'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!

By Bharath Kumar

Recommended Video

Kannadada Kotyadipathi :ಕೋಟಿ ಗೆದ್ದ ಭಾಗ್ಯಶಾಲಿ ಇವನೊಬ್ಬನೇ..! | Filmibeat Kannada

'ಕನ್ನಡದ ಕೋಟ್ಯಧಿತಿ' ಮೂರನೇ ಆವೃತ್ತಿ ನಡೆಯುತ್ತಿದೆ. ಈ ಆವೃತ್ತಿಯಲ್ಲಿ 25 ಲಕ್ಷ ಗೆದ್ದಿರುವುದೇ ಅತಿ ಹೆಚ್ಚು. ಇನ್ನು ಒಂದು ಕೋಟಿ ಗೆಲ್ಲುವ ಮಾತೆಲ್ಲಿ ಎಂಬುದು ವೀಕ್ಷಕರ ಅಭಿಪ್ರಾಯ.

ಅದೇಷ್ಟೋ ಜನರಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ವೋ, ಕನ್ನಡದ ಕೋಟ್ಯಧಿಪತಿಯ ಇತಿಹಾಸದಲ್ಲಿ ಇದುವರೆಗೂ ಕೇವಲ ಒಬ್ಬ ವ್ಯಕ್ತಿ ಮಾತ್ರ ಒಂದು ಕೋಟಿ ಗೆದ್ದಿದ್ದಾರೆ.

ಆ ಬಳಿಕ ಯಾರೊಬ್ಬರು ಕೋಟಿ ರೂಪಾಯಿಗೆ ಮುತ್ತಿಡಲಿಲ್ಲ. ಅಂದು ಒಂದು ಕೋಟಿ ಗೆದ್ದ ಸ್ಪರ್ಧಿ ಯಾರು.? ಹೇಗಿತ್ತು ಆತನ ಆಟ.? ಅಷ್ಟಕ್ಕೂ, ಆತ ಒಂದು ಕೋಟಿ ಗೆದ್ದಿದ್ದು ಯಾವಾಗ.? ಯಾರು ಆ ವ್ಯಕ್ತಿ ಎಂಬ ಕುತೂಹಲ ಈಗಾಗಲೇ ನಿಮ್ಮನ್ನು ಕಾಡುತ್ತಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೊದಲ ಕೋಟ್ಯಧಿಪತಿ ಇವರೇ ನೋಡಿ. ಮುಂದೆ ಓದಿ.....

29 ಏಪ್ರಿಲ್ 2013

29 ಏಪ್ರಿಲ್ 2013

ಕನ್ನಡದ ಕೋಟ್ಯಧಿಪತಿಯ ಎರಡನೇ ಆವೃತ್ತಿಯಲ್ಲಿ ಹುಸೇನ್ ಬಾಷಾ ಎಂಬುವರು ಮೊದಲ ಬಾರಿಗೆ 1 ಕೋಟಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 28 ಮತ್ತು 29 ಏಪ್ರಿಲ್ 2013 ರಂದು ಈ ಎಪಿಸೋಡ್ ಪ್ರಸಾರವಾಗಿತ್ತು.

ಯಾರು ಈ ಹುಸೇನ್ ಬಾಷಾ.?

ಯಾರು ಈ ಹುಸೇನ್ ಬಾಷಾ.?

ಹುಸೇನ್ ಬಾಷಾ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಕರಟಗಿ ಬಳಿ ಚೆಲ್ಲೂರಿನ ಗ್ರಾಮದವರು. ಬಡ ಕೃಷಿಕನ ಮಗ ಹುಸೇನ್ ಬಾಷಾ ಅಂದು ಸಿಎಂಎನ್ ಕಾಲೇಜಿನ ಪ್ರಥಮ ಬಿ.ಎ.ವಿದ್ಯಾರ್ಥಿಯಾಗಿದ್ದರು. ಮನೆಯ ಮೊದಲ ಮಗನಾಗಿ ನಾಲ್ಕು ತಂಗಿಯರು, ಒಬ್ಬ ತಮ್ಮ, ಅಪ್ಪ-ಅಮ್ಮ, ಅಜ್ಜ-ಅಜ್ಜಿ ಇಷ್ಟೂ ಜನರ ಜವಾಬ್ದಾರಿಯ ಜೊತೆಗೆ ಐಎಎಸ್ ಮಾಡುವ ಕನಸ ಕಂಡಿದ್ದ ಹುಸೇನ್ ಅಂದು ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟ್‌ ನಲ್ಲಿ ಸ್ಪರ್ಧಿಯಾಗಿದ್ದರು.

ಕಷ್ಟದ ಜೀವನ ಕಂಡಿದ್ದ ಹುಸೇನ್

ಕಷ್ಟದ ಜೀವನ ಕಂಡಿದ್ದ ಹುಸೇನ್

ಕಡು ಬಡತನದಲ್ಲಿ ವ್ಯಾಸಂಗ ಮಾಡುತ್ತಿದ್ದ ಹುಸೇನ್ ತುಮಕೂರಿನ ಸಿದ್ಧಗಂಗಾ ಮಠದ ಹೈಸ್ಕೂಲಿಗೆ ಸೇರಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದರೂ ಬಡತನ ಮತ್ತು ಮನೆ ಜವಾಬ್ದಾರಿ ಮುಂದೆ ಓದಲು ಬಿಡಲಿಲ್ಲ. ಮತ್ತೆ ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿದರು. ಓದಬೇಕೆಂಬ ತುಡಿತ ಮಾತ್ರ ಕಡಿಮೆಯಾಗಲಿಲ್ಲ. ನಾಲ್ಕು ವರ್ಷ ದುಡಿದ ನಂತರ ಮತ್ತೆ ಕಾಲೇಜಿಗೆ ಸೇರಿದರು. ರಜೆಯಲ್ಲಿ ಬೆಂಗಳೂರಿಗೆ ಬಂದು ಕಂಠೀರವ ಸ್ಟುಡಿಯೊ ಬಳಿ ಲಾರಿ ಕ್ಲೀನರ್ ಆಗಿ ಕೂಡ ಕೆಲಸ ಮಾಡಿದ್ದರು.

ಐಎಎಸ್ ಕನಸು ಕಂಡಿದ್ದ ಹುಸೇನ್

ಐಎಎಸ್ ಕನಸು ಕಂಡಿದ್ದ ಹುಸೇನ್

'ಪೃಥ್ವಿ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರ ನೋಡಿ ತಾನೂ ಐಎಎಸ್ ಪಾಸು ಮಾಡಬೇಕೆಂಬ ಕನಸು ಕಂಡಿದ್ದರು ಹುಸೇನ್ ಬಾಷಾ. ಅದಕ್ಕಾಗಿ ತಯಾರಿ ಕೂಡ ನಡೆಸಿದ್ದರು. ಅಷ್ಟರಲ್ಲೇ ಆತನ ಅದೃಷ್ಟ ಖುಲಾಯಿಸಿತ್ತು. 'ಕನ್ನಡದ ಕೋಟ್ಯಾಧಿಪತಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕೋಟಿಗೆ ಗೆದ್ದುಬಿಟ್ಟರು.

ಒನ್ ಇಂಡಿಯಾ ಕಚೇರಿಯಲ್ಲಿ 'ಕೋಟ್ಯಧಿಪತಿ'

ಒನ್ ಇಂಡಿಯಾ ಕಚೇರಿಯಲ್ಲಿ 'ಕೋಟ್ಯಧಿಪತಿ'

ಮೊದಲ ಕೋಟ್ಯಧಿಪತಿ ಹುಸೇನ್ ಬಾಷಾ ಅಂದು ಜಯನಗರದಲ್ಲಿದ್ದ ಒನ್ ಇಂಡಿಯಾ ಕನ್ನಡ ಕಚೇರಿಗೆ ಭೇಟಿ ನೀಡಿದ್ದರು. ಒನ್ ಇಂಡಿಯಾ ಪತ್ರಕರ್ತರ ಜೊತೆ ಸಂವಾದ ನಡೆಸಿದ್ದರು.

ಹದಿನೈದು ಪ್ರಶ್ನೆಗಳಿಗೂ ಉತ್ತರಿಸಿದ್ದ ಹುಸೇನ್

ಹದಿನೈದು ಪ್ರಶ್ನೆಗಳಿಗೂ ಉತ್ತರಿಸಿದ್ದ ಹುಸೇನ್

ಕನ್ನಡದ ಕೋಟ್ಯಧಿಪತಿಯಲ್ಲಿ ಕೇಳಲಾದ ಎಲ್ಲ ಹದಿನೈದು ಪ್ರಶ್ನೆಗಳಿಗೂ ಹುಸೇನ್ ಬಾಷಾ ಸರಿಯಾಗಿ ಉತ್ತರಿಸಿದ್ದರು. ಯಾವುದೇ ಗೊಂದಲವಿಲ್ಲದೇ ನಿಖರವಾಗಿ ಉತ್ತರ ಕೊಟ್ಟಿದ್ದರು. ಅಂದು ಹುಸೇನ್ ಬಾಷಾ ಎದುರಿಸಿದ ಪ್ರಶ್ನೆಗಳನ್ನ ನಿಮ್ಮ ಮುಂದೆ ಇಡಲು ಪ್ರಯತ್ನ ಮಾಡುತ್ತೇವೆ. ನಿರೀಕ್ಷಿಸಿ.....

More from Filmibeat

English summary
On 29th April 2013, Hussain Basha from Gangavathi became the first person to win one crore in history of Kannadada Kotyadhipati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X