»   » ಸುದೀಪ್ 'ರನ್ನ' ಚಿತ್ರಕ್ಕೆ ಲಕ್ಕಿ ಸ್ಟಾರ್ ರಮ್ಯಾ ಬರ್ತಾರಾ?

ಸುದೀಪ್ 'ರನ್ನ' ಚಿತ್ರಕ್ಕೆ ಲಕ್ಕಿ ಸ್ಟಾರ್ ರಮ್ಯಾ ಬರ್ತಾರಾ?

Posted By: ಜೀವನರಸಿಕ
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಶೂಟಿಂಗ್ ಶೇಕಡ 90ರಷ್ಟು ಮುಗಿದಿದೆ. ಇನ್ನೇನಿದ್ರೂ ಎರಡು ಹಾಡುಗಳಷ್ಟೇ ಬಾಕಿ ಇದೆ. ಚಿತ್ರೀಕರಣದ ಕೊನೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡೋ ಮೂಲಕ ಪ್ರಚಾರ ಶುರು ಮಾಡೋ ಪ್ಲಾನ್ ನಲ್ಲಿದೆ ಕಿಚ್ಚ ಸುದೀಪ್ ಅಂಡ್ ಟೀಂ.

'ವಿಕ್ಟರಿ' ಚಿತ್ರದ ನಂತರ ನಂದಕೀಶೋರ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ತೆಲುಗಿನ ಬ್ಲಾಕ್ ಬಸ್ಟರ್ ಮೂವಿ 'ಅತ್ತಾರಿಂಟಿಕಿ ದಾರೇದಿ'ಯ ರೀಮೇಕ್ ಈ 'ರನ್ನ'. ಈ ಚಿತ್ರತಂಡ ಇತ್ತೀಚೆಗೆ ತಾನೆ ವಿದೇಶದಲ್ಲಿ ಶೂಟಿಂಗ್ ಮುಗಿಸಿದೆ. ಈಗ ಹೈದರಾಬಾದ್ ನಲ್ಲಿ ಭರ್ಜರಿ ಸೆಟ್ ಹಾಕಿ ಶೂಟಿಂಗ್ ತಯಾರಿ ನಡೀತಿದೆ.


ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಸಿನಿಮಾಗೆ ಕಾಲಿವುಡ್, ಟಾಲಿವುಡ್, ಮಾಲಿವುಡ್ ಸ್ಟಾರ್ ಗಳು ಬಂದು ಹೆಜ್ಜೆ ಹಾಕಿದ್ರು. ಈಗ ಸುದೀಪ್ ಅಂಡ್ ಟೀಂ ಇಂತಹದ್ದೇ ಒಂದು ಪ್ರಯತ್ನಕ್ಕೆ ಕೈ ಹಾಕಿದೆ. ಆ ಪ್ರಯತ್ನ ಏನು? ಕಿಚ್ಚ ಮಾಡ್ತಿರೋದೇನು ಸ್ಲೈಡ್ ನಲ್ಲಿ ನೋಡಿ.


ಮಲ್ಟಿ ಹೀರೋಯಿನ್ ಸಾಂಗ್

ಕಿಚ್ಚ ಸುದೀಪ್ ಜೊತೆ ಇಲ್ಲಿಯವರೆಗೂ ನಟಿಸಿರೋ ನಟಿಯರೆಲ್ಲರೂ ಸ್ಟೆಪ್ ಹಾಕೋಕೇ ಸಾಂಗ್ ಒಂದು ತಯಾರಾಗಿದೆ. ಈ ಹಾಡಿಗೆ ಮೊದಲ ಸಿನಿಮಾ ನಾಯಕಿ 'ಸ್ಪರ್ಷ' ರೇಖಾರಿಂದ ಶುರುವಾಗಿ ರನ್ನನ ಮನದನ್ನೆ ರಚಿತಾವರೆಗೂ ಸ್ಟೆಪ್ ಹಾಕಲಿದ್ದಾರೆ.


ಹುಚ್ಚ ರೇಖಾ ಕುಣೀತಾರೆ

ಕಿಚ್ಚನ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ ಹುಚ್ಚ ಚಿತ್ರದಲ್ಲಿ ಜೋಡಿಯಾಗಿದ್ದ ಜಿಂಕೆಮರಿ ರೇಖಾ ಕೂಡ ಕಿಚ್ಚನ ಜೊತೆ ಸ್ಟೆಪ್ ಹಾಕಲಿದ್ದಾರೆ.


ಲಂಡನ್ ನಿಂದ ರಮ್ಯಾ ಬರ್ತಾರಾ?

ಆದ್ರೆ ಸದ್ಯಕ್ಕಿರೋ ಕುತೂಹಲ ಅಂದ್ರೆ ಲಂಡನ್ ನಲ್ಲಿರೋ ರಮ್ಯಾ ಹೈದರಾಬಾದ್ ಗೆ ಬಂದು ಕಿಚ್ಚನಿಗಾಗಿ ಸ್ಟೆಪ್ ಹಾಕ್ತಾರಾ? 10 ಸೆಕೆಂಡ್ ಗಾಗಿ ಚೆನ್ನೈಗೆ ಬರ್ತಾರಾ? ಆದ್ರೆ ಕಿಚ್ಚನ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ನಾಯಕಿಯಾಗಿರೋ ರಮ್ಯಾ ಬಂದ್ರೇನೇ ಹಾಡಿಗೊಂದು ಕಿಚ್ಚು.


ಕೋಪ ಬಿಟ್ಟು ಒಂದಾಗ್ತಾರಾ ರಾಗಿಣಿ

ರಮ್ಯಾ ಕಥೆ ಲಂಡನ್ ನಲ್ಲಿದ್ರೆ ರಾಗಿಣಿ ಇಲ್ಲೇ ಇದ್ರೂ ತಾನೇ ಅವಕಾಶ ಕೊಟ್ಟು ಬೆಳೆಸಿದ ರಾಗಿಣಿಯ ಜೊತೆ ಕಿಚ್ಚನ ಸಂಬಂಧ ಹಳಸಿದೆ. ವೀರ ಮದಕರಿ, ಕೆಂಪೇಗೌಡ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾದ ರಾಗಿಣಿ ಜೊತೆಗೆ ಕಿಚ್ಚ ಸ್ಟೆಪ್ ಹಾಕ್ತಾರಾ?


ಪಾರೂಲ್ ಸೈ

ಬಚ್ಚನ್ ನಲ್ಲಿ ಕಿಚ್ಚನಿಗೆ ಜೋಡಿಯಾಗಿದ್ದ ಪ್ಯಾರ್ ಗೆ ಆಗ್ಬಿಟ್ಟೈತೆ ಚೆಲುವೆ ಪರೂಲ್ ಯಾದವ್ ಅವರು ಕಿಚ್ಚನ ಜೊತೆ ಭರ್ಜರಿಯಾಗಿ ಕುಣಿಯೋಕೆ ರೆಡಿಯಾಗಿದ್ದಾರೆ. ಪರೂಲ್ ಓಕೆ ಆದ್ರೆ ಮಲ್ಟಿ ಹೀರೋಯಿನ್ ಗಳ ಸಾಂಗ್ ನಲ್ಲಿ ಸಿಂಧು ಮೆನನ್ ಕಾಣಿಸಿಕೊಳ್ತಾರಾ?


ವರಲಕ್ಷ್ಮಿ, ರನ್ಯಾ ಓಕೆ ಮೀನಾ ಬರ್ತಾರಾ?

ಮಾಣಿಕ್ಯ ಚಿತ್ರದಲ್ಲಿ ಕಿಚ್ಚನಿಗೆ ಸಾಥ್ ಕೊಟ್ಟಿದ್ದ ವರಲಕ್ಷ್ಮಿ ಶರತ್ ಕುಮಾರ್, ನವನಟಿ ರನ್ಯ ಕಿಚ್ಚನ ಜೊತೆ ಕುಣಿಯೋದು ವಿಶೇಷ ಅಲ್ಲದಿದ್ರೂ ಮತ್ತೊಬ್ಬ ನಟಿ ಸ್ವಾತಿಮುತ್ತು ನಟಿ ಪಂಚಭಾಷಾ ತಾರೆ ಮೀನಾ ಹೈದ್ರಾಬಾದ್ಗೆ ಬಂದು ಕಿಚ್ಚನ ಜೊತೆ ಕುಣೀತಾರಾ ?


ಐಂದ್ರಿತಾ ಶಾರ್ಪ್ ಶೂಟ್ ಗೆ ರೆಡಿ

ವೀರಪರಂಪರೆ ಚಿತ್ರದ ರೆಬೆಲ್ ಸ್ಟಾರ್ ಅಂಬಿ ಮತ್ತು ಕಿಚ್ಚ ಕಮಾಲ್ ಸಿನಿಮಾದಲ್ಲಿ ಐಂದ್ರಿತಾ ಅಭಿನಯ ಚಕ್ರವರ್ತಿ ಸುದೀಪ್ ಗೆ ಜೋಡಿಯಾಗಿದ್ರು. ಈಗ ಮತ್ತೊಮ್ಮೆ ಮಿಂಚೋ ಅವಕಾಶವನ್ನ ತಪ್ಪಿಸಿಕೊಳ್ಳೋದಿಲ್ಲ. ಇತ್ತೀಚೆಗೆ ಗೆಳೆಯ ದಿಗಂತ್ ಗಾಗಿ ಶಾರ್ಪ್ ಶೂಟರ್ ಚಿತ್ರಕ್ಕೊಂದು ಸ್ಪೆಷಲ್ ಸ್ಟೆಪ್ ಹಾಕಿದ್ರು ಐಂದ್ರಿತಾ


ಹುಬ್ಬಳ್ಳಿ ಚೆಲುವೆ ರಕ್ಷಿತಾ

ಹೇಳಿ ಕೇಳಿ ರಕ್ಷಿತಾ ಸಖತ್ ದಪ್ಪ ಆಗಿದ್ದಾರೆ, ಟಿವಿ ಸಂದರ್ಶನಗಳಲ್ಲಿ ಫ್ರೇಂ ನೋಡೀನೇ ಇಂಟರ್ವ್ಯೂವ್ ಕೊಡ್ತಾರೆ. ಈಗ ಈ ಚೆಲುವೆ ಕಿಚ್ಚನ ಜೊತೆ ಹೆಜ್ಜೆ ಹಾಕ್ತಾರಾ. ಕುಣಿಯೋದಕ್ಕೆ ರಕ್ಷಿತಾರಿಗೆ ಆಗುತ್ತಾ?


ಡಾನ್ಸಿಂಗ್ ಸ್ಟಾರ್ ಪ್ರಿಯಾಮಣಿ

ಸದ್ಯ ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ರವಿಮಾಮನ ಜೊತೆ ಅಕುಲ್ ಮಾತಿನ ಮೋಡಿಯಲ್ಲಿ ಕುಣೀತಾ ಇರೋ ಪ್ರಿಯಾಮಣಿ ಹೈದರಾಬಾದ್ ಸೆಟ್ ನಲ್ಲಿ ಕಿಚ್ಚನ ಜೊತೆ ಸ್ಟೆಪ್ ಹಾಕೋದ್ರಲ್ಲಿ ಅನುಮಾನವೇ ಇಲ್ಲ. ವಿಷ್ಣುವರ್ಧನ ಸಿನಿಮಾದಲ್ಲಿ ಪ್ರಿಯಾಮಣಿ ಕಿಚ್ಚನಿಗೆ ಜೋಡಿಯಾಗಿದ್ರು.


ಮಲ್ಲೂ ಬೆಡಗಿ ಭಾವನಾ

ಸದ್ಯ ಕನ್ನಡದಲ್ಲಿ ಅವಕಾಶಗಳು ಕಡಿಮೆಯಾಗಿ ಮಲೆಯಾಳಂನಲ್ಲೂ ಹೇಳಿಕೊಳ್ಳುವಂತಹಾ ಸಿನಿಮಾಗಳೂ ಇಲ್ಲದೆ ಸ್ವಲ್ಪ ಫ್ರೀಯಾಗೇ ಇರೋ ಮಲೆಯಾಳಂ ಕುಟ್ಟಿ ಭಾವನಾ ಕಿಚ್ಚನಿಗೆ ಸಾಥ್ ಕೊಡೋದೇನು ಕಷ್ಟವಲ್ಲ.


ಕಾಲವೇ ಉತ್ತರ ನೀಡಬೇಕು

ಸದ್ಯ ರನ್ನ ಚಿತ್ರ ತಂಡ ಇಂತಹಾ ಒಂದು ಕಣ್ಣಿಗೆ ಹಬ್ಬ ನೀಡೋ ಹಾಡನ್ನ ಚಿತ್ರೀಕರಿಸೋಕೆ ತಯಾರಿ ಮಾಡಿಕೊಳ್ತಿದೆ. ಕಿಚ್ಚನ ಹೆಚ್ಚೂ ಕಡಿಮೆ ಐವತ್ತು ಸಿನಿಮಾಗಳಲ್ಲಿ ನಟಿಸಿದ ಉಳಿದ ನಾಯಕಿಯರು ಯಾರ್ಯಾರು ಬರ್ತಾರೆ ಅನ್ನೋದನ್ನ ಕಾದು ನೋಡೊಣ.


English summary
The special song in Sudeep's 'Ranna' to cast actresses from Rekha, Ramya, Rachita Ram and many more lead actresses. This will definitely be a feast to watchout for all his fans who are eagerly waiting for Ranna's release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada