For Quick Alerts
  ALLOW NOTIFICATIONS  
  For Daily Alerts

  ಕನ್ನಡದ ನಟಿಗೆ ಬ್ಲಾಕ್‌ಮೇಲ್ ಮಾಡಿದ್ದ ಮೇಕಪ್‌ಮ್ಯಾನ್ ಬಂಧನ: ನಗ್ನ ವಿಡಿಯೋಗಳು ದೊರೆತಿದ್ದು ಹೇಗೆ?

  |

  ಸಿನಿಮಾ ನಟಿಯ ನಗ್ನ ಚಿತ್ರಗಳು, ವಿಡಿಯೋಗಳನ್ನು ಇರಿಸಿಕೊಂಡು ಆಕೆಗೆ ಬ್ಲಾಕ್‌ ಮೇಲ್ ಮಾಡುತ್ತಿದ್ದ ಆಕೆಯದ್ದೇ ಮೇಕಪ್‌ಮ್ಯಾನ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

  2013 ರಿಂದ 2015 ರ ವರೆಗೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ ನಟಿಯೊಬ್ಬರಿಗೆ ಮೇಕಪ್‌ಮ್ಯಾನ್ ಬ್ಲಾಕ್‌ ಮೇಲ್ ಮಾಡಿದ್ದು, 30 ಲಕ್ಷ ಹಣ ನೀಡದೇ ಹೋದರೆ ಆಕೆಯ ನಗ್ನ, ಅರೆನಗ್ನ ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

  ನಿಜವಾಯ್ತು ನಿರ್ದೇಶಕನ ಬಗ್ಗೆ ಮಹೇಶ್ ನುಡಿದಿದ್ದ ಭವಿಷ್ಯ: ವಾಟ್ಸ್‌ಆಪ್ ಚಾಟ್ ಸಾಕ್ಷಿನಿಜವಾಯ್ತು ನಿರ್ದೇಶಕನ ಬಗ್ಗೆ ಮಹೇಶ್ ನುಡಿದಿದ್ದ ಭವಿಷ್ಯ: ವಾಟ್ಸ್‌ಆಪ್ ಚಾಟ್ ಸಾಕ್ಷಿ

  ಆರೋಪಿಯು ನಟಿಗೆ ವಾಟ್ಸ್‌ಆಪ್ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಟಿಯು ಆರಂಭದಲ್ಲಿ ಆತನ ಬೆದರಿಕೆಗೆ ಬಗ್ಗದೇ ಇದ್ದಾಗ, ಆಕೆಯದ್ದೇ ಕೆಲವು ಚಿತ್ರಗಳು ವಿಡಿಯೋಗಳನ್ನು ನಟಿಗೆ ಕಳಿಸಿದ್ದಾನೆ. ಕೂಡಲೇ ನಟಿಯು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

  ಆರೋಪಿ, ನಟಿಗೆ ವಾಟ್ಸ್‌ಅಪ್‌ ಸಂದೇಶ ಕಳಿಸಿದ್ದ ಮೊಬೈಲ್ ಸಂಖ್ಯೆ ಹಿಡಿದು ತನಿಖೆ ಮಾಡಿದ ಪೊಲೀಸರು ಮಹಾಂತೇಶ್ ಎಂಬ ಮೇಕಪ್‌ಮ್ಯಾನ್ ಅನ್ನು ಬಂಧಿಸಿದ್ದಾರೆ. ಈ ಮೇಕಪ್‌ಮ್ಯಾನ್, ನಟಿಯ ಖಾಸಗಿ ಮೇಕಪ್‌ಮ್ಯಾನ್ ಆಗಿದ್ದನಂತೆ!

  ನಟಿಯು ಸಿನಿಮಾ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾಗ ಸಾಮಾನ್ಯವಾಗಿ ತನ್ನ ಮೊಬೈಲ್ ಅನ್ನು ಮಹಾಂತೇಶ್‌ ಕೈಗೆ ಕೊಟ್ಟು ಹೋಗುತ್ತಿದ್ದರಂತೆ. ನಟಿಯ ಮೊಬೈಲ್‌ನ ಸೆಕ್ಯುರಿಟಿ ಲಾಕ್‌ ತಿಳಿದುಕೊಂಡ ಮಹಾಂತೇಶ್, ಒಮ್ಮೆ ಮೊಬೈಲ್ ತೆಗೆದು ನೋಡಿದಾಗ ನಟಿಯ ನಗ್ನ ಚಿತ್ರಗಳು, ವಿಡಿಯೋಗಳು ಸಿಕ್ಕಿವೆ. ಕೂಡಲೇ ಅವನ್ನು ತನ್ನ ಮೊಬೈಲ್‌ಗೆ ಕಳಿಸಿಕೊಂಡಿದ್ದಾನೆ. ಆ ಬಳಿಕ ಬೇರೊಂದು ವಾಟ್ಸ್‌ ಆಪ್‌ ಸಂಖ್ಯೆ ಬಳಸಿ ನಟಿಗೆ ಬೆದರಿಕೆ ಹಾಕಿ, ಹಣ ವಸೂಲಿಗೆ ಯತ್ನಿಸಿದ್ದಾನೆ.

  ನಟಿ ಏಕೆ ತನ್ನ ನಗ್ನ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಇರಿಸಿಕೊಂಡಿದ್ದರು ಎಂದು ಪೊಲೀಸರು ಪ್ರಶ್ನಿಸಿದ್ದು, ನಟಿಯು ಆ ವಿಡಿಯೋಗಳನ್ನು 'ಓನ್ಲಿ ಫ್ಯಾನ್ಸ್' ಮಾದರಿಯ ಅಪ್ಲಿಕೇಶನ್‌ಗೆ ಕಳಿಸಲು ಮಾಡಿಕೊಂಡಿದ್ದರಂತೆ. ಕೆಲವು ಖಾಸಗಿ ಬಳಕೆದಾರರಿಗೆ ಹಣಕ್ಕೆ ಹೀಗೆ ನಗ್ನ ವಿಡಿಯೋ, ಚಿತ್ರಗಳನ್ನು ಕಳಿಸುವುದು ಇತ್ತೀಚೆಗೆ ದೊಡ್ಡ ಉದ್ಯಮವಾಗಿ ಮಾರ್ಪಟ್ಟಿದೆ. ಹಲವು ನಟಿಯರು, ಮಾಡೆಲ್‌ಗಳು ಈಗ ಓನ್ಲಿ ಫ್ಯಾನ್ಸ್ ನಡೆಸುತ್ತಿದ್ದಾರೆ.

  ನಾಯಕ ನಟಿಯಾಗಿ ನಟಿಸಿದ್ದ ನಟಿ ಈಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೋವಿಡ್ ಬಳಿಕ ಅವಕಾಶಗಳು ತುಸು ಕಡಿಮೆ ಆಗಿವೆ ಹಾಗಾಗಿ ಹೀಗೆ ನಗ್ನ ವಿಡಿಯೋ, ಚಿತ್ರಗಳನ್ನು ಕಳಿಸಿ ಹಣ ಗಳಿಸುತ್ತಿರುವುದಾಗಿ ಆ ನಟಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

  English summary
  Makeup man arrested for blackmailing Kannada movie actress. He stoles some private images of actress from her mobile only and blackmailed for money
  Wednesday, October 26, 2022, 13:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X