For Quick Alerts
  ALLOW NOTIFICATIONS  
  For Daily Alerts

  ಡೆಡ್ಲಿ ಆಟದ ಜೊತೆ ಥ್ರಿಲ್ಲಿಂಗ್ ಕಥೆ ಹೊಂದಿರುವ 'ಮಾಯಾ ಕನ್ನಡಿ'

  |

  'ಬ್ಲೂ ವೇಲ್' ಗೇಮ್ ಇತ್ತೀಚಿನ ವರ್ಷದಲ್ಲಿ ಭಾರಿ ಸದ್ದು ಮಾಡಿತ್ತು. ಇದು ಅಪಾಯಕಾರಿ ಆಟವಾಗಿದ್ದು, ಆ ಆಟದ ಚಟಕ್ಕೆ ಬಿದ್ದು ಅನೇಕ ವಿದ್ಯಾರ್ಥಿಗಳು, ಯುವಕರು ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ.

  ಇಂತಹ ಡೆಡ್ಲಿ ಗೇಮ್ ಸುತ್ತ ಥ್ರಿಲ್ಲಿಂಗ್ ಕಥೆ ಮಾಡಿ ತೆರೆಗೆ ಬರಲು ಸಜ್ಜಾಗಿದೆ 'ಮಾಯಾ ಕನ್ನಡಿ' ಸಿನಿಮಾ. ಕನ್ನಡದ ಪ್ರತಿಭಾನ್ವಿತ ನಟ ಪ್ರಭು ಮುಂಡ್ಕುರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  ಮೊದಲ ಟೀಸರ್ ಮೂಲಕ ಗಮನ ಸೆಳೆದಿದ್ದ 'ಮಾಯಾ ಕನ್ನಡಿ' ಇತ್ತೀಚಿಗಷ್ಟೆ ಎರಡನೇ ಟೀಸರ್ ರಿಲೀಸ್ ಮಾಡಿದೆ. ಬ್ಲೂ ವೇಲ್ ಆಟ ಎಷ್ಟು ಅಪಾಯಕಾರಿ, ಅದರಿಂದ ಯುವ ಜನ ಹೇಗೆ ಜೀವನ ಕೊನೆಯಾಗಿಸಿಕೊಂಡಿದ್ದರು ಎಂಬುದನ್ನು ಥ್ರಿಲ್ಲರ್ ಆಗಿ ತೆರೆಮೇಲೆ ತರಲಾಗಿದೆ ಎಂಬುದರ ಸುಳಿವು ನೀಡಿದೆ.

  ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿ, ಬ್ಲೂ ವೇಲ್ ಗೇಮ್ ಬಗ್ಗೆ ತಿಳಿದುಕೊಂಡು, ಅದರ ಬಗ್ಗೆ ಅಧ್ಯಯನ ಮಾಡಿ ಪ್ರೇಕ್ಷಕರಿಗೆ ಸಂದೇಶ ನೀಡುವ ಉದ್ದೇಶವೂ ಈ ಚಿತ್ರದಲ್ಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು.

  ಈ ಚಿತ್ರ ನಿರ್ದೇಶನ ಮಾಡಿರುವುದು ವಿನೋದ್ ಪೂಜಾರಿ. ಸ್ವಪ್ನ ಪಾಟೀಲ್ ನಿರ್ಮಿಸಿದ್ದಾರೆ. ಅಭಿಷೇಕ್ ಅವರ ಸಂಗೀತ, ಆನಂದ್ ರಾಜ್ ವಿಕ್ರಂ ಅವರ ಹಿನ್ನಲೆ ಸಂಗೀವಿದ್ದು, ಮಣಿ ಕೊಕ್ಕಲ್ ನಾಯರ್ ಅವರ ಛಾಯಾಗ್ರಹಣ ಹೊಂದಿದೆ.

  ಪ್ರಭು ಮುಂಡ್ಕುರ್, ಕೆ ಎಸ್ ಶ್ರೀಧರ್, ಕಾಜಲ್ ಕುಂದರ್, ಅಶ್ವಿನಿ ಸಾಗರ್, ಅನೂಪ್ ಸಾಗರ್, ಅಶ್ವಿನಿ ರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ಸೇರಿದಂತೆ ಹಲವು ಪ್ರಮುಖ ತಾರಾಗಣದಲ್ಲಿದ್ದಾರೆ. ಸದ್ಯಕ್ಕೆ ಟೀಸರ್ ಮೂಲಕ ಸದ್ದು ಮಾಡ್ತಿರುವ ಮಾಯಾ ಕನ್ನಡಿ ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬರಲಿದೆ.

  English summary
  Kannada actor Prabhu Mundkur, KS Sridhar, Kaajal Kunder, Anvitha Sagar starrer Maya Kannadi movie second teaser released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X