ನಮ್ಗೆ ಡಬ್ಬಿಂಗ್ ಬೇಡ ಅನ್ನೋಕೆ ಮುಂಚೆ ಪ್ರಶ್ನೆಗೆ ಉತ್ತರಿಸಿ

By Mahesh

'ನಮಗೆ ಡಬ್ಬಿಂಗ್ ಬೇಡ. ಅದಕ್ಕೂ ಮುಂಚೆ ಈ ಕೆಳಗಿನ ಅಂಶಗಳು ಜಾರಿಗೆ ಬರಲಿ... ಇದು ಸಾಧ್ಯವೇ ಯೋಚಿಸಿ. ಸಾಧ್ಯವಾಗುವುದೇ ಆದರೇ ನಮಗೆ ಡಬ್ಬಿಂಗ್ ಬೇಡ. ಇಲ್ಲದಿದರೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ಚಿತ್ರೋದ್ಯಮ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ ಯುವ ಚಿತ್ರ ಸಾಹಿತಿ ಹೃದಯಶಿವ. ಹೃದಯಶಿವ ಫೇಸ್ ಬುಕ್ ಪುಟದಲಿ ಹಾಕಿರುವ ಸಮಯೋಚಿತ ಪ್ರಶ್ನೆಗಳು ಕನ್ನಡ ಚಿತ್ರರಂಗದ ಹಿರಿ ತಲೆಗಳು, ಕನ್ನಡ ಅಭಿಮಾನಿಗಳಿಗೂ ತಲುಪಲಿ ಎಂಬ ಉದ್ದೇಶದಿಂದ ಈ ಪ್ರಶ್ನೆಗಳನ್ನು ಪ್ರಕಟಿಸಲಾಗಿದೆ'-ಸಂಪಾದಕ

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಭೂತ ಕಾಲಿಡದಂತೆ ಮೆಟ್ಟಿ ಹಾಕಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ ತೊಡೆ ತಟ್ಟಿ ನಿಂತಿದೆ. ಡಬ್ಬಿಂಗ್ ವಿರೋಧಿಸಿ ಸೋಮವಾರ(ಜ.27) ದಂದು ನಡೆಯಲಿರುವ ಬೃಹತ್ ಮೆರಣಿಗೆ ಹಾಗೂ ಪ್ರತಿಭಟನೆಗೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಚಲನಚಿತ್ರ ತಾರೆ, ತಂತ್ರಜ್ಞರ ಬೃಹತ್ ಪತ್ರಿಕಾಗೋಷ್ಠಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸೋಮವಾರ ಬಂದ್ ಆಚರಿಸಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು [ಸಭೆ ವಿವರ ಇಲ್ಲಿ ಓದಿ]

Lyricist Hrudaya Shiva open question to KFI
ಚಿತ್ರ ಸಾಹಿತಿ ಹೃದಯ ಶಿವರ ಪ್ರಶ್ನೆಗಳು ಇಂತಿದೆ:

1) ಯಾವುದೇ ಕಾರಣಕ್ಕೂ ಕನ್ನಡ ಚಿತ್ರಗಳಲ್ಲಿ ಹೀರೋಯಿನ್ ಸೇರಿದಂತೆ ಪರಭಾಷಾ ನಟನಟಿಯರು ನಟಿಸಬಾರದು. ನಾಯಕನಿಂದ ಹಿಡಿದು ಒಂದು ಪುಟ್ಟ ಪಾತ್ರದವರೆಗೂ ಅಪ್ಪಟ ಕನ್ನಡಿಗರೇ ನಟಿಸಬೇಕು.

2) ಪರಭಾಷಾ ಸಂಗೀತ ನಿರ್ದೇಶಕರಿಂದ ಕನ್ನಡ ಚಿತ್ರಗಳಿಗೆ ಸಂಗೀತ ಮಾಡಿಸಬಾರದು. ಕನ್ನಡದ ಸಂಗೀತ ನಿರ್ದೇಶಕರು ಸಂಗೀತ ನೀಡುವ ಕನ್ನಡ ಚಿತ್ರಗಳಿಗೂ ಪರಭಾಷೆಯ ರಿದಂ- ಕೀ ಬೋರ್ಡ್ ಪ್ಲೇಯರ್ಸ್, ಲೈವ್ ವಾದ್ಯ ನುಡಿಸುವವರು ಇರಬಾರದು. ಎಲ್ಲಾ ವಾದ್ಯಗಾರರೂ ಕನ್ನಡಿಗರೇ ಆಗಿರಬೇಕು.

3) ಪರಭಾಷಾ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಕೆ.ಎಸ್.ಚಿತ್ರಾ, ಸೋನುನಿಗಮ್, ಹರಿಹರನ್, ಕಾರ್ತಿಕ್, ಟಿಪ್ಪು, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ, ಮಧು ಬಾಲಕೃಷ್ಣ, ಶ್ರೇಯಾ ಘೋಶಾಲ್, ಸುನಿಧಿ ಚೌಹಾಣ್- ಇಂಥವರಿಂದ ಕನ್ನಡ ಚಿತ್ರಗಳಿಗೆ ಹಾಡು ಹಾಡಿಸಬಾರದು. ಎಲ್ಲ ಕನ್ನಡ ಚಿತ್ರಗಳಲ್ಲೂ ಕನ್ನಡಿಗ ಗಾಯಕ/ಗಾಯಕಿಯರೇ ಹಾಡಬೇಕು.

4) ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡಬಾರದು. ಬದಲಾಗಿ ಕನ್ನಡಿಗರೇ ಬರೆದಿರುವ ಕಥೆ/ಕಾದಂಬರಿ ಅಥವಾ ಸ್ವತಃ ಕನ್ನಡ ಸಿಮಿಮಾ ಲೇಖಕರು ಬರೆದಿರುವ ಕಥೆಗಳನ್ನು ಇಟ್ಟುಕೊಂಡೇ ಸಿನಿಮಾ ಮಾಡಬೇಕು. ಯಾವುದೇ ಕಾರಣಕ್ಕೂ ತೆಲುಗು, ತಮಿಳು, ಹಿಂದಿಯ ಕಥೆಗಾರರನ್ನು ಕರೆತಂದು ಕನ್ನಡ ಚಿತ್ರಗಳಿಗೆ ಕಥೆ ಬರೆಸಬಾರದು.

5) ಪರಭಾಷಾ ನಿರ್ದೇಶಕರನ್ನು ಕರೆತಂದು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಲು ಅವಕಾಶ ಮಾಡಿಕೊಡಬಾರದು. ಎಲ್ಲಾ ಕನ್ನಡ ಚಿತ್ರಗಳನ್ನು ಕನ್ನಡಿಗರೇ ನಿರ್ದೇಶಿಸಬೇಕು.

6) ಕನ್ನಡ ಚಿತ್ರಗಳ ಕ್ಯಾಮೆರಾಮ್ಯಾನ್, ಕಾಸ್ಟೂಮ್ ಡಿಸೈನರ್, ಸಂಕಲನಕಾರ, ನೃತ್ಯ ನಿರ್ದೇಶಕ, ಸಾಹಸ ನಿರ್ದೇಶಕ, ಕಲಾ ನಿರ್ದೇಶಕರೂ ಕೂಡ ಕನ್ನಡದವರೇ ಆಗಿರಬೇಕು.

7) ಯಾವುದೇ ಕಾರಣಕ್ಕೂ ಕನ್ನಡದ ಚಿತ್ರವಿತರಕರು ಪರಭಾಷಾ ಚಿತ್ರಗಳ ವಿತರಣಾ ಹಕ್ಕು ಪಡೆದು ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನು ವಿತರಿಸಬಾರದು. ಹಾಗೇನೆ, ಮಲ್ಟಿಪ್ಲೆಕ್ಸ್ ಗಳನ್ನುಳ್ಳ ಕನ್ನಡಿಗರು ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಚಿತ್ರಗಳನ್ನು ತಮ್ಮ ಮಲ್ಪಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಾರದು. ಬರೀ ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶಿಸಬೇಕು.

8) ಕನ್ನಡ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚೆನ್ನೈ, ಬಾಂಬೆಯ ಸ್ಟುಡಿಯೋಗಳಿಗೆ ಹೋಗದೆ ಕರ್ನಾಟಕದಲ್ಲೇ ಸುಸಜ್ಜಿತವಾಗಿರುವ ಸ್ಟುಡಿಯೋಗಳಲ್ಲೇ ಎಲ್ಲಾ ಕೆಲಸಗಳನ್ನು ಮಾಡಬೇಕು.

9) ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ಕನ್ನಡತನ, ಕನ್ನಡ ಸಂಸ್ಕೃತಿ ದಟ್ಟವಾಗಿರಬೇಕು.

More from Filmibeat

English summary
Lyricist Hrudaya Shiva says he is ready to accept ban on Dubbing in Kannada cinema but throws few questions and seeks answers from KFI artists and director who are against dubbing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X