»   » ಮೊದಲ ದಿನವೇ ಬಾಕ್ಸಾಫೀಸಲ್ಲಿ ಭರ್ಜರಿ ಸುರಿ'ಮಳೆ'!

ಮೊದಲ ದಿನವೇ ಬಾಕ್ಸಾಫೀಸಲ್ಲಿ ಭರ್ಜರಿ ಸುರಿ'ಮಳೆ'!

Posted By:
Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಬಬ್ಲಿ ಸ್ಟಾರ್ ಅಮೂಲ್ಯ ಅವರಿಗೆ 'ಮಳೆ' ಒಳ್ಳೆ ಶಕುನ ನುಡಿದಿದೆ. ಏನಪ್ಪ ಅಂತ ಯೋಚನೆ ಮಾಡೋಕೆ ಹೋಗಬೇಡಿ. ನಿನ್ನೆ (ಆಗಸ್ಟ್ 7) ತಾನೇ ಭರ್ಜರಿಯಾಗಿ ಓಪನ್ನಿಂಗ್ ಮಡೆದುಕೊಂಡ ನಿರ್ದೇಶಕ ಎ.ಆರ್ ಶಿವ ತೇಜಸ್ ಆಕ್ಷನ್-ಕಟ್ ಹೇಳಿರುವ 'ಮಳೆ' ಚಿತ್ರ ಕೇವಲ ಒಂದೇ ದಿನದಲ್ಲಿ ಗೆಲ್ಲುವ ಎಲ್ಲಾ ಸೂಚನೆಯನ್ನು ನೀಡಿದೆ.

ನೀವು ನಂಬ್ತಿರೋ ಬಿಡ್ತಿರೋ ಆದರೆ 'ಮಳೆ' ಚಿತ್ರ ಕೇವಲ ಒಂದೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ, ಬರೋಬ್ಬರಿ 1.60 ಕೋಟಿ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಸಿಹಿ ಮಾವು ಆಗಿ ಮಾರ್ಪಟ್ಟಿದೆ.[ಮಳೆ ವಿಮರ್ಶೆ : ಸಿಂಪಲ್ ಕಥೆ, ಸ್ವಲ್ಪ ನಾಟಕ, ಲವ್ ಜರ್ನಿ]


'ಚಾರ್ ಮಿನಾರ್' ಖ್ಯಾತಿಯ ನಿರ್ದೇಶಕ ಆರ್.ಚಂದ್ರು ನಿರ್ಮಾಣದಲ್ಲಿ ಮೂಡಿಬಂದಿರುವ 'ಮಳೆ' ಕನ್ನಡ ಸಿನಿ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಅಂದ್ರೆ ಖಂಡಿತ ತಪ್ಪಾಗಲಾರದು.


ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ಪ್ರೇಮ್ ಅವರ ಚಿತ್ರಬದುಕಿನಲ್ಲಿ ಬಿಗ್ಗೆಸ್ಟ್ ಓಪನ್ನಿಂಗ್ ಪಡೆದುಕೊಂಡ ಮೊದಲ ಚಿತ್ರ 'ಮಳೆ'. ಕರ್ನಾಟಕದಾದ್ಯಂತ ಸುಮಾರು 180 ಚಿತ್ರಮಂದಿರಗಳಲ್ಲಿ ತೆರೆ ಕಂಡ 'ಮಳೆ' ಸದ್ಯಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಮಳೆಯಲ್ಲಿ ನೆನೆಯಿರಿ]


ಒಟ್ನಲ್ಲಿ ಹೇಳಬೇಕೆಂದರೆ ಇದೇ ಮೊದಲ ಬಾರಿಗೆ ಪರದೆ ಮೇಲೆ ಒಂದಾಗಿರುವ ಪ್ರೇಮ್ ಹಾಗೂ ಅಮೂಲ್ಯ ಜೋಡಿ ವೀಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಅಂತೂ ಇಂತೂ ಪ್ರೇಕ್ಷಕರು ತೆರೆಯ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಅಮೂಲ್ಯ ಅವರನ್ನು ಗ್ರ್ಯಾಂಡ್ ಆಗೇ ಒಪ್ಪಿಕೊಂಡಿದ್ದಾರೆ ಅಂತಾಯ್ತು. ಮುಂದೆ ಓದಿ....


ಒಂದು ದಿನದ ಬಾಕ್ಸಾಫೀಸ್ ಕಲೆಕ್ಷನ್ 1.60 ಕೋಟಿ

ಆರ್ ಚಂದ್ರು ಹೋಮ್ ಬ್ಯಾನರ್ ಅಡಿಯಲ್ಲಿ ಇಡೀ ಕರ್ನಾಟಕದಾದ್ಯಂತ ಉತ್ತಮ ಆರಂಭ ಪಡೆದುಕೊಂಡ 'ಮಳೆ' ಲವ್ಲಿ ಸ್ಟಾರ್ ಪ್ರೇಮ್ ಸಿನಿ ಬದುಕಿಗೆ ಉತ್ತಮ ಬ್ರೇಕ್ ನೀಡುವ ಎಲ್ಲಾ ಸೂಚನೆಗಳು ಕಾಣಬರುತ್ತಿದೆ ಎಂದು ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ['ಮಳೆ'ಯಲ್ಲಿ ಪ್ರೇಮ್-ಅಮೂಲ್ಯ ನಡುವೆ ಏನೋ ಸರಿಯಿಲ್ಲ]


ಲವ್ಲಿ ಸ್ಟಾರ್ ಪ್ರೇಮ್-ಬಬ್ಲಿ ಸ್ಟಾರ್ ಅಮೂಲ್ಯ

'ಶ್ರಾವಣಿ ಸುಬ್ರಮಣ್ಯ' ಹಾಗೂ 'ಚಾರ್ ಮಿನಾರ್' ನೋಡಿದ ಕನ್ನಡದ ಪ್ರೇಕ್ಷಕರು 'ಮಳೆ' ಚಿತ್ರಕ್ಕೆ ಫಿದಾ ಆಗೋದು ಗ್ಯಾರಂಟಿ. ಯಾಕಂದ್ರೆ ಅಷ್ಟರಮಟ್ಟಿಗೆ ಸ್ಕ್ರೀನ್ ಮೇಲೆ ಪ್ರೇಮ್ ಹಾಗು ಅಮೂಲ್ಯ ಕೆಮಿಸ್ಟ್ರಿ ವರ್ಕ್ ಆಗಿದ್ದು, ಇಡೀ ಚಿತ್ರದಲ್ಲಿ ಹೈಲೈಟ್ ಆಗಿದೆ.


ಲವ್ಲಿ ಸ್ಟಾರ್ ಪ್ರೇಮ್

'ಚಾರ್ ಮಿನಾರ್' ಚಿತ್ರದ ನಂತರ 'ಮಳೆ' ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿರುವ ಪ್ರೇಮ್ ಎಲ್ಲರಿಗೂ ಇಷ್ಟವಾಗಿದ್ದಾರೆ. ಮಾತ್ರವಲ್ಲದೇ 'ಮಳೆ'ಯಲ್ಲಿ ಪಕ್ಕಾ ಲವರ್ ಬಾಯ್ ಆಗಿ ಮಿಂಚಿದ್ದು, ಹುಡುಗಿಯರ ಹಾಟ್ ಫೇವರಿಟ್ ಆಗಿದ್ದಾರೆ


"ನಿನ್ನಂದ ನೋಡಲೆಂದು ಚಂದಮಾಮನು"

ಒಟ್ಟಾರೆ 'ಮಳೆ'ಯ ಮುಖ್ಯ ಆಕರ್ಷಣೆ ಅಂದ್ರೆ ಚಿತ್ರದ ಸುಂದರ ಹಾಡುಗಳು. ಚಿತ್ರ ಬಿಡುಗಡೆಗೆ ಮುಂಚೆನೇ ಸಂಗೀತ ಪ್ರೀಯರ ಮನಗೆದ್ದಿರುವ ಎಲ್ಲಾ ಹಾಡುಗಳು ಬೆಸ್ಟ್ ಎನಿಸಿಕೊಂಡಿವೆ. ಅದರಲ್ಲೂ 'ನಿನ್ನಂದ ನೋಡಲೆಂದು ಚಂದಮಾಮನು' ಹಾಡಿನಲ್ಲಿ ಅಮೂಲ್ಯ ಹಾಗು ಪ್ರೇಮ್ ಸಖತ್ ಕ್ಯೂಟ್ ಪ್ರೇಮಿಗಳು ಅನಿಸಿಕೊಳ್ಳುತ್ತಾರೆ.


ಕರ್ನಾಟಕದಾದ್ಯಂತ 180 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ

ಇದೇ ಮೊದಲ ಬಾರಿಗೆ 'ಮಳೆ' ಚಿತ್ರದ ಮೂಲಕ ಪ್ರೇಮ್ ಅಭಿನಯಕ್ಕೆ ಹೆಚ್ಚಿನ ರೆಸ್ಪಾನ್ಸ್ ಸಿಗುತ್ತಿದ್ದು, ಈ ಎಲ್ಲಾ ಕ್ರೆಡಿಟ್ ಇಡೀ ಚಿತ್ರತಂಡಕ್ಕೆ ಹಾಗೂ ನಿರ್ಮಾಪಕ ಆರ್ ಚಂದ್ರು ಅವರಿಗೆ ಸಲ್ಲುತ್ತದಂತೆ.


'ಮಳೆ' v/s ಶ್ರೀಮಂತುಡು

ಹೊಸಬರ ಹಿಟ್ ಚಿತ್ರ 'ರಂಗಿತರಂಗ' ತೆಲುಗು ಚಿತ್ರ 'ಬಾಹುಬಲಿ' ಗೆ ಸೆಡ್ಡು ಹೊಡೆದು ನಿಂತರೆ ಇದೀಗ ಪ್ರಿನ್ಸ್ ಮಹೇಶ್ ಬಾಬು 'ಶ್ರೀಮಂತುಡು' ಚಿತ್ರಕ್ಕೆ ಆರ್.ಚಂದ್ರು 'ಮಳೆ' ಎದುರಾಗಿ ನಿಂತಿದೆ. ಇದೀಗ ಪ್ರೇಮ್ 'ಮಳೆ' ಯಿಂದ 'ಶ್ರೀಮಂತುಡು' ಚಿತ್ರಕ್ಕೆ ಕಲೆಕ್ಷನ್ ಪ್ರಾಬ್ಲಂ ಆಗಿದೆ ಅನ್ನೋದು ಗಾಂಧಿನಗರದ ಮಂದಿ ಅಭಿಪ್ರಾಯ.


English summary
Lovely Star Prem wins through Male! According to the trade reports from Gandhinagara, AR Shiva Tejas's directorial debut Male has turned out to be fruitful. The movie has collected Rs 1.60 Crores on its first day at the box office.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada