»   » ಸತತ ಸೋಲಿನಿಂದ ಕಂಗೆಟ್ಟ ಯೋಗಿ ಕೈ ಹಿಡಿದ 'ಲೀಡರ್'.!

ಸತತ ಸೋಲಿನಿಂದ ಕಂಗೆಟ್ಟ ಯೋಗಿ ಕೈ ಹಿಡಿದ 'ಲೀಡರ್'.!

Posted By:
Subscribe to Filmibeat Kannada

ಗಾಂಧಿನಗರದ ತುಂಬೆಲ್ಲಾ 'ಅಲೆಮಾರಿ' ಆಗಿ ಅಲೆದಾಡಿದ ಮೇಲೆ 'ಲೂಸ್ ಮಾದ' ಯೋಗಿ 'ಜಿಂಕೆ ಮರಿ'ಗೆ 'ಡಾರ್ಲಿಂಗ್' ಅಂದರೂ ಅದೃಷ್ಟ ಖುಲಾಯಿಸಲಿಲ್ಲ. 'ಸಿದ್ಲಿಂಗು' ನಂತರ ಸೋಲೋ ಹೀರೋ ಆಗಿ ಒಂದೂ ಹಿಟ್ ಕೊಡಲಿಲ್ಲ. ಅಲ್ಲದೇ ಒಂದು ವರ್ಷದಿಂದ ಅವರು ತೆರೆ ಮೇಲೆ ಪತ್ತೆ ಆಗಿಲ್ಲ.

'ಕಾಲ ಭೈರವ', 'ಸ್ನೇಕ್ ನಾಗ', 'ಪ್ರಚಂಡ'...ಹೀಗೆ ಸಾಲು ಸಾಲು ಚಿತ್ರಗಳು ತೆರೆ ಕಾಣದೆ ಡಬ್ಬದಲ್ಲಿ ಧೂಳು ಹಿಡಿಯುತ್ತಿವೆ. ಹೀಗಿರುವಾಗಲೇ, 'ದುನಿಯಾ 2' ಚಿತ್ರ ಮಾಡುತ್ತಿರುವ ಬಗ್ಗೆ ಯೋಗಿ ತಂದೆ ಹೇಳಿಕೊಂಡಿದ್ದರು. [ಲೂಸ್ ಮಾದ ಯೋಗಿಯ ಸಿನಿಪಯಣ ನಿಂತ ನೀರಾಗಿದ್ದೇಕೆ?]

'ದುನಿಯಾ' ಮೂಲಕ ಸಿನಿ ಪಯಣ ಆರಂಭಿಸಿದ ಯೋಗಿಗೆ ಅದೇ ಶೀರ್ಷಿಕೆಯ ಮತ್ತೊಂದು ಸಿನಿಮಾ ಹೊಸ ತಿರುವು ನೀಡಬಹುದು ಅಂತ ಗಾಂಧಿನಗರದ ಪಂಡಿತರು ಲೆಕ್ಕಾಚಾರ ಹಾಕುತ್ತಿರುವಾಗಲೇ, ಯೋಗಿ ಕೈ ಹಿಡಿಯಲು 'ಲೀಡರ್' ಮುಂದಾಗಿದ್ದಾರೆ. ಮುಂದೆ ಓದಿ....

ನಾವು ಹೇಳುತ್ತಿರುವುದು 'ಲೀಡರ್' ಚಿತ್ರದ ಬಗ್ಗೆ...

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಲೀಡರ್' ಚಿತ್ರದ ಬಗ್ಗೆ ಹೊಸ ಸುದ್ದಿ ಇವತ್ತು ಹೊರ ಬಿದ್ದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

'ಲೀಡರ್' ಚಿತ್ರದಲ್ಲಿ ಲೂಸ್ ಮಾದ ಯೋಗಿ

'ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ಯೋಗಿ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ. ['ದುನಿಯಾ-2' ಚಿತ್ರದಲ್ಲಿ ಇರಲಿದ್ದಾರೆ ಲೂಸ್ ಮಾದ ಯೋಗಿ.!]

ಯೋಗಿ ಪಾತ್ರ ಏನು.?

'ಲೀಡರ್' ಚಿತ್ರದಲ್ಲಿ ಯೋಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅದರ ವಿವರ ಬಿಟ್ಟುಕೊಡಲು ನಿರ್ದೇಶಕ ಸಹನಾ ಮೂರ್ತಿ ಸಿದ್ಧರಿಲ್ಲ. [ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?]

ಮೊದಲು ಅಪ್ಪು, ಈಗ ಶಿವಣ್ಣ

'ಹುಡುಗರು' ಮತ್ತು 'ಯಾರೇ ಕೂಗಾಡಲಿ' ಚಿತ್ರಗಳಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿ ಯೋಗಿ ಸೈ ಎನಿಸಿಕೊಂಡಿದ್ದರು. ಈಗ ಅವರಿಗೆ ಶಿವಣ್ಣ ಜೊತೆ ನಟಿಸುವ ಅವಕಾಶ ಸಿಕ್ಕಿದೆ.

'ಲೀಡರ್' ಚಿತ್ರದಲ್ಲಿದೆ 'ಸ್ಟಾರ್' ದಂಡು

'ಲೀಡರ್' ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಆಕರ್ಷಣೆಯ ಕೇಂದ್ರ ಬಿಂದು ಶ್ರೀನಗರ ಕಿಟ್ಟಿ ಪುತ್ರಿ

ಇದೇ ಪ್ರಪ್ರಥಮ ಬಾರಿಗೆ 'ಲೀಡರ್' ಚಿತ್ರದ ಮೂಲಕ ಶ್ರೀನಗರ ಕಿಟ್ಟಿ-ಭಾವನಾ ಬೆಳಗೆರೆ ಪುತ್ರಿ ಪರಿಣಿತ ಬಣ್ಣ ಹಚ್ಚಿದ್ದಾರೆ. ಶಿವಣ್ಣನ ಮಗಳಾಗಿ ಪರಿಣಿತ ಅಭಿನಯಿಸುತ್ತಿದ್ದಾರೆ. ['ಈ' ಮುದ್ದು ಹುಡುಗಿ ಶಿವಣ್ಣನ ಮಗಳು, ಯಾರೀ ಪುಟಾಣಿ.?]

ಪ್ರಣೀತಾ ನಾಯಕಿ

'ಲೀಡರ್' ಶಿವಣ್ಣನಿಗೆ ಪ್ರಣೀತ ನಾಯಕಿ ಆಗಿ ಸೆಲೆಕ್ಟ್ ಆಗಿದ್ದಾರೆ.

'ರೋಸ್' ತಂಡ

'ರೋಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಹನಾ ಮೂರ್ತಿ, 'ಲೀಡರ್' ಚಿತ್ರದ ನಿರ್ದೇಶಕ. ಇನ್ನೂ ಅದೇ 'ರೋಸ್'ಗೆ ಬಂಡವಾಳ ಹಾಕಿದ್ದ ತರುಣ್ ಶಿವಪ್ಪ, ಹಾರ್ದಿಕ್ ಗೌಡ ಜೊತೆ ಸೇರಿ 'ಲೀಡರ್' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

English summary
Kannada Actor 'Lose Mada' Yogi is roped into play prominent role in Shiva Rajkumar starrer Kannada Movie 'Leader'. The movie is directed by Sahana Murthy of 'Rose' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada