For Quick Alerts
  ALLOW NOTIFICATIONS  
  For Daily Alerts

  'ಮದಗಜ' ಟೈಟಲ್ ಅಧಿಕೃತ: ಸಂಕ್ರಾಂತಿಗೆ ಮುಹೂರ್ತ

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾದ ಟೈಟಲ್ ಬಗ್ಗೆ ಇದ್ದ ಗೊಂದಲವನ್ನು ನಿರ್ದೇಶಕ ಮಹೇಶ್ ಕುಮಾರ್ ನಿವಾರಿಸಿದ್ದಾರೆ. ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ ಮಹೇಶ್ ಇದೇ ಟೈಟಲ್ ನಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

  ನಾಯಕ ಶ್ರೀಮುರಳಿ ಅವರಿಗೆ ಪೂರ್ಣ ಕಥೆ ಹೇಳಿದ್ದು, ಇದೇ ಟೈಟಲ್ ಸೂಕ್ತ ಎನ್ನುವ ನಿರ್ಧಾರಕ್ಕೆ ಇಡೀ ತಂಡ ಬಂದಿದೆ. ಜೊತೆಗೆ ಸಿನಿಮಾ ಮುಹೂರ್ತ ಕಾರ್ಯಕ್ರಮವನ್ನು ನಿಗದಿ ಮಾಡಿದೆ. ಸಂಕ್ರಾಂತಿ ಹಬ್ಬಕ್ಕೆ ಅಂದರೆ, ಜನವರಿ 15 ರಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ನಡೆಯಲಿದೆ.

  50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ 50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ

  ಜನವರಿ 18 ರಿಂದ ಸಿನಿಮಾದ ಚಿತ್ರೀಕರಣ ಶುರು ಆಗುತ್ತಿದೆ. ವಾರಣಾಸಿಯಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಜಗಪತಿ ಬಾಬು, ಪ್ರಕಾಶ್ ರೈ, ಸಾಧು ಕೋಕಿಲ ಹಾಗೂ ರಮ್ಯ ಕೃಷ್ಣ ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

  ವಿಶೇಷವೆಂದರೆ, ಸೌತ್ ಇಂಡಿಯಾದ ಬಹು ದೊಡ್ಡ ಸ್ಟಾರ್ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಪ್ರಕ್ರಿಯೆ ಮಾತುಕತೆ ಹಂತದಲ್ಲಿ ಇದ್ದು, ಸದ್ಯದಲ್ಲಿಯೇ ಆ ನಟನ ಹೆಸರನ್ನು ಬಹಿರಂಗ ಪಡಿಸಲಾಗುವುದಂತೆ.

  ಶ್ರೀಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ರಂತೆ ಆ ಡೈರೆಕ್ಟರ್ಶ್ರೀಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ರಂತೆ ಆ ಡೈರೆಕ್ಟರ್

  'ಮದಗಜ' ಸಿನಿಮಾದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. ಶ್ರೀಮುರಳಿ ಕಣ್ಣು ಪೋಸ್ಟರ್ ನಲ್ಲಿದೆ. ಟೈಟಲ್ ಮೂಲಕವೇ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದ್ದು, ಉಮಾಪತಿ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.

  English summary
  Madagaja kannada movie muhurtha will be held on january 15.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X