»   » ಮಾರ್ಚ್ 11 ರಂದು 'ಕನ್ನಡ ಚಿತ್ರೋದ್ಯಮ ಬಂದ್'!

ಮಾರ್ಚ್ 11 ರಂದು 'ಕನ್ನಡ ಚಿತ್ರೋದ್ಯಮ ಬಂದ್'!

Posted By:
Subscribe to Filmibeat Kannada

ಡಬ್ಬಿಂಗ್ ವಿರೋಧಿಸಿ 'ಕನ್ನಡ ಚಿತ್ರೋದ್ಯಮ ಬಂದ್' ಮಾಡಲು ಕನ್ನಡ ಚಿತ್ರರಂಗ ಹಾಗೂ ಕನ್ನಡ ಪರ ಸಂಘಟನೆಗಳು ಕರೆಕೊಟ್ಟಿದೆ. ಮಾರ್ಚ್ 11 ರಂದು ಸಂಪೂರ್ಣ ಸ್ಯಾಂಡಲ್ ವುಡ್ ಬಂದ್ ಮಾಡಲು ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಕರೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ತೆರೆಕಾಣಲು ಸಜ್ಜಾಗಿರುವ ಹಿನ್ನಲೆ ನಿನ್ನೆ (ಮಾರ್ಚ್ 1) ವಾಟಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಹಿರಿಯ ನಟ ಶ್ರೀನಿವಾಸ ಮೂರ್ತಿ, ಹಿರಿಯ ನಟ ಶಿವರಾಂ, ನಿರ್ದೇಶಕ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ಡಬ್ಬಿಂಗ್ ವಾಣಿಜ್ಯ ಮಂಡಳಿ ಅಧ್ಯಕ್ಷ ಗಿರೀಶ್ ಗೌಡ, ಕೆ.ಆರ್. ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.['ಅಯ್ಯಯ್ಯೋ... ಅನ್ಯಾಯ' ಎಂದು ಡಬ್ಬಿಂಗ್ ವಿರುದ್ಧ ಕೂಗಿದ ಕನ್ನಡ ತಾರೆಯರು]

ಈ ವೇಳೆ ಮಾತನಾಡಿದ ವಾಟಳ್ ನಾಗರಾಜ್,'' ಡಬ್ಬಿಂಗ್ ಬರಬಾರದು, ಡಬ್ಬಿಂಗ್ ಸಿನಿಮಾ ಪ್ರದರ್ಶನವಾಗಬಾರದು, ಒಂದು ಪಕ್ಷ ಡಬ್ಬಿಂಗ್ ಚಿತ್ರ ಬಿಡುಗಡೆಯಾದ್ರೆ ಚಿತ್ರಮಂದಿರಕ್ಕೆ ಬೆಂಕಿ ಇಡ್ತಿವಿ'' ಎಂದು ಸವಾಲ್ ಹಾಕಿದ್ರು. ಮುಂದೆ ಓದಿ...

ಮಾರ್ಚ್ 11 'ಕನ್ನಡ ಚಿತ್ರರಂಗ ಬಂದ್'

ಮಾರ್ಚ್ 11 ರಂದು ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರರಂಗ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದು, ಈ ಬಂದ್ ಗೆ ಕನ್ನಡ ಚಿತ್ರರಂಗದವರು ಬೆಂಬಲಿಸಬೇಕು ಎಂದು ಮನವಿಮಾಡಿಕೊಂಡರು. ಆ ದಿನ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಈ ಮೆರವಣಿಗೆಯಲ್ಲಿ ಚಿತ್ರರಂಗದ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ವಾಟಳ್ ನಾಗರಾಜ್ ತಿಳಿಸಿದರು.[ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್]

ಮಾರ್ಚ್ 4 ರಂದು ಮತ್ತೊಂದು ಸಭೆ

ಇದಕ್ಕೂ ಮುಂಚೆ ಮಾರ್ಚ್ 4 ರಂದು ಬೆಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಡಬ್ಬಿಂಗ್ ವಿರೋಧಿಸಿ ಸಭೆ ಹಮ್ಮಿಕೊಂಡಿದ್ದು, ಈ ಸಭೆಯಲ್ಲಿ ಚಿತ್ರರಂಗದ ಎಲ್ಲರೂ ಭಾಗಿಯಾಗಲಿದ್ದಾರೆ ಎಂದು ವಾಟಳ್ ನಾಗರಾಜ್ ತಿಳಿಸಿದರು.

ಡಬ್ಬಿಂಗ್ ವಿರುದ್ಧ ಜಗ್ಗೇಶ್ ಗರಂ

ನಟ ಜಗ್ಗೇಶ್ ಮಾತನಾಡಿ, ''ಡಾ.ರಾಜ್ ಕುಮಾರ್ ಅವರ ಕಾಲದಿಂದಲೂ ಡಬ್ಬಿಂಗ್ ವಿರೋಧವಿದೆ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರವಿಲ್ಲ, ಆದ್ರೆ, ಪರಭಾಷೆಗಳಿಗೆ ಮೊದಲ ಆಧ್ಯತೆ ನೀಡುವ ಪರಿಸ್ಥಿತಿ. ಹೀಗಾಗಿ, ಡಬ್ಬಿಂಗ್ ಅವಕಾಶ ಕೊಡುವುದು ಬೇಡ. ನಾನು ಜೈಲಿಗೆ ಹೋದ್ರು ಪರವಾಗಿಲ್ಲ, ಬಿಡುಗಡೆಯಾದ್ರೆ, ಆ ಚಿತ್ರಮಂದಿರಕ್ಕೆ ನಾನೇ ಬೆಂಕಿ ಹಾಕ್ತಿನಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

ಮಾರ್ಚ್ 3 ರಂದು ಡಬ್ಬಿಂಗ್ ಚಿತ್ರ ರಿಲೀಸ್!

ಮಾರ್ಚ್ 3 ರಂದು ಡಬ್ಬಿಂಗ್ ಚಿತ್ರ 'ಸತ್ಯದೇವ್ ಐಪಿಎಸ್' ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಸ್ಕ್ರೀನ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದು ತಮಿಳಿನಲ್ಲಿ ಅಜಿತ್ ಅಭಿನಯದ 'ಎನೈ ಅರಿಂದಾಲ್' ಚಿತ್ರದ ಕನ್ನಡ ಡಬ್ಬಿಂಗ್.['ಮಾರ್ಚ್ 3' ರಂದೇ 'ಡಬ್ಬಿಂಗ್' ಚಿತ್ರ ಬಿಡುಗಡೆ ಯಾಕೆ? ಹಿಂದಿರುವ ಸತ್ಯವೇನು?]

English summary
March 11, Kannada Leader Vatal Nagaraj and Kannada Industry Called 'Kannada Film Industry' Bandh Over Dubbing Movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada