»   » ಮಂಗಳೂರು ಹೋಮ್ ಸ್ಟೇ ಕಥೆ ಹಾರರ್ ಚಿತ್ರ

ಮಂಗಳೂರು ಹೋಮ್ ಸ್ಟೇ ಕಥೆ ಹಾರರ್ ಚಿತ್ರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಂಗಳೂರಿನ ಹೋಂ ಸ್ಟೇ ಪ್ರಕರಣ 2012ರಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಯ್ತು. ಈ ಪ್ರಕರಣದ ಘಟನಾವಳಿಯ ಸತ್ಯಾಸತ್ಯತೆಗಳನ್ನು ಬಿಚ್ಚಿಡುವ ಚಿತ್ರವೊಂದು ಕೊನೆಗೂ ಕೊನೆ ಹಂತ ತಲುಪಿದೆ. ಕಳೆದ ವರ್ಷವೇ ಸೆಟ್ಟೇರಿದ ಚಿತ್ರಕ್ಕೆ ಅನೇಕ ವಿಘ್ನಗಳು ಕಾಡುತ್ತಲೇ ಇತ್ತು.

'ಹೋಮ್ ಸ್ಟೇ' ಅನ್ನೋ ಈ ಸಿನಿಮಾದಲ್ಲಿ ಶ್ರುತಿ ದೆವ್ವವಾಗಿ ಕಾಡಲಿದ್ದಾರೆ. ಗಟ್ಟಿ ಗುಂಡಿಗೆ ಇರೋರಿಗೂ ಒಂದು ಸಾರಿ ಭಯ ಹುಟ್ಟಿಸ್ತಾರಂತೆ. ಈ ಹಿಂದೆ ಒಮ್ಮೆ ಮಾತ್ರ ದೆವ್ವವಾಗಿ ಕನ್ನಡದಲ್ಲಿ ಭಯ ಹುಟ್ಟುಹಾಕಿದ್ದ ಶ್ರುತಿ ಈಗ ಮೂರುಭಾಷೆಗಳಲ್ಲಿ ಭಯಪಡಿಸೋಕೆ ರೆಡಿಯಾಗ್ತಿದ್ದಾರೆ. ಬಾಲಿವುಡ್ ಗೂ ನಮ್ಮ ಶ್ರುತಿ ಎಂಟ್ರಿ ಕೊಡುತ್ತಿದ್ದಾರೆ.

ಸಂತೋಷ್ ಕೋಡಂಕೇರಿ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಸಿದ್ದು ಕೊನ್ನೂರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿಕಾಳೆ ಸೇರಿದಂತೆ ಹಲವು ಕಲಾವಿದರಿದ್ದಾರೆ. ಈ ಸೈಕೋಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಒನ್ ಇಂಡಿಯಾ ಕನ್ನಡದಲ್ಲಿ ಸುದ್ದಿ ಓದಿರುತ್ತೀರಿ

ಈ ಚಿತ್ರದ ಮೂಲಕ ಬಾಲಿವುಡ್ ಬೆಡಗಿ ಸಯಾಲಿ ಭಗತ್ ಕೂಡಾ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಿಂದಿ ಸೇರಿದಂತೆ ತಮಿಳು ಭಾಷೆಯಲ್ಲೂ ತೆರೆ ಕಾಣಲಿದೆ. ರೂಪದರ್ಶಿ ಸಯಾಲಿ ಭಗತ್ ಟ್ರೈನ್, ಗುಡ್ ಲಕ್, ಘೋಸ್ಟ್ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮಿಳು ಆವೃತ್ತಿಯಲ್ಲಿ ಬೆಂಗಳೂರಿನ ಬೆಡಗಿ ಶಿರಿನ್ ಅವರು ನಟಿಸಲಿದ್ದಾರೆ.

ಈ ಚಿತ್ರದ ಸ್ಕ್ರಿಪ್ಟ್ ನಲ್ಲಿ ಗಟ್ಟಿತನವಿದೆ. ಪಾತ್ರಕ್ಕೆ ತೂಕವಿದೆ ಹಾಗಾಗಿ ಒಪ್ಪಿಕೊಂಡೆ, ಕನ್ನಡ ಚಿತ್ರರಂಗದ ಪರಿಚಯವೂ ಈ ಚಿತ್ರದ ಮೂಲಕ ಆಗುತ್ತಿರುವುದಕ್ಕೆ ಸಂತೋಷವಿದೆ ಎಂದು ಸಯಾಲಿ ಹೇಳಿದ್ದಾರೆ. ಮಂಡ್ಯದ ಶಿವನಸಮುದ್ರ ಬಳಿ ಸೆಟ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ರವಿ ಕಾಳೆ, ಅಶೋಕ್ ಕೃಷ್ಣಾನಂದ್ ಕನ್ನಡ ಹಾಗೂ ತಮಿಳು ಆವೃತ್ತಿಯಲ್ಲಿ ನಟಿಸುತ್ತಿದ್ದರೆ, ಅಸ್ಮಿತ್ ಪಟೇಲ್ ಹಿಂದಿ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

<iframe width="640" height="360" src="//www.youtube.com/embed/bP7PPGxYJ-4" frameborder="0" allowfullscreen></iframe>

ಅಂದ ಹಾಗೆ ಕಾರ್ಪೊರೇಟ್ ಆಡ್ ಮೇಕರ್ ಸಂತೋಷ್ ಅವರು 11-11-11 ಹೆಸರಿನ ಇನ್ನೊಂದು ಚಿತ್ರಕ್ಕೂ ಕೈ ಹಾಕಿದ್ದರು. ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ಇಂಟೆಲ್ ಟೆಕ್ಕಿ ಗಿರೀಶ್ ಹತ್ಯೆ ಪ್ರಕರಣದ ಕಥೆ ಆಧಾರಿತ ಚಿತ್ರ ಇದಾಗಿತ್ತು. ಇದೇ ಚಿತ್ರ ಕಥೆಯುಳ್ಳ ರಿಂಗ್ ರೋಡ್ ಶುಭ ಚಿತ್ರ ಕೂಡಾ ಜಾರಿಯಲ್ಲಿದೆ.

English summary
Mangalore Homestay attack which made national news in 2012 has inspired film makers into makinga story based on this sensational incident.Senior Actress Shruthi played a major character in the psychological thriller, in which Sayali Bhagat makes her Sandalwood debut
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada