»   » ಹಿಟ್ ನಿರ್ದೇಶಕನ ಜೊತೆ ಲೂಸ್ ಮಾದ ಹೊಸ ಚಿತ್ರ

ಹಿಟ್ ನಿರ್ದೇಶಕನ ಜೊತೆ ಲೂಸ್ ಮಾದ ಹೊಸ ಚಿತ್ರ

Posted By:
Subscribe to Filmibeat Kannada
Loose Mada Yogesh
ಎಲ್ಲಾ 'ಕಾಲಯ ತಸ್ಮೈ ನಮಃ'. ಲೂಸ್ ಮಾದ ಯೋಗೇಶ್ ಚಿತ್ರಗಳು ಯಾಕೋ ಏನೋ ಬಾಕ್ಸಾಫೀಸಲ್ಲಿ ತಳಮಳ ಎನ್ನುತ್ತಿವೆ. ಈಗ ಅವರ 'ರಾಟೆ' ತಿರುಗಿಸಿ ಬಾಕ್ಸಾಫೀಸಲ್ಲಿ ಮೇಲಕ್ಕೆ ಬರುವ ಸಮಯ ಬಂದಿದೆ. ಇದಕ್ಕಾಗಿ ಅವರ ಅವರ ಜೊತೆ ಕೈಜೋಡಿಸುತ್ತಿದ್ದಾರೆ ಅಂಬಾರಿ ನಿರ್ದೇಶಕ ಅರ್ಜುನ್.

ಅಂಬಾರಿ, ಅದ್ದೂರಿಯಂತಹ ಹಿಟ್ ಚಿತ್ರಗಳನ್ನು ಕೊಟ್ಟಂತಹ ಎ.ಪಿ.ಅರ್ಜುನ್ ಈ ಬಾರಿ ತಮ್ಮ ಚಿತ್ರಕ್ಕೆ ಯೋಗೇಶ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಚಿತ್ರ ಮುಂಬರುವ ಡಿಸೆಂಬರ್ ನಲ್ಲಿ ಅವರು ಘೋಷಿಸಲಿದ್ದಾರಂತೆ. ಅಲ್ಲಿಯವರೆಗೂ ರಾಟೆ ಸಂಭಾಷಣೆ ಹೆಣೆಯಲಿ ಬಿಜಿಯಾಗಿರುತ್ತಾರೆ. ಏಕೆಂದರೆ ಈಗಾಗಲೆ ಕಥೆ, ಚಿತ್ರಕಥೆ ಸಿದ್ಧವಾಗಿದೆಯಂತೆ.

ರಾಟೆ ಹೆಸರು ಕೇಳಿದರೆ ಇದೊಂದು ಪಕ್ಕ ಮಾಸ್ ಚಿತ್ರ ಎಂದು ಮೇಲ್ಮೋಟಕ್ಕೆ ಗೊತ್ತಾಗುತ್ತದೆ. ಹಾಗಂತ ಇದು ಔಟ್ ಅಂಡ್ ಔಟ್ ಮಾಸ್ ಚಿತ್ರವಲ್ಲ. ಒಂಚೂರು ಸೆಂಟಿಮೆಂಟ್, ಲವ್ ಅಂಶಗಳೂ ಮಿಳಿತವಾಗಿರುತ್ತವೆ.

ಈಗಾಗಲೆ ಕಥೆ ಕೇಳಿರುವ ಯೋಗೇಶ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರಂತೆ. ಈ ಚಿತ್ರವನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ನಿರ್ಮಿಸುತ್ತಿದ್ದಾರೆ. ಸಂಗೀತ ಸಹ ಅವರದೇ. ನಾಯಕಿ ಸೇರಿದಂತೆ ಚಿತ್ರದ ಉಳಿದ ತಾರಾಬಳದ ಆಯ್ಕೆ ಪ್ರಗತಿಯಲ್ಲಿದೆ.

'ಅಂಬಾರಿ' ಚಿತ್ರದ ಬಳಿಕ 'ಅದ್ದೂರಿ' ಕೈಗೆತ್ತಿಕೊಳ್ಳಲು ಅರ್ಜುನ್ ಗೆ ಮೂರು ವರ್ಷ ಬೇಕಾಯಿತು. ಈಗ ಅದ್ದೂರಿ ಕೂಡ ಶತದಿನೋತ್ಸವ ಆಚರಿಸಿಕೊಂಡು ಮುನ್ನುಗ್ಗುತ್ತಿದೆ. ಈಗ ರಾಟೆ ಮೂಲಕ ಮತ್ತೊಮ್ಮೆ ಯೋಗಿ ಜೊತೆ ಕೈಜೋಡಿಸಿರುವುದು ಚಿತ್ರೋದ್ಯಮದಲ್ಲಿ ಕುತೂಹಲ ಮೂಡಿಸಿದೆ. (ಏಜೆನ್ಸೀಸ್)

English summary
Loose Mada Yogesh and Kannada films hit director AP Arjun joins hands again. Earlier the duo gives hit film Ambari. Now Arjun new film titled as Raate (means pulley).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada