Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲವ್ ಮಾಕ್ಟೇಲ್ 2 to ಹಿಟ್ 2: 2022ರಲ್ಲಿ 2ನೇ ಭಾಗ ಮಾಡಿ ಗೆದ್ದವರಾರು, ಸೋತವರಾರು?
ಚಿತ್ರವೊಂದು ಹಿಟ್ ಆದ ಬಳಿಕ ಅದರ ಸೀಕ್ವೆಲ್ ನಿರ್ಮಿಸಿ ಗೆಲ್ಲುವುದು ಸುಲಭದ ಮಾತಲ್ಲ. ಹೀಗೆ ಹಿಟ್ ಆದ ಚಿತ್ರಗಳ ಮುಂದುವರಿದ ಭಾಗವನ್ನು ತೆರೆಮೇಲೆ ತಂದಾಗ ಗೆದ್ದವರಿಗಿಂತ ಹೀನಾಯವಾಗಿ ಸೋತವರೇ ಹೆಚ್ಚು. ಅದರಲ್ಲಿಯೂ ರೋಬೊ ಬಳಿಕ ಬಂದ ರೋಬೊ 2.0 ರೀತಿಯ ದೊಡ್ಡ ಚಿತ್ರಗಳ ಸೀಕ್ವೆಲ್ ಮಾಡಿ ಕೈಸುಟ್ಟುಕೊಂಡವರು ಇದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಈ ಸೀಕ್ವೆಲ್ ಚಿತ್ರಗಳನ್ನು ನಿರ್ಮಿಸಿ ಸೋತವರ ಸಂಖ್ಯೆ ಹೆಚ್ಚಿದೆ ಎಂದೇ ಹೇಳಬಹುದು.
ಭೂತಾನಾಥ್ ಬಳಿಕ ಬಂದ ಭೂತನಾಥ್ ರಿಟರ್ನ್ಸ್, ಸಿಂಗಮ್ ಬಳಿಕ ಬಂದ ಸಿಂಗಮ್ ರಿಟರ್ನ್ಸ್, ಮರ್ಡರ್ ಬಳಿಕ ಬಂದ ಸೀಕ್ವೆಲ್ ಚಿತ್ರಗಳು ಹಾಗೂ ರೇಸ್ ಬಳಿಕ ಬಳಿಕ ಬಂದ ರೇಸ್ ಸೀಕ್ವೆಲ್ ಚಿತ್ರಗಳು ಮೊದಲ ಚಿತ್ರಗಳು ಉಂಟುಮಾಡಿದ್ದ ಪರಿಣಾಮವನ್ನು ಬೀರುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನು ಈ ಸೀಕ್ವೆಲ್ ಚಿತ್ರಗಳನ್ನು ಮಾಡಿ ಗೆದ್ದವರೂ ಸಹ ಇದ್ದಾರೆ. ದೃಶ್ಯಂ ನಂತರ ತೆರೆಕಂಡ ದೃಶ್ಯಂ 2, ಬಾಹುಬಲಿ ದ ಬಿಗಿನಿಂಗ್ ಬಳಿಕ ಬಂದ ಚಿತ್ರದ ಕನ್ಕ್ಲೂಷನ್, ಕೆಜಿಎಫ್ ಚಿತ್ರ ಸರಣಿಗಳು ಹೀಗೆ ಸೀಕ್ವೆಲ್ ಮಾಡಿ ಗೆದ್ದ ಚಿತ್ರತಂಡಗಳೂ ಸಹ ಇವೆ.
ಇನ್ನು 2022ರಲ್ಲಿಯೂ ಸಹ ಈ ಸೀಕ್ವೆಲ್ ಚಿತ್ರಗಳ ಹಾವಳಿ ತುಸು ಹೆಚ್ಚಾಗಿಯೇ ಇತ್ತು ಎಂದು ಹೇಳಬಹುದು. ಹೌದು, ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ಮೂವತ್ತು ಚಿತ್ರಗಳು ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಅಬ್ಬರಿಸಿದ್ದು, ಈ ಪೈಕಿ ಕೆಲ ಸೀಕ್ವೆಲ್ ಚಿತ್ರಗಳೂ ಸಹ ಸೇರಿವೆ. ಅಂದಹಾಗೆ ಈ ವರ್ಷ ಬಿಡುಗಡೆಗೊಂಡ ಸೀಕ್ವೆಲ್ ಚಿತ್ರಗಳು ಯಾವ ರೀತಿಯ ಫಲಿತಾಂಶವನ್ನು ನೀಡಿದವು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

ಕನ್ನಡದ ಸೀಕ್ವೆಲ್ ಚಿತ್ರಗಳೆಲ್ಲಾ ಹಿಟ್
ಕನ್ನಡದಲ್ಲಿ ಈ ವರ್ಷ ಕೆಜಿಎಫ್ ಚಾಪ್ಟರ್ 2, ಲವ್ ಮಾಕ್ಟೇಲ್ 2 ಹಾಗೂ ಗಾಳಿಪಟ 2 ಈ ಮೂರು ಸೀಕ್ವೆಲ್ ಚಿತ್ರಗಳು ಬಿಡುಗಡೆಗೊಂಡವು. ಈ ಪೈಕಿ ಕೆಜಿಎಫ್ ಚಾಪ್ಟರ್ 2 ಈ ವರ್ಷ ದೇಶದಲ್ಲೇ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಬೃಹತ್ ದಾಖಲೆ ಬರೆದರೆ ಇನ್ನುಳಿದ ಲವ್ ಮಾಕ್ಟೇಲ್ 2 ಹಾಗೂ ಗಾಳಿಪಟ 2 ಚಿತ್ರಗಳು ಒಳ್ಳೆಯ ಲಾಭ ಗಳಿಸಿ ಗೆದ್ದವು. ಈ ಮೂಲಕ ಈ ವರ್ಷ ಚಂದನವನ ಸೀಕ್ವೆಲ್ ಚಿತ್ರಗಳಲ್ಲಿ ಸಂಪೂರ್ಣ ಗೆಲುವನ್ನು ಕಂಡಿದೆ.

ತೆಲುಗಿನ ಸೀಕ್ವೆಲ್ ಚಿತ್ರಗಳ ಕತೆ ಏನು?
ತೆಲುಗಿನಲ್ಲಿ ಈ ವರ್ಷ ಒಟ್ಟು ಎರಡು ಸೀಕ್ವೆಲ್ ಚಿತ್ರಗಳು ಬಿಡುಗಡೆಗೊಂಡವು. ನಿಖಿಲ್ ಅಭಿನಯದ ಕಾರ್ತಿಕೇಯ 2 ನೂರು ಕೋಟಿ ಕ್ಲಬ್ ಸೇರಿ ಬೃಹತ್ ಪ್ರಶಂಸೆ ಪಡೆದುಕೊಂಡು ಜಯಭೇರಿ ಬಾರಿಸಿದರೆ, ವರ್ಷಾಂತ್ಯದಲ್ಲಿ ತೆರೆ ಕಂಡಿರುವ ಹಿಟ್ 2 ಕೂಡ ಸಕ್ಸಸ್ ಕಂಡಿದೆ. ಈ ಮೂಲಕ ತೆಲುಗು ಚಿತ್ರರಂಗ ಕೂಡ ಸೀಕ್ವೆಲ್ ಚಿತ್ರಗಳ ಮೂಲಕ ಗೆಲುವು ಕಂಡಿದೆ.

ತಮಿಳು ಸೀಕ್ವೆಲ್ ಚಿತ್ರಗಳು
ಇನ್ನು ತಮಿಳು ಚಿತ್ರರಂಗದಲ್ಲಿ 'ಸಿವಿ 2' ಚಿತ್ರ ಬಿಡುಗಡೆಯಾಗಿತ್ತು. ಸಿವಿ ಚಿತ್ರದ ಪ್ರೀಕ್ವೇಲ್ ಆಗಿದ್ದ ಪಾರ್ಟ್ 2 ಚಿತ್ರ ಮೊದಲ ಭಾಗದಷ್ಟು ಯಶಸ್ಸು ಗಳಿಸಲಿಲ್ಲ ಹಾಗೂ ಗಳಿಕೆಯಲ್ಲಿ ಚಿತ್ರ ಸೋಲನ್ನು ಅನುಭವಿಸಿತು. 2019ರಲ್ಲಿ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ಜಿವಿ' ಚಿತ್ರದ ಸೀಕ್ವೆಲ್ ಜಿವಿ 2 ಈ ವರ್ಷ ತೆರೆ ಕಂಡಿತ್ತು. ಆದರೆ ಈ ಚಿತ್ರವೂ ಸಹ ಮೊದಲ ಚಿತ್ರದ ಹಾಗೆ ಸದ್ದು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನು ಮೆದಗು ಚಿತ್ರದ ಸೀಕ್ವೆಲ್ ಮೆದಗು 2 ಕೂಡ ಗೆಲ್ಲಲಿಲ್ಲ. ಒಟ್ಟಿನಲ್ಲಿ ಸೀಕ್ವೆಲ್ ವಿಷಯವಾಗಿ ಈ ವರ್ಷ ತಮಿಳು ಚಿತ್ರರಂಗ ಶೂನ್ಯ ಸಾಧನೆ ಮಾಡಿದೆ ಎನ್ನಬುಹುದು.

ಹಿಂದಿ ಸೀಕ್ವೆಲ್ ಚಿತ್ರಗಳು
ಈ ವರ್ಷ ಹಿಂದಿಯಲ್ಲಿ ಒಟ್ಟು ನಾಲ್ಕು ಸೀಕ್ವೆಲ್ ಚಿತ್ರಗಳು ಬಿಡುಗಡೆಗೊಂಡಿವೆ. ಈ ಪೈಕಿ ಭೂಲ್ ಬುಲಾಯ 2 ಹಾಗೂ ದೃಶ್ಯಂ 2 ಚಿತ್ರಗಳು ಯಶಸ್ವಿಯಾದರೆ, ಹೀರೊಪಂತಿ 2 ಹಾಗೂ ಖುದಾ ಅಫೀಝ್ 2 ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದವು.

ಅವತಾರ್ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ
ಇನ್ನು ಹಾಲಿವುಡ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಹಲವು ಸೀಕ್ವೆಲ್ ಚಿತ್ರಗಳು ಬಿಡುಗಡೆಗೊಂಡು ಗೆದ್ದಿದ್ದು ಬಹು ನಿರೀಕ್ಷಿತ ಅವತಾರ್ 2 ಸಹ ಬಿಡುಗಡೆಗೆ ಸಿದ್ಧವಾಗಿದೆ. 2009ರಲ್ಲಿ ಬಿಡುಗಡೆಯಾಗಿ ಅಬ್ಬರಿಸಿ ಇಡೀ ವಿಶ್ವ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದ್ದ ಅವತಾರ್ ಚಿತ್ರದ ಸೀಕ್ವೆಲ್ ಅವತಾರ್ 2 ಇದೇ ಡಿಸೆಂಬರ್ 16ರಂದು ತೆರೆ ಕಾಣಲಿದ್ದು, ಮತ್ತೊಮ್ಮೆ ಕೋಟಿ ಹೊಳೆ ಹರಿಸುವ ಸಾಧ್ಯತೆಯಿದೆ.