»   » ನಟಿ ಮೇಘನಾ ಗಾಂವ್ಕರ್ ಸಿನಿಮಾ ಮಾಡ್ತಿಲ್ಲ ಯಾಕೆ?

ನಟಿ ಮೇಘನಾ ಗಾಂವ್ಕರ್ ಸಿನಿಮಾ ಮಾಡ್ತಿಲ್ಲ ಯಾಕೆ?

By: ಜೀವನರಸಿಕ
Subscribe to Filmibeat Kannada

ಗುಲ್ಬರ್ಗದ ಮೂಲದ ನಟಿ ಮೇಘನಾ ಗಾಂವ್ಕರ್ ಅನ್ನೋ ಸ್ಯಾಂಡಲ್ ವುಡ್ ಬೆಣ್ಣೆ ತುಪ್ಪವಾಗ್ತಿಲ್ಲ. ಯಾಕೆ ಅಂತ ಗಾಂಧಿನಗರದ ಪಂಡಿತರು ಎಷ್ಟೇ ಲೆಕ್ಕಾಚಾರ ಹಾಕಿದ್ರೂ ಗೊತ್ತಾಗ್ತಿಲ್ಲ. 'ಚಾರ್ ಮಿನಾರ್'ನಲ್ಲಿ ಚಾರುಲತೆಯಂತೆ ಕಂಗೊಳಿಸಿ ಕೊನೆಗೆ ಸೆಂಟಿಮೆಂಟ್ ನಲ್ಲಿ ಸೆಟ್ಲಾಗಿಸೋ ಪಾತ್ರ ಮಾಡಿದ ಮೇಘನಾ ಗಾಂವ್ಕರ್.

ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾರೆ. ಆದರೆ ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿಲ್ಲ. ಹೌದಲ್ವ ಯಾಕೆ ಹೀಗೆ ಅಂತ ಕೇಳಿದರೆ ಕಾರಣ ಯಾರಿಗೂ ಗೊತ್ತಿಲ್ಲ. ಸಹಜವಾಗಿ ಒಂದು ಸಿನಿಮಾ ಹಿಟ್ಟಾಯ್ತು ಅಂದ್ರೆ ಹತ್ತಾರು ಆಫರ್ ಗಳು ಬಂದೇ ಬರುತ್ತವೆ. ಬಂದ ಹತ್ತರಲ್ಲಿ ಒಂದಾದ್ರೂ ಇಷ್ಟವಾಗಲ್ವಾ. ಮೇಘನಾ ಗಾಂವ್ಕರ್ ಗೆ 'ಚಾರ್ಮಿನಾರ್' ಬಂದು ಒಂದು ವರ್ಷವಾಗ್ತಾ ಬಂದ್ರೂ ಇನ್ನೂ ಒಂದೂ ಕಥೆ ಇಷ್ಟವಾಗಿಲ್ಲವಂತೆ. ['ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ]


ಒಂದು ಸ್ಕ್ರಿಪ್ಟ್ ಕೂಡ ಮನಸ್ಸಿಗೆ ಹಿಡಿಸಿಲ್ಲವಂತೆ. ಒಂದು ವರ್ಷದಲ್ಲಿ ಒಂದನ್ನೂ ಒಪ್ತಿಲ್ಲ ಅಂದ್ರೆ ಕಾರಣ ಏನಿರ್ಬಹುದು? ಈ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗಲೆಲ್ಲ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿಲ್ಲ, ಕಥೆ ಕೇಳ್ತಿದ್ದೀನಿ ಅಂತೆಲ್ಲಾ ಹೇಳೋದು ನಿಜಾನಾ ಅಥವಾ ಅದೇ ಒಂದು ಕಥೇನಾ?

ಏನಾಗಿರಬಹುದು ಮೇಘನಾಗೆ ಯಾಕೆ ಹೀಗೆ ಮಾಡ್ತಿರಬಹುದು. ಉತ್ತರ ಅವರೇ ಹೇಳ್ಬೇಕಷ್ಟೇ. ಅಂದಹಾಗೆ ಮೇಘನಾ ಗಾಂವ್ಕರ್ ಅಭಿನಯಿಸಿದ ಚಿತ್ರಗಳು ನಮ್ ಏರಿಯಾಲ್ಲಿ ಒಂದಿನ, ವಿನಾಯಕ ಗೆಳೆಯರ ಬಳಗ, ತುಘ್ಲಕ್, ಹಾಗೂ ಚಾರ್ಮಿನಾರ್.

English summary
After 'Charminar' movie Gulbarga born Kannada actress Meghana Gaonkar not accepting any films. Why the actress is becoming so choosy? 
Please Wait while comments are loading...