ಅಂತಿಮ ದರ್ಶನದ ವೇಳೆ ಕಾಡುತ್ತಿರುವ ಸೆಲ್ಫಿ ಗೀಳು, ರಮ್ಯಾ ಮೇಡಂ ಗೈರು.!

By ಯಶಸ್ವಿನಿ.ಎಂ.ಕೆ

ತಮ್ಮ ನಾಯಕ ಹಾಗೂ ನೆಚ್ಚಿನ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ. ಈ ನಡುವೆ ಸೆಲ್ಪಿ ಪ್ರಿಯರ ಸೆಲ್ಪಿ ಹುಚ್ಚಾಟದಿಂದ ಇತರ ಅಭಿಮಾನಿಗಳಿಗೆ ಇರುಸುಮುರುಸು ಉಂಟಾಗಿದೆ.

ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಸೇರಿದಂತೆ ಇತರ ಗಣ್ಯರು ಸ್ಟೇಡಿಯಂನತ್ತ ಧಾವಿಸುತ್ತಿದ್ದಾರೆ. ನೂಕು ನುಗ್ಗಲಿನಲ್ಲಿಯೇ ಅಂಬಿ ಪಾರ್ಥಿವ ಶರೀರ ಸೆರೆಯಾಗುವ ಹಾಗೆ ಅಭಿಮಾನಿಗಳು ಸೆಲ್ಪಿ ತೆಗೆಯಲು ಮುಂದಾಗಿದ್ದಾರೆ.

ಇದರಿಂದ ಇತರ ಅಭಿಮಾನಿಗಳಿಗೆ ಕಿರಿಕಿರಿ ತಂದಿದ್ದು, ಇದನ್ನು ಗಮನಿಸಿದ ಸಚಿವ ಸಿ.ಹೆಚ್.ಪುಟ್ಟರಾಜು ಅವರು ಸೆಲ್ಪಿ ತೆಗೆಯಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಘಟನೆ ಸಹ ನಡೆಯಿತು.

ಅಲ್ಲದೇ, ಅಂತಿಮ ದರ್ಶನ ಪಡೆಯಲು ರಮ್ಯಾ ಬಾರದೇ ಇರುವುದಕ್ಕೂ ನಾಗರೀಕರು ಹಿಡಿಶಾಪ ಹಾಕಿದರು. ಮುಂದೆ ಓದಿರಿ...

ರಮ್ಯಾ ಗೈರಿಗೆ ನಾಗರೀಕರ ಹಿಡಿಶಾಪ

ರಮ್ಯಾ ಗೈರಿಗೆ ನಾಗರೀಕರ ಹಿಡಿಶಾಪ

ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಮರೆತಿದ್ದಾರೆ ಎನ್ನುವ ಆರೋಪ ಸದ್ಯ ನಿಜವಾದಂತೆ ತೋರುತ್ತಿದೆ. ಕಾರಣ ಮಂಡ್ಯ ರಾಜಕೀಯಕ್ಕೆ ರಮ್ಯಾರನ್ನು ಪರಿಚಯಿಸಿ ಮೊದಲ ಬಾರಿಗೆ ಸಂಸದಳಾಗಲು ಸಹಕರಿಸಿದ ಅಂಬರೀಶ್ ರವರ ಅಂತಿಮ ದರ್ಶನಕ್ಕೂ ಸಹ ನಟಿ ರಮ್ಯಾ ಬಾರದಿರುವುದು ಬೇಸರ ತರಿಸಿದೆ.

ಟ್ವೀಟ್ ಮಾಡಿದರೆ ಸಾಲದು

ಟ್ವೀಟ್ ಮಾಡಿದರೆ ಸಾಲದು

''ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ ದುಃಖಭರಿತ ತೋರಿಸಿದರೇ ಸಾಲುವುದಿಲ್ಲ. ಬಂದು ಅಂತಿಮ ದರ್ಶನ ಏಕೆ ಪಡೆದಿಲ್ಲ'' ಎಂದು ಮಂಡ್ಯದ ಜನರು ರಮ್ಯಾಗೆ ಹಿಡಿಶಾಪ ಸಹ ಹಾಕುತ್ತಿದ್ದಾರೆ.

ರಮ್ಯಾ ಮಾಡಿದ್ದ ಟ್ವೀಟ್ ಏನು.?

''ಅಂಬರೀಶ್ ಅಂಕಲ್ ತೀರಿಕೊಂಡ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುವೆ'' ಎಂದು ರಮ್ಯಾ ಟ್ವೀಟ್ ಮಾಡಿದ್ದರು.

ಇಂದು ಅಂತಿಮ ಸಂಸ್ಕಾರ

ಇಂದು ಅಂತಿಮ ಸಂಸ್ಕಾರ

ಇವತ್ತು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯ ಸಂಸ್ಕಾರ ನಡೆಯಲಿದೆ. ಗೌಡ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನೆರವೇರಲಿದೆ.

More from Filmibeat

English summary
Mandya people are annoyed with Kannada Actress, Congress Politician Ramya for not paying last respect to Ambareesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X