»   » 'ಮಸ್ತ್ ಕಲಂದರ್' ಬರ್ತಿದೆ ನಮ್ ಕಥೆ ನಿಮ್ ಜೊತೆ

'ಮಸ್ತ್ ಕಲಂದರ್' ಬರ್ತಿದೆ ನಮ್ ಕಥೆ ನಿಮ್ ಜೊತೆ

Posted By:
Subscribe to Filmibeat Kannada

ಶೀರ್ಷಿಕೆಯಲ್ಲೇ ಮಸ್ತ್ ಆಗಿ ಗಮನಸೆಳೆದಿರುವ ಚಿತ್ರ 'ಮಸ್ತ್ ಕಲಂದರ್'. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ನಮ್ ಕಥೆ ನಿಮ್ ಜೊತೆ' ಎಂಬುದು ಚಿತ್ರದ ಅಡಿಬರಹ. ಮಹೇಶ್ ಚಂದ್ರ ಡ್ರೀಮ್ಸ್ ಆನ್ ಲಿಮಿಟೆಡ್ ಸಂಸ್ಥೆಯ ಪ್ರಥಮ ಕಾಣಿಕೆ ಇದು.

ಬೆಂಗಳೂರಿನಲ್ಲಿ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ಎರಡನೇ ಹಂತದ ಚಿತ್ರೀಕರಣ ತುಮಕೂರಿನಲ್ಲಿ ಫೆಬ್ರವರಿ 5 ರಿಂದ ಪ್ರಾರಂಭ ಆಗಲಿದೆ ಎಂದು ನಿರ್ದೇಶಕರಾದ ರಾಜ್ ಕುಮಾರ್ ಆದಿತ್ಯ ತಿಳಿಸಿದ್ದಾರೆ.


ಎ ಆರ್ ರೆಹಮಾನ್ ಅವರ ಮ್ಯೂಜಿಕ್ ಅಕಾಡೆಮೆಯಲ್ಲಿ ಮುಖ್ಯಸ್ಥರಾಗಿರುವ ಎಸ್ ಪ್ರೇಂಕುಮಾರ್ ಅವರ ರಾಗ ಸಂಯೋಜನೆ ಒಳಗೊಂಡ ಚಿತ್ರದಲ್ಲಿ ಆರು ಹಾಡು ಹಾಗೂ ಮೂರು ಬಿಟ್ ಗೀತೆಗಳನ್ನು ಒಳಗೊಂಡಿದೆ.


Mast Kalandar shooting in brisk progress

‘ದೃಶ್ಯ ಹಾಗೂ ಪ್ಲೇಯರ್ಸ್' ಚಿತ್ರಗಳ ನಟಿ ಸ್ವರೂಪಿಣಿ ಈ ಚಿತ್ರದ ಕಥಾ ನಾಯಕಿ. ನಿತಿನ್ ಗೌಡ ಈ ಚಿತ್ರದ ನಾಯಕ. ಸಿದ್ಲಿಂಗು ಶ್ರೀಧರ್, ಮಿತ್ರ, ಪ್ರಶಾಂತ್, ರಜನಿಕಾಂತ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.


ಪ್ರಥಮ ನಿರ್ದೇಶನಕ್ಕೂ ಮುಂಚೆ ರಾಜಕುಮಾರ್ ಆದಿತ್ಯ ಅವರು ಸಹ ನಿರ್ದೇಶಕರಾಗಿ, ಗೀತ ರಚನೆಕಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಟಿ ವಿ ಕುಮಾರಸ್ವಾಮಿ (ತುಮಕೂರು), ಲೀಯ ಕೆ ಸ್ವಾಮಿ, ಎನ್ ಮಹೇಶ್, ಚಂದ್ರು ಎಸ್ ಎಲ್ ಅವರು ಈ ಚಿತ್ರದ ನಿರ್ಮಾಪಕರುಗಳು.


ಚಂದ್ರು ಎಸ್ ಎಲ್ ಅವರ ಕಥಾ ರಚನೆ ಹಾಗೂ ಗೀತೆಗಳು ಈ ಚಿತ್ರಕ್ಕಿದೆ. ಕಾಂತರಾಜು ಸಂಕಲನ, ಹರಿ ಕೃಷ್ಣ ನೃತ್ಯ ನಿರ್ದೇಶನ, ಸಹಾಯಕ ನಿರ್ದೇಶಕರಾಗಿ ಶ್ರೀಧರ್ ಎಸ್ ಎಲ್, ಲೋಕೇಶ್, ಎಸ್. ಮಣೂರ್ ಜೊತೆಯಾಗಿದ್ದಾರೆ. ವೀರೇಶ್ ಅವರ ಮೇಲ್ವಿಚಾರಣೆ ಸಹಾಯ 'ಮಸ್ತ್ ಕಲಂದರ್' ಸಿನಿಮಾಕ್ಕೆ ಇದೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Mast Kalandar' shooting in brisk progress. The movie completes first schudle in Bengaluru and now geard up for second schudle shooting which is held in Tumakuru starting from 5th February.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada