For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ರಿಯಾಲಿಟಿ ಶೋ ಗೆದ್ದ ಮೇಘ ಧಾಡೆ

  By Bharath Kumar
  |

  ಭಾರತದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಹಲವು ಭಾಷೆಗಳಲ್ಲಿ ಮೂಡಿ ಬರ್ತಿದೆ. ತೆಲುಗು, ತಮಿಳು ಹಾಗೂ ಮಲಯಾಂ ಭಾಷೆಯ ಬಿಗ್ ಬಾಸ್ ನಡೆಯುತ್ತಿದ್ದು, ಮರಾಠಿ ಬಿಗ್ ಬಾಸ್ ಮುಗಿದಿದೆ.

  ಮರಾಠಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ಧೂರಿಯಾಗಿ ನೆರವೇರಿದ್ದು, ಪುಷ್ಕರ್ ಜೋಗ್ ಅವರನ್ನ ಹಿಂದಿಕ್ಕಿ ಮೇಘ ಧಾಡೆ ಫೈನಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

  ಮರಾಠಿಯ ಚೊಚ್ಚಲ ಬಿಗ್ ಬಾಸ್ ಶೋ ಇದಾಗಿದ್ದು, ಮೊದಲ ಆವೃತ್ತಿ ಗೆದ್ದ ಮೇಘಾ ಅವರಿಗೆ 18.60 ಲಕ್ಷ ಬಹುಮಾನ ನೀಡಲಾಗಿದೆ.

  ಕೊನೆಯ ಅಂತಿಮ ಘಟ್ಟದಲ್ಲಿ ಮೇಘಾ, ಪುಷ್ಕರ್ ಜೋಗ್, ಶರ್ಮೀಷ್ಠಾ ರಾವತ್, ಆಸ್ಟಡ್ ಕಲೆ, ಸಾಯಿ ಲೋಕುರ್ ಹಾಗೂ ಸ್ಮಿತಾ ಗುಂಡ್ಕರ್ ಇದ್ದರು. ಮೇಘಾ ಧಾಡೆ ಅವರ ಪರವಾಗಿ ಅತಿ ಹೆಚ್ಚು ಮತಗಳು ಸಿಕ್ಕಿದ್ದು ಜಯಮಾಲೆ ಒಲಿಸಿಕೊಂಡಿದ್ದಾರೆ.

  ಇನ್ನುಳಿದಂತೆ ಹಿಂದಿ ಹಾಗೂ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಸೆಪ್ಟಂಬರ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ಹಿಂದಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ.

  English summary
  Megha Dhade has emerged as the Bigg Boss Marathi winner after defeating fan favourite Smita Gondkar and Pushkar Jog. The show was hosted by Mahesh Manjrekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X