»   » ಕುಂಬಳಕಾಯಿಯತ್ತ, 'ಮದುವೆಯ ಮಮತೆಯ ಕರೆಯೋಲೆ'

ಕುಂಬಳಕಾಯಿಯತ್ತ, 'ಮದುವೆಯ ಮಮತೆಯ ಕರೆಯೋಲೆ'

Posted By:
Subscribe to Filmibeat Kannada

ಗೀತೆ ರಚನೆಕಾರ ಕವಿರಾಜ್ ಅವರು ಪ್ರೊಮೋಷನ್ ಪಡೆದುಕೊಂಡು ನಿರ್ದೇಶನ ಮಾಡಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರತಂಡ ಇದೀಗ ಕುಂಬಳಕಾಯಿ ಒಡೆದು ಚಿತ್ರ ಬಿಡುಗಡೆ ಮಾಡಲು ತಯಾರಾಗುತ್ತಿದೆ.

ನವೆಂಬರ್ 2 ರಂದು ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಜನವರಿ 2016, ಹೊಸ ವರ್ಷಕ್ಕೆ ಮದುವೆಯ ಕರೆಯೋಲೆಯನ್ನು ಇಡೀ ಪ್ರೇಕ್ಷಕರಿಗೆ ಹಂಚಲು ಸಾಹಿತ್ಯ ಬರಹಗಾರ ಕಮ್ ಚೊಚ್ಚಲ ನಿರ್ದೇಶಕ ಕವಿರಾಜ್ ಅವರು ನಿರ್ಧಾರ ಮಾಡಿದ್ದಾರೆ.[ಬೇಬಿ ಡಾಲ್ ಅಮೂಲ್ಯಗೆ ಮದುವೆ ಆಯ್ತು.!]

Lyricist Kaviraj's Movie Hits Screens in Jan 2016

ಸಿನಿಮಾ ನಿರ್ಮಾಪಕ ದಿನಕರ್ ತೂಗುದೀಪ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ಮಾಡೆಲ್ ಆಗಿದ್ದ ಚಾಕಲೇಟು ಹೀರೋನಂತಿರುವ, ಸೂರಜ್ ಗೌಡ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಮದುಮಗಳಾಗಿ ಬೇಬಿ ಡಾಲ್ ಅಮೂಲ್ಯ ಮಿಂಚಿದ್ದಾರೆ.

ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಕ್ಷೇತ್ರಕ್ಕೆ ಇಳಿದಿರುವ ಸಾಹಿತ್ಯ ಬರಹಗಾರ ಕವಿರಾಜ್ ಅವರಿಗೆ ನಿರ್ಮಾಪಕ ದಿನಕರ್ ತೂಗುದೀಪ್ ಅವರು ಬೆನ್ನ ಹಿಂದೆ ನಿಂತು ಸಲಹೆ ಸೂಚನೆ ನೀಡಿದ್ದಾರೆ.['ಆಕ್ಷನ್ ಕಟ್ ರಾಜ'ನಾಗಲಿರುವ ಚಿತ್ರಸಾಹಿತಿ ಕವಿರಾಜ್]

ಅಲ್ಲದೇ ಈಗಾಗಲೇ ಸಿನಿಮಾ ಶೂಟಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿರುವ ಸಂಭ್ರಮದಲ್ಲಿ ನಿರ್ಮಾಪಕ ದಿನಕರ್ ತೂಗುದೀಪ್ ಅವರು "ಇದು ಚೊಚ್ಚಲ ನಿರ್ದೇಶಕನ ಕೆಲಸ ಎಂದೆನಿಸುವುದಿಲ್ಲ, ಬದ್ಲಾಗಿ ಕವಿರಾಜ್ ಅವರು ತಮ್ಮೆಲ್ಲ ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ.

Lyricist Kaviraj's Movie Hits Screens in Jan 2016

ನಾನು ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೊಮ್ಮೆ ಅನಿಸುತ್ತಿತ್ತು. ಛೇ ಇನ್ನು ಕೆಲವು ಹೆಚ್ಚಿನ ಶಾಟ್ ಗಳನ್ನು ಚಿತ್ರೀಕರಿಸಬೇಕಿತ್ತು, ಅಂತ. ಆದರೆ ಕವಿರಾಜ್ ಅವರು ಸರಿಯಾದ ಯೋಜನೆ ಮಾಡಿಕೊಳ್ಳುತ್ತಾ, ಸೂಪರ್ ಫಿನಿಶಿಂಗ್ ಟಚ್ ನೀಡುತ್ತಿದ್ದರು ಎಂದು ದಿನಕರ್ ನುಡಿಯುತ್ತಾರೆ.[ಅಂತೂ ಚಿತ್ತಾರದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕ!]

ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರತಂಡ ಆದಷ್ಟು ಬೇಗ ಸೆನ್ಸಾರ್ ಮಾಡಿಸಲು, ಭರದ ಸಿದ್ಧತೆ ಮಾಡುತ್ತಿದೆ.

ಇನ್ನುಳಿದಂತೆ ಅನಂತ್ ನಾಗ್, ನಟಿ ಚಿತ್ರಾ ಶೆಣೈ, ಅಚ್ಯುತ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

English summary
Maduveya Mamatheya Kareyole wrapped its shoot on Monday, (November 02) in Bengaluru. A new feature the movie is directed by Kaviraj and produced by Dinakar under Toogudeepa productions, the film features a fresh pair, Amulya and Suraj Gowda, on screen.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X