»   » 'ದುನಿಯಾ-2' ಚಿತ್ರದಲ್ಲಿ ಇರಲಿದ್ದಾರೆ ಲೂಸ್ ಮಾದ ಯೋಗಿ.!

'ದುನಿಯಾ-2' ಚಿತ್ರದಲ್ಲಿ ಇರಲಿದ್ದಾರೆ ಲೂಸ್ ಮಾದ ಯೋಗಿ.!

Posted By:
Subscribe to Filmibeat Kannada

2007 ರಲ್ಲಿ ತೆರೆಕಂಡ 'ದುನಿಯಾ' ಸಿನಿಮಾ ಸ್ಯಾಂಡಲ್ ವುಡ್ ದುನಿಯಾದಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕ್ತು. ಇದೇ 'ದುನಿಯಾ' ಚಿತ್ರದಿಂದ ವಿಜಯ್ ಮತ್ತು ಯೋಗಿ 'ಸ್ಟಾರ್' ಪಟ್ಟಕ್ಕೇರಿದ್ರೆ, ಸೂರಿ 'ಸ್ಟಾರ್' ನಿರ್ದೇಶಕರಾದರು.

ಮೂವರಿಗೆ 'ಹೊಸ ಜೀವನ' ನೀಡಿದ 'ದುನಿಯಾ' ಬಗ್ಗೆ ನಾವು ಈಗ ಮಾತನಾಡುತ್ತಿರುವುದಕ್ಕೆ ಕಾರಣ 'ದುನಿಯಾ-2' ಸಿನಿಮಾ.

lose-mada-yogi-to-act-in-kannada-movie-duniya-2

ಸದ್ದಿಲ್ಲದ ಹಾಗೆ, 'ದುನಿಯಾ-2' ಚಿತ್ರದ ಪ್ರೀ-ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 'ದುನಿಯಾ' ಚಿತ್ರವನ್ನ ನಿರ್ಮಾಣ ಮಾಡಿದ್ದ ಯೋಗಿ ತಂದೆ ಟಿ.ಪಿ.ಸಿದ್ಧರಾಜು 'ದುನಿಯಾ-2' ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ.

ಹಾಗಾದ್ರೆ, ಈ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳ್ತಾರೆ, ದುನಿಯಾ ವಿಜಯ್ ಅಭಿನಯ ಇರಲಿದೆ ಅಂತ ಭಾವಿಸಬೇಡಿ. ಯಾಕಂದ್ರೆ, 'ದುನಿಯಾ' ಚಿತ್ರಕ್ಕೂ 'ದುನಿಯಾ-2' ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು 'ದುನಿಯಾ' ಚಿತ್ರದ ಮುಂದುವರಿದ ಭಾಗ ಕೂಡ ಅಲ್ಲ. ಪಕ್ಕಾ ಒರಿಜಿನಲ್ ಸಿನಿಮಾ. [ಲೂಸ್ ಮಾದ ಯೋಗಿಯ ಸಿನಿಪಯಣ ನಿಂತ ನೀರಾಗಿದ್ದೇಕೆ?]

ಹರಿ ಎಂಬುವವರು 'ದುನಿಯಾ-2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರೆ, ಬಿ.ಜೆ.ಭರತ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಪ್ರಮುಖ ಪಾತ್ರದಲ್ಲಿ 'ಲೂಸ್ ಮಾದ' ಯೋಗಿ ನಟಿಸಲಿದ್ದಾರೆ. [ಸೋಲಿನಿಂದ ಕಂಗೆಟ್ಟಿರುವ ಯೋಗಿಗೆ ಕೈ ಹಿಡಿಯುತ್ತಾನಾ 'ಕಾಲಭೈರವ'?]

ಸದ್ಯಕ್ಕೆ 'ದುನಿಯಾ-2' ಚಿತ್ರದ ಬಗ್ಗೆ ನಮಗೆ ಲಭ್ಯವಾಗಿರುವ ಮಾಹಿತಿ ಇಷ್ಟು. ಹೆಚ್ಚಿನ ಮಾಹಿತಿ ಸಿಕ್ಕ ತಕ್ಷಣ ನಿಮಗೆ ಅಪ್ ಡೇಟ್ ಮಾಡ್ತೀವಿ.

English summary
Kannada Movie 'Duniya-2' is all set to go on floors. Lose Mada Yogi is roped into play prominent role. Hari is directing the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada