»   » ಕನ್ನಡದ ಬೆಡಗಿಗೆ ಪರಭಾಷೆಯಲ್ಲಿ ಭಾರಿ ಬೇಡಿಕೆ

ಕನ್ನಡದ ಬೆಡಗಿಗೆ ಪರಭಾಷೆಯಲ್ಲಿ ಭಾರಿ ಬೇಡಿಕೆ

Posted By:
Subscribe to Filmibeat Kannada

ಮಂಗಳೂರಿನ ಬೆಡಗಿ ನಟಿ ಪೂಜಾ ಹೆಗಡೆ ಅವರಿಗೆ ಸದ್ಯ ಪರಭಾಷೆಯ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಬಂದಿದೆ. ಮೊಹೆಂಜೋ ದಾರೋ ಚಿತ್ರದಲ್ಲಿ ಹೃತಿಕ್ ಜೊತೆ ನಾಯಕಿಯಾಗಿ ಅಭಿನಯಿಸಿದ ನಂತರ ಪೂಜಾ ಸಖತ್ ಫೇಮಸ್ ಆದರು. ಹೃತಿಕ್ ನಂತರ ಅಲ್ಲು ಅರ್ಜುನ್ ಜೊತೆಯಲ್ಲೂ ಪೂಜಾ ನಾಯಕಿಯಾಗಿ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡರು.

ಬಾಲಿವುಡ್ ಮಾತ್ರವಲ್ಲದೆ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿಯೂ ಪೂಜಾ ಅಭಿನಯಕ್ಕೆ ಸಖತ್ ಬೇಡಿಕೆ ಬಂದಿದೆ. ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಹೊಸ ಚಿತ್ರಕ್ಕೆ ಪೂಜಾ ಹೆಗಡೆ ನಾಯಕಿ.

ಇದರ ಜೊತೆಯಲ್ಲಿ ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾದಲ್ಲಿ ಪೂಜಾ ಹೆಗಡೆ ಆಕ್ಟ್ ಮಾಡುತ್ತಿದ್ದಾರೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಸೌತ್ ಸಿನಿ ದುನಿಯಾದ ಬಾಹುಬಲಿ ಅಂತಾನೇ ಪ್ರಖ್ಯಾತಿ ಪಡೆದಿರುವ ಪ್ರಭಾಸ್ ಚಿತ್ರಕ್ಕೂ ಪೂಜಾ ಹೆಗಡೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.

Mangalore-based actress Pooja Hegde is busy in Tollywood

ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವುದು ಪೂಜಾ ಅವರಿಗೆ ಖುಷಿ ತಂದಿದ್ಯಂತೆ. ಅಷ್ಟೇ ಅಲ್ಲದೆ ಬಾಲಿವುಡ್ ನಿಂದಲೂ ಅವಕಾಶಗಳ ಬರುತ್ತಿದ್ದು ಸದ್ಯ ತೆಲುಗು ಚಿತ್ರಗಳಲ್ಲಿ ಪೂಜಾ ಬ್ಯುಸಿ ಆಗಿದ್ದಾರೆ.

Mangalore-based actress Pooja Hegde is busy in Tollywood

ಸಿನಿಮಾರಂಗಕ್ಕೆ ಬಂದು ಆರು ವರ್ಷಗಳು ಕಳೆದಿದ್ದು ಸ್ಟಾರ್ ನಟರಗಳ ಜೊತೆಯಲ್ಲಿ ಪೂಜಾ ಅವಕಾಶಗಳನ್ನ ಪಡೆದುಕೊಂಡಿರುವುದು ಖುಷಿಯ ವಿಚಾರ. ಇಷ್ಟೆಲ್ಲಾ ಫೇಮಸ್ ಆಗಿರುವ ಕನ್ನಡದ ಬೆಡಗಿಯನ್ನ ಸ್ಯಾಂಡಲ್ ವುಡ್ ಗೆ ಕರೆತರುವ ಪ್ರಯತ್ನ ಯಾರಾದರೂ ಮಾಡುತ್ತಾರ ಕಾದು ನೋಡಬೇಕು.

English summary
Mangalore-based actress Pooja Hegde is busy in Tollywood, Pooja Hegde is acting with Mahesh Babu,Junior NTR, including Prabas movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada