»   » ಲೂಸ್ ಮಾದ ಸ್ಯಾಂಡಲ್ ವುಡ್ ನ ಉಸೈನ್ ಬೋಲ್ಟ್

ಲೂಸ್ ಮಾದ ಸ್ಯಾಂಡಲ್ ವುಡ್ ನ ಉಸೈನ್ ಬೋಲ್ಟ್

By: ಜೀವನರಸಿಕ
Subscribe to Filmibeat Kannada

ಲೂಸ್ ಮಾದ ಭರ್ಜರಿ ಡಾನ್ಸರ್, ಉದ್ದ ಕಾಲುಗಳ ಯೋಗಿ ಯಾವುದಾದರೂ ಅಥ್ಲೆಟಿಕ್ಸ್ ನಲ್ಲಿ ಗೆದ್ದರಾ ಅನ್ನೋ ಅನುಮಾನ ನಿಮಗೆ ಒಮ್ಮೆಯಾದರೂ ಬಂದಿರುವ ಚಾನ್ಸ್ ಇರುತ್ತದೆ. ಆದರೆ ಇದು ಅಥ್ಲೆಟಿಕ್ಸ್ ವಿಷಯ ಅಲ್ಲ. ಸಿನಿಮಾ ಅನ್ನೋ ಅಥ್ಲೆಟಿಕ್ಸ್ ನ ವಿಷಯ.

ಇಲ್ಲಿ ಯೋಗಿ ಅತ್ಯಂತ ವೇಗವಾಗಿ 25 ಸಿನಿಮಾಗಳನ್ನ ಮುಗಿಸಿದ್ದಾರೆ. ಏಳು ವರ್ಷದಲ್ಲಿ ಯೋಗಿ 25 ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯೋಗಿ ಸ್ಯಾಂಡಲ್ ವುಡ್ ನಲ್ಲಿ ಏಳೇ ವರ್ಷಗಳಲ್ಲಿ ಕ್ವಾರ್ಟರ್ ಸೆಂಚುರಿ ಬಾರಿಸಿದ್ದಾರೆ. ಹೀರೋ ಆಗಿ ಫಾಸ್ಟೆಸ್ಟ್ ರನ್ನರ್ ಅನ್ನಿಸಿಕೊಳ್ತಿದ್ದಾರೆ. [ಕೋಲಾರದಲ್ಲಿ ಲೂಸ್ ಮಾದ ರೌಡೀಯಿಸಂ!]


ಹಿಂದಿನ ದಾಖಲೆಗಳು ಯಾವುದೇ ಇರಲಿ. ಆದರೆ ಸದ್ಯ ಯೋಗಿ ಕನ್ನಡದಲ್ಲಿ 25 ಸಿನಿಮಾಗಳನ್ನ ಅತ್ಯಂತ ವೇಗವಾಗಿ ಪೂರೈಸ್ತಿರೋ ನಟ. ಹಾಗೆ ನೋಡಿದರೆ ಲೂಸ್ ಮಾದ ಯೋಗಿಯ ಸಿನಿಮಾಗಳು ಭರ್ಜರಿ ಸಕ್ಸಸ್ ಪಡೆದುಕೊಳ್ಳುತ್ತಾ ಇವೆ ಈ ಕಾರಣಕ್ಕೇನೇ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ ಅನ್ಕೋಬೇಡಿ.

ಮಾಡಿರೋ 25 ಸಿನಿಮಾಗಳಲ್ಲಿ ಗೆದ್ದ ಸಿನಿಮಾಗಳು ಅಂತ ಅನ್ನಿಸಿಕೊಳ್ಳೋದು ಎರಡು, ತಪ್ಪಿದರೆ ಮೂರು ಸಿನಿಮಾಗಳು. ಆದರೆ ಯೋಗಿ ಸಿನಿಮಾಗಳು ಮಿನಿಮಮ್ ಗ್ಯಾರಂಟಿ ಅನ್ನೋ ಕಾರಣಕ್ಕೋ ಏನೋ ಹೊಸ ಪ್ರಾಜೆಕ್ಟ್ ಗಳು ಶುರುವಾಗ್ತಾನೇ ಇವೆ. ಇಷ್ಟಕ್ಕೂ ಪ್ರತೀಪಾತ್ರಕ್ಕೂ ಯೋಗಿ ತಾನು ಕೊಡ್ಬೇಕಾದ ಡೆಡಿಕೇಷನನ್ನ ಕೊಡ್ತಾನೇ ಇದ್ದಾರೆ. [ಚಿತ್ರಗಳಲ್ಲಿ: ಉಸೇನ್ ಬೋಲ್ಟ್ 'ಥಂಡರ್' ಓಟ]

ಹಾಗಾಗಿ ಇಲ್ಲಿ ಯೋಗಿಯನ್ನ ದೂರಿ ಪ್ರಯೋಜನವಿಲ್ಲ. ಅಂದಹಾಗೆ 'ಓಬೀರಾಯ' ಅನ್ನೋದು ಯೋಗಿಯವರ 25ನೇ ಸಿನಿಮಾ. ಯೋಗಿ ಹೀಗೇನೇ ಫಾಸ್ಟೆಸ್ಟ್ ಹಾಫ್ ಸೆಂಚುರಿ ಹೊಡೀಲಿ. ಆದರೆ ಸೆಂಚುರಿಲೀ ಸಿಕ್ಸರ್ ಗಳು ಜಾಸ್ತಿ ಇದ್ದರೇನೇ ಮಜ.

English summary
Loose Mada Yogesh has announced his next flick, which has been titled as Obiraya. Directed by Vivekananda, the film is all set to go on floors next month. This also marks Yogi's 25th flick.
Please Wait while comments are loading...