For Quick Alerts
  ALLOW NOTIFICATIONS  
  For Daily Alerts

  ಮೇಘನಾ ರಾಜ್ ಮದ್ದು ಮಗನಿಗೆ ಸಿಕ್ತು ವಿಶೇಷ ಉಡುಗೊರೆ; ಏನದು?

  |

  ಜೂ.ಚಿರು ಮೇಘನಾ ರಾಜ್ ಕುಟುಂಬದಲ್ಲಿ ಸಂಭ್ರಮ, ಸಂತಸವನ್ನು ಹೊತ್ತು ತಂದಿದ್ದಾನೆ. ಜೂ.ಚಿರು ಆಗಮನ ಅಭಿಮಾನಿಗಳಲ್ಲೂ ಸಂಭ್ರಮ ಮನೆ ಮಾಡಿದೆ. ಮೇಘನಾ ಪುತ್ರನನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ.

  ಮೇಘನಾ ಸದ್ಯ ಪುತ್ರನ ಆರೈಕೆಯಲ್ಲಿ ನಿರತಾಗಿದ್ದಾರೆ. ಚಿರು ಪುತ್ರನಿಗೆ ವಿಭಿನ್ನ, ವಿನೂತ ಗಿಫ್ಟ್ ಗಳು ಹರಿದುಬರುತ್ತಿದೆ. ಇದೀಗ ಮೇಘನಾ ಮುದ್ದು ಮಗನಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಅನಿಲಾ ಇಂಪ್ರೆಷನ್ಸ್ ಆಂಡ್ ಫ್ರೇಮ್ಸ್ ಸುಂದರವಾದ ಉಡುಗೊರೆಯನ್ನು ನೀಡಿದ್ದಾರೆ. ಈ ವಿಶೇಷ ಗಿಫ್ಟ್ ನೋಡಿ ಮೇಘನಾ ಫುಲ್ ಖುಷ್ ಆಗಿದ್ದಾರೆ.

  ವಿಡಿಯೋ ವೈರಲ್; ಮೇಘನಾ ರಾಜ್ ಹೆಸರಿನಲ್ಲಿ ಮೂಡಿದ ಚಿರಂಜೀವಿ ಫೋಟೋ

  ಜೂ. ಚಿರುವಿನ ಪುಟ್ಟ ಪಾದ ಮತ್ತು ಪುಟ್ಟ ಹಸ್ತದ ಗಿಫ್ಟ್ ಅನ್ನು ನೋಡಿ ಮೇಘನಾ ಸಖತ್ ಥ್ರಿಲ್ ಆಗಿದ್ದಾರೆ. ಗಿಫ್ಟ್ ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ 'ನೀವು ಸಂತೋಷವನ್ನು ಫ್ರೇಮ್ ನಲ್ಲಿ ಕಾಪಾಡಿಕೊಳ್ಳಲು ಬಯಸಿದಾಗ. ಈ ಸುಂದರ ಉಡುಗೊರೆಗೆ ಅನಿಲಾ ಇಂಪ್ರೆಷನ್ ಮತ್ತು ಫ್ರೇಮ್ಸ್ ಗೆ ಧನ್ಯವಾದಗಳು. ಪುಟ್ಟ ಪುಟ್ಟ ಕೈ ಪಾದ ಮತ್ತು ಹಸ್ತವನ್ನು ನಿಮ್ಮ ಕೆಲಸದಿಂದ ಅಮರವಾಗಿಸಿದ್ದೀರಿ. ಜೂ.ಚಿರು ಇದನ್ನು ಖಂಡಿತವಾಗಿಯೂ ಕಾಪಾಡಿಕೊಳ್ಳುತ್ತಾನೆ' ಎಂದು ಹೇಳಿದ್ದಾರೆ.

  ಮಗುವಿನ ಪಾದ ಮತ್ತು ಹಸ್ತದ ಅಳತೆ ಪಡೆದು ಈ ರೀತಿ ಫ್ರೇಮ್ ಹಾಕಿಸಿ, ತಯಾರಿಸುತ್ತಾರೆ. ಅನಿಲಾ ಅವರು ಈಗಾಗಲೇ ಈ ರೀತಿಯ ಸಾಕಷ್ಟು ಗಿಫ್ಟ್ ಗಳನ್ನು ಮಾಡಿಕೊಟ್ಟಿದ್ದಾರೆ. ಇದೀಗ ಮೇಘನಾ ರಾಜ್ ಸರ್ಜಾಗೂ ಗಿಫ್ಟ್ ಮಾಡಿದ್ದಾರೆ. ಈ ಗಿಫ್ಟ್ ಮೇಘನಾಗೆ ತುಂಬಾ ಸಂತಸ ತಂದಿದೆ.

  ಇತ್ತೀಚಿಗಷ್ಟೆ ಮೇಘನಾ ರಾಜ್ ಮನೆಯಲ್ಲಿ ಮಗನ ತೊಟ್ಟಿಲ ಶಾಸ್ತ್ರದ ಸಂಭ್ರಮ ನೆರವೇರಿತ್ತು. ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ವನಿತಾ ಗುತ್ತಲ್ ಅವರು ಜೂ.ಚಿರುಗಾಗಿ ಕಲಘಟಗಿ ತೊಟ್ಟಿಲನ್ನು ನೀಡಿದ್ದಾರೆ.

  ಸದ್ಯ ತೊಟ್ಟಿಲ ಶಾಸ್ತ್ರದ ಸಂಭ್ರಮ ಮಾಡಿ ಮುಗಿಸಿರುವ ಮೇಘನಾ ಕುಟುಂಬ ನಾಮಕರಣ ಶಾಸ್ತ್ರದ ತಯಾರಿ ಮಾಡುತ್ತಿದ್ದಾರೆ. ಮೇಘನಾ ಮಗನಿಗೆ ಏನು ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

  English summary
  Actress Meghana Raj Son to get Special gift from Anila Impressions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X