»   » ಗೆಳತಿ ಸಾಹಿತ್ಯ ಜೊತೆ ಹಸೆಮಣೆ ಏರಿದ ನಟ ಲೂಸ್ ಮಾದ ಯೋಗೀಶ್

ಗೆಳತಿ ಸಾಹಿತ್ಯ ಜೊತೆ ಹಸೆಮಣೆ ಏರಿದ ನಟ ಲೂಸ್ ಮಾದ ಯೋಗೀಶ್

Posted By:
Subscribe to Filmibeat Kannada
ಗೆಳತಿ ಸಾಹಿತ್ಯ ಜೊತೆ ಹಸೆಮಣೆ ಏರಿದ ನಟ ಲೂಸ್ ಮಾದ ಯೋಗೀಶ್ | Filmibeat Kannada

ಕನ್ನಡದ ನಟ ಲೂಸ್​ ಮಾದ ಯೋಗೀಶ್​ ಮತ್ತು ಸಾಹಿತ್ಯ ವಿವಾಹ ಇಂದು ನೆರವೇರಿದೆ. ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆಂಷನ್​ ಹಾಲ್​ನಲ್ಲಿ ಇಂದು (ಗುರುವಾರ) ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ಯೋಗಿ - ಸಾಹಿತ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯದಂತೆ ಯೋಗಿ ಮದುವೆ ನೆರವೇರಿತು. ಈ ಸಂದರ್ಭದಲ್ಲಿ ಯೋಗಿ ಮತ್ತು ಸಾಹಿತ್ಯ ಕುಟುಂಬದವರು ಮತ್ತು ಬಂಧು ಮಿತ್ರರು ಹಾಜರಿದ್ದರು. ಚಿತ್ರರಂಗದ ಕಡೆಯಿಂದ ನಟ ಶಿವರಾಜ್​ ಕುಮಾರ್​ ಮದುವೆಗೆ ಬಂದು ಹೊಸ ದಂಪತಿಗಳಿಗೆ ಶುಭ ಹಾರೈಸಿದರು.

Loose mada yogesh got married to sahithya

ಇನ್ನು ಯೋಗಿ ಸಾಹಿತ್ಯ ನಿಶ್ಚಿತಾರ್ಥ ಜೂನ್ 11ಕ್ಕೆ ನಡೆದಿತ್ತು. ಕಳೆದ 13 ವರ್ಷಗಳಿಂದ ಸ್ನೇಹಿತರಾಗಿರುವ ಇವರು ಮನೆಯವರ ಸಮ್ಮತಿಯ ಮೇರೆಗೆ ಮದುವೆ ಆಗಿದ್ದಾರೆ. ಮೂಲತಃ ಐಟಿ ಉದ್ಯೋಗಿ ಆಗಿರುವ ಸಾಹಿತ್ಯಗೆ ಸಿನಿಮಾರಂಗಕ್ಕೆ ನಂಟು ಇಲ್ಲವೇ ಇಲ್ಲ. ಯೋಗಿಯ ಜೀವದ ಗೆಳತಿಯಾಗಿದ್ದ ಈಕೆ ಈಗ ಜೀವನದ ಸಂಗಾತಿ ಆಗಿದ್ದಾರೆ.

English summary
Kannada Actor Lose mada yogesh got married to sahithya today (November 2) in konanakunte.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada