ಕಂದಮ್ಮನ ನಿರೀಕ್ಷೆಯಲ್ಲಿ ತಾರೆ ಅಮಲಾ ಪೌಲ್?
ಮಲ್ಲು ಬೆಡಗಿ ಅಮಲಾ ಪೌಲ್ ಮದುವೆಯಾಗಿ ನಾಲ್ಕು ತಿಂಗಳು ಕಳೆಯುತ್ತಿದೆ. ಇನ್ನೂ ವಿಶೇಷ ಏನೂ ಇಲ್ವಾ ಎಂದು ಕೇಳುವವರಿಗೆ ಒಂದು ಸ್ಪೆಷಲ್ ಸುದ್ದಿ ಇದೆ. ಅದೇನೆಂದರೆ ಅವರೀಗ ಗರ್ಭಿಣಿ ಎಂಬುದು. ಇದೇ ಭಾನುವಾರ (ಅ.26) ಅವರು ಇಪ್ಪತ್ತಮೂರಕ್ಕೆ ಅಡಿಯಿಟ್ಟರು.
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಪತಿ ಕಮ್ ನಿರ್ದೇಶಕ ಎ ಎಲ್ ವಿಜಯ್ ಅವರು ಕೊಟ್ಟ ಉಡುಗೊರೆಗೆ ಅಮಲಾ ಕಮಲದಂತೆ ಅರಳಿದ್ದಾರೆ. ಇದಕ್ಕೆ ಪ್ರತಿಯಾಗಿ ತಮ್ಮ ಪತಿಗೆ ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ ಎಂದು ಕಿವಿಯಲ್ಲಿ ತಾವು ಅಪ್ಪ ಆಗುತ್ತಿರುವ ಸುದ್ದಿ ತಿಳಿಸಿದ್ದಾರಂತೆ. [ಹಿಂದೂ ಸಂಪ್ರದಾಯದಂತೆ ಅಮಲಾ ಪೌಲ್ ಮದುವೆ]

ಇನ್ನೊಂದು ವಿಶೇಷ ಎಂದರೆ, "I don't know what to say but one thing for sure, am blessed a child!!! Thank u Lord (sic)" ಎಂದಿದ್ದಾರೆ. ಅವರು ಹೀಗೆಲ್ಲಾ ಹೇಳಿರುವುದು ಬಹುಶಃ ಗರ್ಭಿಣಿ ಇರಬಹುದೇ ಎಂಬ ಅನುಮಾನ ಮೂಡಿಸಿದೆ. ಸದ್ಯಕ್ಕೆ ಅಮಲಾ ಅವರು ಮಲಯಾಳಂನ 'ಲೈಲಾ ಓ ಲೈಲಾ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.
ತಮ್ಮ ನಿಶ್ಚಿತಾರ್ಥವನ್ನು ಕ್ರೈಸ್ತ ಸಂಪ್ರದಾಯದಂತೆ ಮಾಡಿಕೊಂಡಿದ್ದ ಅಮಲಾ ಮದುವೆ ಮಾತ್ರ ಪಕ್ಕಾ ಹಿಂದೂ ಸಂಪ್ರದಾಯದಂತೆ ಆಗಿದ್ದರು. ಈ ಬೆಡಗಿ ಕನ್ನಡಕ್ಕೂ ಅಡಿಯಿಡಲಿದ್ದಾರೆ ಎಂಬ ಸುದ್ದಿ ಇತ್ತು. ಅದೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಅಂಬರೀಶ' ಚಿತ್ರಕ್ಕೆ ಬರಲಿದ್ದಾರೆ ಎಂಬ ಸುದ್ದಿ ಕಡೆಗೂ ನಿಜವಾಗಲೇ ಇಲ್ಲ.


Click it and Unblock the Notifications











