»   » ನಟಿ ಅಪಹರಣ: ಕಲಾವಿದರ ಸುರಕ್ಷತೆ ಬಗ್ಗೆ ಗರಂ ಆದ ಸೆಲೆಬ್ರಿಟಿಗಳು

ನಟಿ ಅಪಹರಣ: ಕಲಾವಿದರ ಸುರಕ್ಷತೆ ಬಗ್ಗೆ ಗರಂ ಆದ ಸೆಲೆಬ್ರಿಟಿಗಳು

Posted By:
Subscribe to Filmibeat Kannada

ಬಹಭಾಷಾ ನಟಿಯೊಬ್ಬರನ್ನು ಅವರ ಕಾರು ಚಾಲಕರೇ ಅಪಹರಿಸಿ, ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ವರದಿ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಕಾಳಜಿ ಬಗ್ಗೆ ಚರ್ಚೆ ಆಗುತ್ತಿದೆ. ಖ್ಯಾತ ನಟಿಯರಿಗೆ ಇಂತಹ ಸಮಸ್ಯೆಗಳು ಎದುರಾಗುತ್ತಿರುವಾಗ, ಸಾಮಾನ್ಯ ಮಹಿಳೆಯರ ಗತಿಯೇನು ಎಂಬ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

malayalam-actress-abduction-kannada-celebrities-reaction

ಚಿತ್ರೀಕರಣ ಮುಗಿಸಿ ಮನೆಗೆ ತೆರೆಳುತ್ತಿದ್ದಾಗ ತ್ರಿಶೂರ್ ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತದ ನಾಟಕವಾಡಿ, ದುಷ್ಕರ್ಮಿಗಳು ನಟಿಯನ್ನ ಅಲ್ಲಿಂದ ಅಪಹರಿಸಿದ್ದರು. ಈ ವೇಳೆ ದೈಹಿಕವಾಗಿ ಹಲ್ಲೆ ಮಾಡಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು, ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದ ನಟಿ ಅವರು ಪೊಲೀಸರಿಗೆ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ನಟಿಯ ರಕ್ಷಣೆ ಕುರಿತು ಸ್ಯಾಂಡಲ್ ವುಡ್ ನಲ್ಲಿ ಕೇಳಿಬಂದ ಪ್ರತಿಕ್ರಿಯೆಗಳು ಇಲ್ಲಿವೆ.[ಕನ್ನಡದಲ್ಲೂ ಅಭಿನಯಿಸಿದ್ದ ಬಹುಭಾಷಾ ನಟಿ ಅಪಹರಣ]

gurunandan

''ಚಿತ್ರೀಕರಣಕ್ಕೆ ದೂರದ ಹಳ್ಳಿ ಪ್ರದೇಶಗಳಿಗೆ ಯಾವುದೇ ಕಲಾವಿದರನ್ನು ಆಗಲಿ, ನಟ-ನಟಿಯರನ್ನು ಆಗಲಿ ಕರೆದುಕೊಂಡು ಹೋದಾಗ, ಪ್ರೊಡಕ್ಷನ್ ಹೌಸ್ ನವರು ಹೆಚ್ಚು ಸುರಕ್ಷತೆ ನೀಡಬೇಕು. ಆದರೆ ಈ ಘಟನೆ ಬೇಸರ ತರಿಸಿದೆ, ಅಲ್ಲದೇ ಅವರಿಗೆ ಎಷ್ಟು ಮಟ್ಟದಲ್ಲಿ ಸುರಕ್ಷತೆ ಸಿಕ್ಕಿದೆ ಎಂಬುದು ತಿಳಿದುಬರುತ್ತದೆ'' - ಗುರುನಂದನ್, ನಟ [ಮಲಯಾಳಂ ನಟಿ ಕಿಡ್ನಾಪ್ ರೂವಾರಿ ಸುನೀಲ್: ಘಟನೆಯ ಪೂರ್ಣ ವಿವರ]

M G Srinivas

''ಅವರು ತುಂಬಾ ಸ್ವೀಟ್ ಪರ್ಸನ್. ಯಾವತ್ತಿಗೂ ಅವರು ಯಾವುದೇ ವ್ಯಕ್ತಿಗೆ ತೊಂದರೆ ಆಗುವಂತೆ ಮಾತನಾಡಿದವರಲ್ಲ. ಇವೆನ್ ಅವರ ಕಾರು ಚಾಲಕರಿಗೂ ತೊಂದರೆ ಕೊಟ್ಟಿಲ್ಲ. ಅವರಿಗೆ ಈ ರೀತಿ ಕಿರುಕುಳ, ಹಿಂಸೆ ಕೊಟ್ಟಿರುವುದು ಬೇಸರ ತಂದಿದೆ'' - ಎಂ.ಜಿ.ಶ್ರೀನಿವಾಸ್, ನಟ-ನಿರ್ದೇಶಕ

malavika avinash

''ಬಹಳ ಅಘಾತಕಾರಿ ವಿಷಯ ಇದು. ಪರಿಚಿತರೇ ಈ ರೀತಿ ಮಾಡಿದ್ದಾರೆ ಅಂದ್ರೆ ಯಾರನ್ನ ನಂಬೋದು ಅಂತಾನೆ ಗೊತ್ತಾಗಲ್ಲ. ಯಾರು ಇವರಿಗೆಲ್ಲ ಡ್ರೈವಿಂಗ್ ಲೈಸೆನ್ಸ್ ಕೊಡುತ್ತಾರೋ, ಅವರಿಂದ ಆಗಾಗ ಡ್ರೈವರ್ ಗಳ ಬ್ಯಾಕ್ ಗ್ರೌಂಡ್ ಚೆಕ್ ಆಗಬೇಕು. ಇಂತಹ ಘಟನೆಗಳಾದಾಗ ಇವರಿಗೆ ಏನ್ ಶಿಕ್ಷೆ ಆಗುತ್ತೆ ಅನ್ನೋದನ್ನ ಫಾಲೋ ಮಾಡಬೇಕು. ಆ ನಟಿ ಚಾಲಕರ ಬಗ್ಗೆ ಪರಿಶೀಲನೆ ನಡೆಸಿಲ್ಲ ಅನಿಸುತ್ತೆ. ಅಲ್ಲದೇ ಈ ಘಟನೆ ಹಿನ್ನೆಲೆಯಲ್ಲಿ ಕೇರಳದ ಕಲಾವಿದರ ಸಂಘ ಇವರಿಗೆ ಬೆಂಬಲ ನೀಡಿಲ್ಲ'' -ಮಾಳವಿಕಾ ಅವಿನಾಶ್, ನಟಿ

English summary
Malayalam Actress allegedly abducted, molested in moving car. Kannada Celebrities have reacted to this issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada