ್ ಯಾದವ್

    ಪಾರುಲ್ ಯಾದವ್

    ಹಲವು ಚಿತ್ರಗಳಲ್ಲಿ ನಟಿಸಿ ಸಕ್ಸಸ್ ಕಾಣದಿದ್ದ ನಟಿ ಪಾರುಲ್ ಯಾದವ್ ಕನ್ನಡದ ಗೋವಿಂದಾಯ ನಮಃ ಚಿತ್ರದ ಮೂಲಕ ಬ್ರೇಕ್ ಹಾಗೂ ಸಕ್ಸಸ್ ಪಡೆದರು. ನಂತರ ಸುದೀಪ್ ಅಭಿನಯದ ಬಚ್ಚನ್, ಉಪೇಂದ್ರ ಅಭಿನಯದ ಉಪ್ಪಿ 2 ಹಾಗೂ ಶಿವರಾಜ್‌ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರಗಳಲ್ಲಿ ನಟಿಸಿದ ಪಾರುಲ್ ನಂತರ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಹಾಗೂ ಸದ್ಯ ಯಾವ ಚಿತ್ರ ಕೂಡ ನಟಿಯ ಕೈನಲ್ಲಿಲ್ಲ.

    ಡೈಸಿ ಬೋಪಣ್ಣ

    ಡೈಸಿ ಬೋಪಣ್ಣ

    ರಾಮ ಶಾಮ ಭಾಮ ಹಾಗೂ ಗಾಳಿಪಟ ರೀತಿಯ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದ ನಟಿ ಡೈಸಿ ಬೋಪಣ್ಣ ನಂತರದ ದಿನಗಳಲ್ಲಿ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ತೀರಾ ಕಡಿಮೆ. ಹೀಗೆ ತೆರೆಮರೆಗೆ ಸರಿದ ಕೊಡಗಿನ ಚೆಲುವೆ ಕೈಯಲ್ಲಿ ಸದ್ಯ ಯಾವುದೇ ಚಿತ್ರಗಳಿಲ್ಲ.

    ಪೂಜಾ ಗಾಂಧಿ

    ಪೂಜಾ ಗಾಂಧಿ

    ಮುಂಗಾರು ಮಳೆ ರೀತಿಯ ಇಂಡಸ್ಟ್ರಿ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಪೂಜಾ ಗಾಂಧಿ ನಂತರ ಮಿಲನ, ಕೃಷ್ಣ ಹಾಗೂ ತಾಜ್‌ ಮಹಲ್ ರೀತಿಯ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಆದರೆ ಈ ಸ್ಟಾರ್‌ಡಂ ಹೆಚ್ಚು ದಿನ ಉಳಿಯಲಿಲ್ಲ. ಪೂಜಾ ಗಾಂಧಿ ನಟಿಸಿದ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದವು. ಹೀಗೆ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆ ಕಳೆದುಕೊಂಡ ನಟಿ ಪೂಜಾ ತೆರೆಮರೆಗೆ ಸರಿದಿದ್ದಾರೆ.

    ಶೃತಿ ಹರಿಹರನ್

    ಶೃತಿ ಹರಿಹರನ್

    ನಟಿ ಶೃತಿ ಹರಿಹರನ್ ತನ್ನ ಲುಕ್ ಮಾತ್ರವಲ್ಲದೇ ಅದ್ಭುತ ನಟನೆಯಿಂದ ಕೂಡ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದರು. ಬಹುಬೇಗನೆ ಫೇಮ್ ಪಡೆದುಕೊಂಡ ಈ ನಟಿ ವಿವಾದಗಳ ಕಾರಣದಿಂದಾಗಿ ಅಷ್ಟೇ ವೇಗವಾಗಿ ಫೇಮ್ ಹಾಗೂ ಅನುಯಾಯಿಗಳನ್ನೂ ಕಳೆದುಕೊಂಡರು. ಇನ್ನು ಹೆಚ್ಚು ಆಫರ್ ಇಲ್ಲದ ಶೃತಿ ಹರಿಹರನ್ ಈಗ ಹೆಡ್ ಬುಷ್ ಮೂಲಕ ಮರಳಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಮೊದಲಿದ್ದ ಕ್ರೇಜ್ ಈಗಿಲ್ಲ.

    English summary
    List of Kannada actresses who failed to carry their initial success forward. Take a look
    Tuesday, November 22, 2022, 12:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X