»   » ನಟ ಯಶ್ ಪರ ಬ್ಯಾಟಿಂಗ್ ಮಾಡಲು ನಿಂತ ಕವಿರಾಜ್.!

ನಟ ಯಶ್ ಪರ ಬ್ಯಾಟಿಂಗ್ ಮಾಡಲು ನಿಂತ ಕವಿರಾಜ್.!

Posted By:
Subscribe to Filmibeat Kannada

''ನಾನು ಪ್ರತಿ ಚಾನೆಲ್ ಗೆ ಹೋಗಿ ಮಾತನಾಡುವ ಬದಲು, ಎಲ್ಲಾ ಕನ್ನಡ ವಾಹಿನಿಯ ಮುಖ್ಯಸ್ಥರಿಗೂ ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಒಂದೇ ವೇದಿಕೆಯಲ್ಲಿ ರೈತರ ಸಮಸ್ಯೆ ಕುರಿತು ಚರ್ಚೆ ಮಾಡೋಣ. ಅದರಲ್ಲಿ ರೈತರು ಹಾಗೂ ಸಾಮಾನ್ಯ ಜನರು ಕೂಡ ಭಾಗಿಯಾಗಲಿ. ಎಲ್ಲರೂ ಸೇರಿ ಒಂದು ನಿಲುವಿಗೆ ಬರೋಣ'' ಅಂತ ಕನ್ನಡದ ಎಲ್ಲಾ ಸುದ್ದಿ ವಾಹಿನಿ ಮುಖ್ಯಸ್ಥರಿಗೆ ಯಶ್ ಆಫರ್ ನೀಡಿದ್ದರು.

ಇದಕ್ಕೆ ಪರ-ವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆಯೇ, ರಾಕಿಂಗ್ ಸ್ಟಾರ್ ಯಶ್ ಪರ ಗೀತ ಸಾಹಿತಿ ಕಮ್ ನಿರ್ದೇಶಕ ಕವಿರಾಜ್ ದನಿಯೆತ್ತಿದ್ದಾರೆ. [ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!]

lyricist-director-kavi-raj-supports-kannada-actor-yash

''ಯಶ್ ಅವರು ತುಂಬಾ ಒಳ್ಳೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ರೈತರ ಸಮಸ್ಯೆಗಳ ಚರ್ಚೆಗೆ ಬರಲು ಸಿದ್ಧ ಅಂತ ಅವರು ಅಂದಕೂಡಲೆ ಕೆಲವು ಚಾನೆಲ್ ಗಳು ಅದನ್ನು ತಮ್ಮ ಖಾಸಗಿ ಕಾರ್ಯಕ್ರಮ ಮಾಡಿಕೊಳ್ಳುವುದಕ್ಕಿಂತ ಒಂದೇ ವೇದಿಕೆಯಲ್ಲಿ ತಜ್ಞರು, ರೈತರು, ನಾಯಕರು...ಎಲ್ಲರನ್ನೂ ಸೇರಿಸಿ ರಚನಾತ್ಮಕ ಚರ್ಚೆ ನಡೆಸಿ ಪರಿಹಾರ ಮಾರ್ಗ ಕಂಡು ಹಿಡಿಯಲಿ. ಅದನ್ನು ಎಲ್ಲಾ ವಾಹಿನಿಗಳು ನೇರ ಪ್ರಸಾರ ಮಾಡಲಿ. ಆಗ ಇಡೀ ನಾಡು ಅಲ್ಲ, ಇಡೀ ದೇಶವೇ ಈ ಕಾರ್ಯಕ್ರಮದತ್ತ, ಈ ಸಮಸ್ಯೆಯತ್ತ ತಿರುಗಿ ನೋಡುವಂತಾಗುತ್ತದೆ. ಎಲ್ಲರ ಬದ್ಧತೆ ಪ್ರಶ್ನಿಸುವ ಮಾಧ್ಯಮಗಳು ಇಲ್ಲಿ ನಾಡಿನ ರೈತರ ಪರ ತಮ್ಮ ಬದ್ಧತೆ ಪ್ರದರ್ಶಿಸಿ ಇಡೀ ದೇಶಕ್ಕೆ ಮಾದರಿಯಾಗಲಿ'' ಅಂತ ನಿರ್ದೇಶಕ ಕವಿರಾಜ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಯಶ್ ಪರವಾಗಿ ಕವಿರಾಜ್ ಮಾತ್ರ ಅಲ್ಲ, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. #ISUPPORTYASH, #WeAreWithYash ಎಂಬ ಹ್ಯಾಶ್ ಟ್ಯಾಗ್ ಗಳು ಕೂಡ ಟ್ರೆಂಡಿಂಗ್ ಆಗುತ್ತಿವೆ. [ಯಶ್ ಕರೆದ ಜಾಗಕ್ಕೆ ಚರ್ಚೆಗೆ ಬರಲ್ಲ ಅಂದ ಎಚ್.ಆರ್.ರಂಗನಾಥ್]

English summary
Lyricist cum Kannada Director Kaviraj has taken his Facebook Account to support Kannada Actor Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada