For Quick Alerts
  ALLOW NOTIFICATIONS  
  For Daily Alerts

  15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?

  |

  ಸ್ಯಾಂಡಲ್‌ವುಡ್‌ನ ಕೋಟಿ ನಿರ್ಮಾಪಕ ರಾಮು ಹಾಗೂ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಸಿನಿಮಾದ ಮುಹೂರ್ತ ಕೂಡ ಫಿಕ್ಸ್ ಆಗಿದೆ.

  Recommended Video

  Radhana Ram | ಸಿನಿಮಾ ಬಗ್ಗೆ ನಾನು ಏನೂ ಹೇಳಲ್ಲಾ | Malashri | Darshan | D56 Movie Muhurtha

  ಅನನ್ಯಾ ಅನ್ನೋ ಮೂಲ ಹೆಸರನ್ನು ರಾಧನಾ ರಾಮ್ ಎಂದು ಬದಲಾಯಿಸಿಕೊಂಡು ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ರಾಧನಾ ರಾಮ್ ನಾಲ್ಕೈದು ವರ್ಷಗಳಿಂದ ಹೀರೊಯಿನ್ ಆಗೋಕೆ ಬೇಕಾಗಿರುವ ತರಬೇತಿಯನ್ನು ಪಡೆಯುತ್ತಿದ್ದಾರೆ. ಮುಂಬೈನಲ್ಲಿ ಕಳೆದ ಎರಡು ವರ್ಷಗಳಿಂದ ನಟನೆಯಲ್ಲಿ ಟ್ರೈನಿಂಗ್ ಪಡೆದುಕೊಂಡಿದ್ದಾರೆ. 13 ವರ್ಷವಿರುಗಾಗಲೇ ರಾಧನಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ನಿರ್ಧಾರ ಮಾಡಿದ್ದರು.

  ದರ್ಶನ್ ಅಭಿಮಾನಿಗಳಿಗೆ ಡಬಲ್ ಧಮಾಕಾ; 'D56' ಚಿತ್ರಕ್ಕೆ ನಾಯಕಿ ರಾಧನಾ ರಾಮ್ದರ್ಶನ್ ಅಭಿಮಾನಿಗಳಿಗೆ ಡಬಲ್ ಧಮಾಕಾ; 'D56' ಚಿತ್ರಕ್ಕೆ ನಾಯಕಿ ರಾಧನಾ ರಾಮ್

  ಸಿನಿಮಾದಲ್ಲಿ ನಟಿಸಬೇಕು ಅಂತ ಮಗಳು ಹೇಳುತ್ತಿದ್ದಂತೆ ಮಾಲಾಶ್ರೀ ಮೊದಲು ಫೋಟೊಶೂಟ್ ಮಾಡಿಸಿದ್ದರು. ಇಲ್ಲಿಂದ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಲು ತೆರೆಮರೆಯಲ್ಲಿ ಸಿದ್ದತೆಗಳು ನಡೆದಿದ್ದವು. ಅಂದ್ಹಾಗೆ ಮಾಲಾಶ್ರೀ 15ನೇ ವಯಸ್ಸಿನಲ್ಲಿಯೇ 'ನಂಜುಂಡಿ ಕಲ್ಯಾಣ' ಸಿನಿಮಾ ಮೂಲಕ ಹೀರೊಯಿನ್ ಆಗಿ ಎಂಟ್ರಿ ಕೊಟ್ಟಿದ್ದರು. ಈಗ ಅವರ ಮಗಳು ಎಷ್ಟನೇ ವಯಸ್ಸಿಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋ ಕುತೂಹಲವಿದೆ. ಅದಕ್ಕೆ ಕನಸಿನ ರಾಣಿಯೇ ಉತ್ತರ ಕೊಟ್ಟಿದ್ದಾರೆ.

  15ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶ

  15ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶ

  ಮಾಲಾಶ್ರೀ 'ನಂಜುಂಡಿ ಕಲ್ಯಾಣ' ಸಿನಿಮಾ ಮಾಡುವುದಕ್ಕೂ ಮುನ್ನ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ್ದರು. ಆದರೆ, ಪೂರ್ಣ ಪ್ರಮಾಣ ಹೀರೊಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡಿದ್ದು 'ನಂಜುಂಡಿ ಕಲ್ಯಾಣ' ಚಿತ್ರದಿಂದ. ಈ ಕಾರಣಕ್ಕೆ ಮಗಳು ಸಿನಿಮಾರಂಗ ಪ್ರವೇಶ ಮಾಡುವ ವೇಳೆ ಆ ಜರ್ನಿಯನ್ನುನೆನಪಿಸಿಕೊಂಡಿದ್ದಾರೆ. "ನಾನು ಇಲ್ಲಿ ಕೂರುವುದಕ್ಕೆ ಕಾರಣ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಜನರ ಪ್ರೀತಿ. ಇವತ್ತು ನನಗೆ ಜೀವನ ಕೊಟ್ಟ ಈ ಚಿತ್ರರಂಗಕ್ಕೆ ನನ್ನ ಮಗಳು ಕಾಲಿಡುತ್ತಿದ್ದಾಳೆ. ನಿಮ್ಮೆಲ್ಲರ ಆಶೀರ್ವಾದ, ನಿಮ್ಮ ವಿಶ್ವಾಸ ಪ್ರೀತಿ ನನಗಿಂತ ಹೆಚ್ಚು ಕೊಡಬೇಕು ಅಂತ ಸ್ವಾರ್ಥದಿಂದ ಕೇಳಿಕೊಳ್ಳುತ್ತಿದ್ದೇನೆ." ಜನರನ್ನು ಕೇಳಿಕೊಂಡಿದ್ದಾರೆ.

  Radhana Ram : ಅವರೂ ಅಲ್ಲ.. ಇವರೂ ಅಲ್ಲ.. ದರ್ಶನ್ 56ನೇ ಸಿನಿಮಾಗೆ 'ಕಿರಣ್ ಬೇಡಿ' ಪುತ್ರಿನೇ ನಾಯಕಿ?Radhana Ram : ಅವರೂ ಅಲ್ಲ.. ಇವರೂ ಅಲ್ಲ.. ದರ್ಶನ್ 56ನೇ ಸಿನಿಮಾಗೆ 'ಕಿರಣ್ ಬೇಡಿ' ಪುತ್ರಿನೇ ನಾಯಕಿ?

  ಮಾಲಾಶ್ರೀ ಪುತ್ರಿ ವಯಸ್ಸು ಎಷ್ಟು?

  ಮಾಲಾಶ್ರೀ ಪುತ್ರಿ ವಯಸ್ಸು ಎಷ್ಟು?

  'ನಂಜುಂಡಿ ಕಲ್ಯಾಣ' ಸಿನಿಮಾದಲ್ಲಿ ಮಾಲಾಶ್ರೀ ಹೀರೊಯಿನ್ ಆದಾಗ, ಅವರಿಗೆ ಕೇವಲ 15 ವರ್ಷ. ಈಗ ಅವರ ಪುತ್ರಿ ರಾಧನಾ ರಾಮ್ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಹೀಗಾಗಿ ಅವರ ವಯಸ್ಸಿನ ಬಗ್ಗೆನೂ ಚರ್ಚೆಯಾಗಿತ್ತು. ಅದಕ್ಕೆ ಮಾಲಾಶ್ರೀಯವರೇ ಉತ್ತರ ನೀಡಿದ್ದಾರೆ. "ನಾನು ನಂಜುಂಡಿ ಕಲ್ಯಾಣ ಸಿನಿಮಾ ಮಾಡುವಾಗ ನನಗೆ 15 ವರ್ಷ. ಆಗ ತುಂಬಾ ಚಿಕ್ಕವಳಿದ್ದೆ. ನನ್ನ ಮಗಳಿಗೀಗ 21 ವರ್ಷ. ಈಗ ಅವರು ಸಿನಿಮಾ ಮಾಡುತ್ತಿದ್ದಾಳೆ. ನನ್ನ ಜೊತೆ ಮೊದಲು ರಾಕ್‌ಲೈನ್ ಪ್ರೊಡಕ್ಷನ್ ಸಿನಿಮಾ ಮಾಡಿದ್ದರು. ಈಗ ನನ್ನ ಮಗಳು ಮೊದಲ ಸಿನಿಮಾವನ್ನು ಅವರ ಪ್ರೊಡಕ್ಷನ್‌ನಲ್ಲಿ ಶುರು ಮಾಡಿದ್ದಾರೆ. ಅದರಲ್ಲೂ ದರ್ಶನ್ ಸಿನಿಮಾದೊಂದಿಗೆ ಲಾಂಚ್ ಆಗ್ತಿದ್ದಾರೆ ಅಂದಾಗ ತುಂಬಾನೇ ಖುಷಿಯಾಗಿದೆ." ಎನ್ನುತ್ತಾರೆ ಮಾಲಾಶ್ರೀ.

  ರಾಧನಾ ಇನ್ನೂ ಶಾಕ್‌ನಿಂದ ಹೊರಬಂದಿಲ್ಲ

  ರಾಧನಾ ಇನ್ನೂ ಶಾಕ್‌ನಿಂದ ಹೊರಬಂದಿಲ್ಲ

  " ಇದು ಅನಿರೀಕ್ಷಿತವಾಗಿ ನನಗೆ ಸಿಕ್ಕಿದ ಆಫರ್. ಈಗ ಈ ಸಿನಿಮಾ ಮಾಡುತ್ತಿದ್ದೇನೆ ಅಂತ ಅರಗಿಸಿಕೊಳ್ಳುತ್ತಿದ್ದೇನೆ. ದರ್ಶನ್ ಅವರೊಂದಿಗೆ ಹಾಗೂ ರಾಕ್‌ಲೈನ್ ಪ್ರೊಡಕ್ಷನ್ ಅವರೊಂದಿಗೆ ಮಾಡುತ್ತಿದ್ದೇನೆ ಅಂತ ಅನಿಸುತ್ತಿದೆ. ನಾನು ತುಂಬಾ ಚಿಕ್ಕವಳಿದ್ದಾಗ ನಾಚಿಕೆ ಸ್ವಭಾವವಿತ್ತು. ಈಗ ತರಬೇತಿ ತೆಗೆದುಕೊಂಡು, ಆಸಕ್ತಿ ಇಟ್ಟುಕೊಂಡು ಬಂದಿದ್ದೇನೆ." ಎಂದು ರಾಧನಾ ಮೊದಲ ಸಿನಿಮಾ ಬಗ್ಗೆ ಮಾತಾಡಿದ್ದಾರೆ.

  ರಾಧನಾ ರಾಮ್ ಹೆಸರಿಟ್ಟಿದ್ದು ರಾಮು

  ರಾಧನಾ ರಾಮ್ ಹೆಸರಿಟ್ಟಿದ್ದು ರಾಮು

  ಅಂದ್ಹಾಗೆ ಕೋಟಿ ನಿರ್ಮಾಪಕ ರಾಮು ಅವರೇ ತಮ್ಮ ಮಗಳಿಗೆ ರಾಧನಾ ರಾಮ್ ಅಂತ ಹೆಸರು ಇಟ್ಟಿದ್ದರು. ಸಿನಿಮಾ ಇಂಡಸ್ಟ್ರಿಗೆ ಬರುವಾಗ ಹೆಸರು ಬದಲಾವಣೆ ಮಾಡೋಣ ಅಂತ ಅವರೇ ಹೇಳಿದ್ದರು. ಅದರಂತೆಯೇ ಮಗಳಿಗೆ ಹೆಸರನ್ನು ಬದಲಾವಣೆ ಮಾಡಿದ್ದಾರೆ. 'ರಾ' ಸೆಂಟಿಮೆಂಟ್ ಏನೂ ಇಲ್ಲ ಅಂತ ಮಾಲಾಶ್ರೀ ಸ್ಪಷ್ಟಪಡಿಸಿದ್ದಾರೆ. ರಾಧನಾ ರಾಮ್ ಅವರನ್ನು ಮನೆಯಲ್ಲಿ ಅನಿ ಅಂತಲೇ ಕರೆಯುತ್ತಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂತದರೆ, ರಾಧನಾ ಈಗಾಗಲೇ ರವಿಚಂದ್ರನ್ ನಟಿಸಿದ್ದ 'ಮಲ್ಲ' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು.

  English summary
  Malashri Entered Film Industry At 15, Her Daughter Radhana Ram Entering at 21, Know More.
  Friday, August 5, 2022, 15:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X