For Quick Alerts
  ALLOW NOTIFICATIONS  
  For Daily Alerts

  ನಾಮಕರಣದ ಬಗ್ಗೆ ಕೊಂಕು ನುಡಿದವರಿಗೆ ಸೂಕ್ತ ಉತ್ತರ ನೀಡಿದ ಮೇಘನಾ ರಾಜ್

  |

  ಎರಡು ದಿನದ ಹಿಂದಷ್ಟೆ ಮೇಘನಾ ರಾಜ್-ಚಿರು ಸರ್ಜಾ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಮಗನಿಗೆ ರಾಯನ್ ಎಂದು ಹೆಸರಿಟ್ಟಿದ್ದಾರೆ ಮೇಘನಾ.

  ನಾಮಕರಣ ಶಾಸ್ತ್ರದ ಹಲವು ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಮೇಘನಾ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಾಮಕರಣ ಶಾಸ್ತ್ರದ ಬಗ್ಗೆ ಕೊಂಕು ಮಾತನಾಡಿದ್ದಾರೆ. ನಾಮಕರಣದಂದು ಚರ್ಚ್‌ನಲ್ಲಿಯೂ ಕೆಲವು ಸಂಪ್ರದಾಯಗಳನ್ನು ಮೇಘನಾ ರಾಜ್ ಅನುಸರಿಸಿದ್ದರು, ಆ ನಂತರ ಹಿಂದು ಸಂಪ್ರದಾಯದಂತೆ ನಾಮಕರಣ, ತೊಟ್ಟಿಲ ಶಾಸ್ತ್ರ ನಡೆದಿತ್ತು ಇದರ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದರು.

  ಅಂಥಹಾ ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡಿರುವ ಮೇಘನಾ ರಾಜ್, ''ತಾಯಿಯಾಗಿ ನನ್ನ ಮಗನಿಗೆ ಯಾವುದು ಮುಖ್ಯ ಎನಿಸುತ್ತದೆಯೋ ಅದನ್ನು ಮಾಡುತ್ತೇನೆ. ಎರಡೂ ಸಂಪ್ರದಾಯವನ್ನು ಅವನೇಕೆ ಅನುಸರಿಸಬಾರದು. ಅವನ ಪೋಷಕರು (ಮೇಘನಾ-ಚಿರು) ಅದನ್ನೇ ಮಾಡಿದ್ದರು'' ಎಂದಿದ್ದಾರೆ ಮೇಘನಾ ರಾಜ್.

  ಎಲ್ಲ ಧರ್ಮದ ಜನರೂ ನಮಗಾಗಿ ಪ್ರಾರ್ಥಿಸಿದ್ದಾರೆ: ಮೇಘನಾ

  ಎಲ್ಲ ಧರ್ಮದ ಜನರೂ ನಮಗಾಗಿ ಪ್ರಾರ್ಥಿಸಿದ್ದಾರೆ: ಮೇಘನಾ

  ''ವಿವಿಧ ಜಾತಿ, ಧರ್ಮಕ್ಕೆ ಸೇರಿದ ಜನರು ರಾಯನ್‌ನ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ನಮ್ಮ ಕುಟುಂಬದ ಒಳಿತಾಗಿಗಿಯೂ ಪ್ರಾರ್ಥನೆ ಮಾಡಿದ್ದಾರೆ. ನಾವು ಸಹ, ಸಲಹುವಂತೆ ಎಲ್ಲ ದೇವರಿಗೂ ಮನವಿ ಮಾಡುತ್ತೇವೆ. ನನಗೆ ಎರಡೂ ಧರ್ಮದ ಆಚರಣೆಗಳನ್ನು ಮಾಡುವುದು ಮುಖ್ಯವಾಗಿತ್ತು. ಅವರ ತಂದೆ (ಚಿರು) ಮಾನವೀಯತೆಯಲ್ಲಿ ಅಷ್ಟೆ ನಂಬಿಕೆ ಇಟ್ಟಿದ್ದರು'' ಎಂದಿದ್ದಾರೆ.

  ರಾಯನ್ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ

  ರಾಯನ್ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ

  ''ರಾಯನ್ ಹೆಸರು ಸಹ ಎಲ್ಲ ಧರ್ಮಕ್ಕೂ ಸೇರಿದ್ದಾಗಿದೆ. ಬೇರೆ-ಬೇರೆ ಧರ್ಮದಲ್ಲಿ ಬೇರೆ ಬೇರೆ ರೀತಿ ಉಚ್ಛಾರಣೆ ಇದೆ, ಆದರೆ ಅರ್ಥ ಒಂದೇ. ರಾಯನ್‌ ತನ್ನ ತಂದೆ (ಚಿರು) ನಂತೆಯೇ ಬೆಳೆಯಲಿದ್ದಾನೆ. ಚಿರು, ಜನರನ್ನು ಇಷ್ಟಪಡುತ್ತಿದ್ದಿದ್ದು ಅವರ ಒಳ್ಳೆಯತನ ನೋಡಿ, ಅವರು ಎಷ್ಟರ ಮಟ್ಟಿಗೆ ಮಾನವೀಯರು ಎಂಬುದನ್ನು ನೋಡಿ ಅವರು ವ್ಯಕ್ತಿಗಳ ಸಂಘ ಮಾಡುತ್ತಿದ್ದರು. ಚಿರು ಈಗಾಗಲೇ ನಿನ್ನನ್ನು (ರಾಯನ್) ಪ್ರೀತಿಸಲು ಪ್ರಾರಂಭಿಸಿದ್ದಾನೆ. ಅಪ್ಪ-ಅಮ್ಮ ಇಬ್ಬರೂ ನಿನ್ನನ್ನು ಪ್ರೀತಿಸುತ್ತಾರೆ. ಇದು ಆಳುವ ಸಮಯ'' ಎಂದಿದ್ದಾರೆ ಮೇಘನಾ ರಾಜ್.

  ಎರಡೂ ಧರ್ಮ ಪಾಲಿಸಿದ ಮೇಘನಾ ರಾಜ್

  ಎರಡೂ ಧರ್ಮ ಪಾಲಿಸಿದ ಮೇಘನಾ ರಾಜ್

  ಪುತ್ರನಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಂಪ್ರದಾಯ ಹಾಗೂ ಹಿಂದು ಸಂಪ್ರದಾಯ ಎರಡನ್ನೂ ಅನುಸರಿಸಿದರು ಮೇಘನಾ ರಾಜ್. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರಿಂದ ಅಸಮಾಧನ ವ್ಯಕ್ತವಾಗಿತ್ತು. ಹಾಗಾಗಿ ಮೇಘನಾ ರಾಜ್ ಮೇಲಿನಂತೆ ಉತ್ತರ ನೀಡಿದ್ದಾರೆ. ಮೇಘನಾ ರಾಜ್ ಕ್ರಿಶ್ಚಿಯನ್ ಧರ್ಮ ಅನುಸರಿಸಿದರೆ ಚಿರಂಜೀವಿ ಕುಟುಂಬಸ್ಥರು ಹಿಂದು ಧರ್ಮ ಪಾಲಿಸುತ್ತಾರೆ. ಮದುವೆಯ ಸಂದರ್ಭದಲ್ಲಿಯೂ ಕ್ರಿಶ್ಚಿಯನ್ ಹಾಗೂ ಹಿಂದು ಎರಡೂ ಧರ್ಮಗಳ ಅನುಸಾರ ಮದುವೆಯಾಗಿದ್ದರು ಮೇಘನಾ ಹಾಗೂ ಚಿರು.

  ರಾಯನ್ ಹೆಸರಿನ ಅರ್ಥವೇನು?

  ರಾಯನ್ ಹೆಸರಿನ ಅರ್ಥವೇನು?

  ಮಗನಿಗೆ 'ರಾಯನ್' ಎಂದು ಹೆಸರಿಟ್ಟಿರುವ ಮೇಘನಾ ರಾಜ್ ಅದರ ಅರ್ಥವನ್ನು ವಿವರಿಸಿದ್ದಾರೆ, ''ಮಗನಿಗೆ ಇಡಲೆಂದು ಕೆಲವು ಹೆಸರು ಯೋಚಿಸಿಟ್ಟಿದ್ದೆ. ಅದರಲ್ಲೂ ರಾಯನ್ ಎಂಬ ಹೆಸರು ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ರಾಯನ್ ಎಂದರೆ ಯುವರಾಜ. ಚಿರು ಸರ್ಜಾ ರಾಜನಂತಿದ್ದವರು. ಅವರ ಮಗ ಯುವರಾಜ ಹಾಗಾಗಿ ಇದೇ ಹೆಸರಿಡಬೇಕು ಎಂಬುದು ನನ್ನ ಬಯಕೆಯಾಗಿತ್ತು. ಅದನ್ನು ಕುಟುಂಬದವರೆಲ್ಲರೂ ಒಪ್ಪಿಕೊಂಡರು. ರಾಯನ್‌ ಹೆಸರಿನ ಅರ್ಥ ಸ್ವರ್ಗದ ಬಾಗಿಲು ತೆಗೆದ ಯುವರಾಜ ಎಂದು. ನಮ್ಮೆಲ್ಲರ ಬಾಳಿನಲ್ಲಿ ಕತ್ತಲೆ ತುಂಬಿದ ಸಂದರ್ಭದಲ್ಲಿ ರಾಯನ್ ಹುಟ್ಟಿದ ನಮಗೆ ಸ್ವರ್ಗದ ಬಾಗಿಲು ತೆರೆದ ಹಾಗಾಗಿ ಅವನಿಗೆ ಇದೇ ಹೆಸರು ಸೂಕ್ತ ಎಂದು ಕೊಂಡೆವು. ಕುಟುಂಬದವರಿಗೂ ಹೆಸರು ಬಹಳ ಇಷ್ಟವಾಯಿತು. ರಾಯನ್ ಮೇಲೆ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ'' ಎಂದು ಮಾಧ್ಯಮದವರ ಬಳಿಯೂ ಮನವಿ ಮಾಡಿದರು ಮೇಘನಾ ರಾಜ್.

  English summary
  Meghana Raj replies to those who question about naming ceremony of her son. Meghana followed two religious practices on the naming ceremony day.
  Monday, September 6, 2021, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X