twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ನಿಂಬೆಹುಳಿಗೆ ಮದ್ರಾಸಿನಿಂದ ಅನುಮತಿ

    By ಜೇಮ್ಸ್ ಮಾರ್ಟಿನ್
    |

    ಹೇಮಂತ್ ಹೆಗಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರ ಕೊನೆಗೂ ಬಿಡುಗಡೆ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾವೊಂದರ ನಿರ್ಮಾಣಕ್ಕೆ ಕೈಹಾಕಿರುವ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರಿಗೆ ಅಂತೂ ಇಂತೂ ಕನ್ನಡ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡುವ ವೇದನೆಯ ಅನುಭವವಾಗಿದೆ.

    ನಿಂಬೆಹುಳಿ ಚಿತ್ರಕ್ಕೆ ಅಡ್ಡಗಾಲು ಹಾಕಿದ್ದ ದ್ರಾವಿಡ್ ಮುನೇತ್ರ ಕಳಗಂ(ಡಿಎಂಕೆ) ಪಕ್ಷಕ್ಕೆ ಮುಖಭಂಗವಾಗಿದೆ. ನಿಂಬೆಹುಳಿ ಚಿತ್ರದಲ್ಲಿರುವ ಒಂದು ಪಾತ್ರ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷ ಎಂ. ಕರುಣಾನಿಧಿ ಅವರನ್ನು ಹೋಲುತ್ತದೆ ಇದರಿಂದ ನಮಗೆ ಭಾರಿ ಅಪಮಾನವಾಗಿದೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಮದ್ರಾಸ್ ಹೈಕೋರ್ಟಿನಲ್ಲಿ ಡಿಎಂಕೆ ಅರ್ಜಿ ಸಲ್ಲಿಸಿತ್ತು.

    ಆದರೆ, ಡಿಎಂಕೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ್ದು, ನಿಂಬೆಹುಳಿ ಚಿತ್ರ ಬಿಡುಗಡೆಗೆ ಇರುವ ಅಡ್ಡಿ ಆತಂಕ ನಿವಾರಣೆಗೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರದ ನಾಯಕ, ನಿರ್ದೇಶಕ ಹೇಮಂತ್ ಹೆಗಡೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಹಿರಂಗಗೊಳಿಸಿದ್ದು, ಆಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವವರಿಗೆ ತಕ್ಕ ಪಾಠ. ನನಗೆ ಸಕತ್ ಖುಷಿಯಾಗಿದೆ ಎಂದಿದ್ದಾರೆ.

    wow!finally th ordeal is over!!th madras high court has quashed th writ petition and has given a go ahead for nimbehuli release.hope it teaches a lesson to al th petty minded stuck up people who want to curtail freedom of expression.feeling ecstatic!!!-Hemanth Hegde ಫೇಸ್ ಬುಕ್ ಪುಟದಿಂದ

    ನಿಂಬೆಹುಳಿ ರಾಮ ರಾಮಾ ಹಾಡು

    ನಿಂಬೆಹುಳಿ ರಾಮ ರಾಮಾ ಹಾಡು

    'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ... ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." ಎಂಬ ಹಾಡು 'ಯೂಟ್ಯೂಬ್' ನಲ್ಲಿ ಹೊಸ ಹವಾ ಎಬ್ಬಿಸಿದೆ. ಜನಪ್ರಿಯ ಹನಿಗವಿ ಎಚ್ ದುಂಡಿರಾಜ್ ಬರೆದು ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡು ಚಿತ್ರಕ್ಕೆ ಒಳ್ಳೆ ಮೈಲೇಜ್ ಕೊಟ್ಟಿತ್ತು ಜತೆಗೆ ರಾಮ ಭಕ್ತರ ಕೋಪಕ್ಕೂ ತುತ್ತಾಗಿತ್ತು.

    ಏನಿದೆ ಅಂತದ್ದು ನಿಂಬೆಹುಳಿ ಚಿತ್ರದಲ್ಲಿ ?

    ಏನಿದೆ ಅಂತದ್ದು ನಿಂಬೆಹುಳಿ ಚಿತ್ರದಲ್ಲಿ ?

    ರಿಯಲ್ ಲೈಫ್ ಪಾತ್ರಗಳನ್ನು ಇಟ್ಟುಕೊಂಡು ವಿಡಂಬನಾತ್ಮಕ ಚಿತ್ರ ಮಾಡಲು ಹೊರಟ ಹೇಮಂತ್ ಗೆ ಮತ್ತೆ ಕೊನೆಗೂ ಚಿತ್ರ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದೆ. ಕ್ರಿಸ್ ಮಸ್ ಬದಲು ಸಂಕ್ರಾಂತಿ ನಂತರ ಚಿತ್ರ ಬಿಡುಗಡೆಯಾಗುತ್ತಿದೆ. ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರ ಮುಕ್ತಾ ಆರ್ಟ್ಸ್ ನಿರ್ಮಾಣದ ಈ ಚಿತ್ರದಲ್ಲಿ ಕೋಮಲ್ ಝಾ, ಮಧುರಿಮಾ ನಾಯಕಿರಾಗಿದ್ದು ಹೇಮಂತ್ ಲೀಡ್ ರೋಲ್ ನಲ್ಲಿದ್ದಾರೆ.

    ವಿಶ್ವಮಟ್ಟದಲ್ಲಿ ನಿಂಬೆಹುಳಿ ಕಾಮಿಡಿ ಪೋಸ್ಟರ್

    ವಿಶ್ವಮಟ್ಟದಲ್ಲಿ ನಿಂಬೆಹುಳಿ ಕಾಮಿಡಿ ಪೋಸ್ಟರ್

    ವಿಶ್ವದ ಟಾಪ್ 25 ಕಾಮಿಡಿ ಚಿತ್ರ ಪೋಸ್ಟರ್ ಗಳ ಪಟ್ಟಿಯಲ್ಲಿ 'ನಿಂಬೆಹುಳಿ' ಚಿತ್ರದ ಪೋಸ್ಟರ್ ಕೂಡಾ ಸ್ಥಾನ ಪಡೆದಿತ್ತು. ವಿಶ್ವದ ಅಗ್ರಗಣ್ಯ ಕಾಮಿಡಿ ಚಿತ್ರಗಳ ಸಾಲಿನಲ್ಲಿ ಕನ್ನಡದ ಏಕೈಕ ಎಂಟ್ರಿಯಾಗಿ ನಿಂಬೆಹುಳಿ ಕಾಣಿಸಿಕೊಂಡಿತ್ತು. ಉಳಿದಂತೆ ಹಿಂದಿ ಚಿತ್ರ 3 ಈಡಿಯಟ್ಸ್ ಪೋಸ್ಟರ್ ಕೂಡಾ ಸ್ಥಾನ ಪಡೆದಿತ್ತು [ವಿವರ: ಚಾಪ್ಲಿನ್ ಚಿತ್ರಗಳ ಸಾಲಿನಲ್ಲಿ'ನಿಂಬೆಹುಳಿ']

    ತಮಿಳಿನಲ್ಲಿ ರಿಮೇಕ್ ಗಾಗಿ ಭಾರಿ ಬೇಡಿಕೆ

    ತಮಿಳಿನಲ್ಲಿ ರಿಮೇಕ್ ಗಾಗಿ ಭಾರಿ ಬೇಡಿಕೆ

    ಹೇಮಂತ್ ಹೆಗ್ಡೆ ಅವರ ನಿಂಬೆಹುಳಿ ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ಕುತೂಹಲ ಕೆರಳಿಸಿದ್ದು, ತಮಿಳಿನಲ್ಲಿ ಚಿತ್ರವನ್ನು ರಿಮೇಕ್ ಮಾಡಿ ಸೂರ್ಯ ತಮ್ಮ ಕಾರ್ತಿ ಶಿವಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತಮಿಳು ನಿರ್ಮಾಪಕರು ಮುಂದಾಗಿದ್ದರು. ಖ್ಯಾತ ನಿರ್ದೇಶಕ ಶಂಕರ್ ಅವರ ಸಹಾಯಕ ಕೆ ಮಾದೇಶ್ ಅವರು ಈ ಚಿತ್ರದ ಹಕ್ಕು ಪಡೆಯಲು ಯತ್ನಿಸಿದ್ದರು.

    ತಮಿಳುನಾಡಿನ ಡಿಎಂಕೆ ವಿರೋಧ ಏಕೆ?

    ತಮಿಳುನಾಡಿನ ಡಿಎಂಕೆ ವಿರೋಧ ಏಕೆ?

    ಚಿತ್ರದಲ್ಲಿ 'ಕರುಣಾ ರಂಗ' ಎಂಬ ಪಾತ್ರವಿದೆ. ಇದನ್ನು ಬುಲೆಟ್ ಪ್ರಕಾಶ್ ಮಾಡಿದ್ದಾರೆ. ಪಾತ್ರದ ವೇಷ ಭೂಷಣ ಆ ಕಪ್ಪು ಕನ್ನಡಕ ಎಲ್ಲವೂ ಥೇಟ್ ಕರುಣಾನಿಧಿ ಅವರನ್ನು ಹೋಲುತ್ತದೆ ಎನ್ನಲಾಗಿದೆ. ಈ ವಿಷಯ ತಿಳಿದ ಡಿಎಂಕೆ ಮುಖಂಡರು ಚಿತ್ರ ಬಿಡುಗಡೆಗೆ ತಡೆಯೊಡ್ಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ತಮಿಳುನಾಡಿನ ಹೈಕೋರ್ಟ್ ಈ ಚಿತ್ರಕ್ಕೆ ತಡೆ ತೆರವುಗೊಳಿಸಿದೆ.

    ನಿಂಬೆಹುಳಿ ಚಿತ್ರದ ಟೇಲರ್, ಟೀಸರ್ ನೋಡಿ

    ನಿಂಬೆಹುಳಿ ಚಿತ್ರದ ಟೇಲರ್, ಟೀಸರ್ ನೋಡಿ ಹಲವಾರು ಮಂದಿ ಅಯ್ಯೋ ಡಬ್ಬಲ್ ಮೀನಿಂಗ್ ಇದೆ ಅಂದಿದ್ದಾರೆ. ಕೆಲವರು ಹಾಡು ಸುಮಧುರವಾಗಿದೆ ಎಂದಿದ್ದಾರೆ.

    English summary
    Madras High Court has made a smooth way for Sandalwood's forthcoming movie Nimbehuli's release, by squashing the writ filed by Dravida Munetra Kazhagam (DMK) party workers. The news has been confirmed by none other than director Hemanth Hegde, who is also playing the lead role in the movie.
    Friday, January 10, 2014, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X