For Quick Alerts
  ALLOW NOTIFICATIONS  
  For Daily Alerts

  'ಮಾಯಾ ಬಜಾರ್' ಸಿನಿಮಾಗೂ ಎದುರಾದ ಪೈರಸಿ ಕಾಟ

  |

  'ಮಾಯಾ ಬಜಾರ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿ ಇರುವಾಗಲೇ ಚಿತ್ರತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಬಂದಿದೆ.

  'ಮಾಯಾ ಬಜಾರ್' ಸಿನಿಮಾ ಪೈರಸಿ ಆಗಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನದಲ್ಲಿ ಸಿನಿಮಾ ತಮಿಳು ರಾಕರ್ಸ್ ನಲ್ಲಿ ಲೀಕ್ ಮಾಡಲಾಗಿದೆ. ಪೂರ್ಣ ಸಿನಿಮಾ ಆನ್ ಲೈನ್ ನಲ್ಲಿ ಪೈರಸಿ ಆಗಿದ್ದು, ಚಿತ್ರತಂಡಕ್ಕೆ ತಲೆ ನೋವಾಗಿದೆ.

  'ಮಾಯಾಬಜಾರ್ 2016' ಕನ್ನಡ ಸಿನಿಮಾ ವಿಮರ್ಶೆ

  ಕನ್ನಡದ ಸಿನಿಮಾಗಳು ಈಗ ಹೆಚ್ಚಾಗಿ ಪೈರಸಿ ಆಗುತ್ತಿವೆ. ಬರೀ ಸ್ಟಾರ್ ಗಳ ಸಿನಿಮಾ ಮೇಲೆ ಕಣ್ಣು ಇಟ್ಟಿದ್ದ ಕಳ್ಳರು, ಈಗ ಎಲ್ಲ ಸಿನಿಮಾಗಳನ್ನು ಪೈರಸಿ ಮಾಡುತ್ತಿದ್ದಾರೆ. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇರುವುದನ್ನು ಗಮನಿಸಿ ಈ ಕೆಲಸ ಮಾಡಿರಬಹುದು.

  'ಮಾಯಾ ಬಜಾರ್' ಪುನೀತ್ ರಾಜ್ ಕುಮಾರ್ ನಿರ್ಮಾಣದ ಎರಡನೇ ಸಿನಿಮಾ. ರಾಧಾಕೃಷ್ಣ ರೆಡ್ಡಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ, ವಸಿಷ್ಟ ಸಿಂಹ, ಅಚ್ಚುತ್ ಕುಮಾರ್, ಪ್ರಕಾಶ್ ರಾಜ್, ಚೈತ್ರ ರಾವ್ ಚಿತ್ರದಲ್ಲಿ ನಟಿಸಿದ್ದಾರೆ.

  ಕನ್ನಡದಲ್ಲಿ ಈ ವರ್ಷದ ಪ್ರಾರಂಭದಲ್ಲಿಯೇ ಬಹಳ ಒಳ್ಳೆಯ ಸಿನಿಮಾಗಳು ಬರುತ್ತಿವೆ. 'ಮಾಯಾ ಬಜಾರ್' ಕೂಡ ಪ್ರೇಕ್ಷಕರಿಂದ ಪ್ರಶಂಸೆ ಪಡೆದಿದೆ. ಇಂತಹ ಒಳ್ಳೆಯ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ ಪ್ರೋತ್ಸಾಹ ನೀಡಿ.

  English summary
  Mayabazar kannada movie leaked in online. The movie is produced by Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X