For Quick Alerts
  ALLOW NOTIFICATIONS  
  For Daily Alerts

  ಫೇಸ್ ಬುಕ್ ಗೆ ಗುಡ್ ಬೈ ಹೇಳಿದ ಚಾರ್‌ಮಿನಾರ್ ನಟಿ

  By Pavithra
  |

  'ನಮ್ ಏರಿಯಾದಲ್ಲಿ ಒಂದು ದಿನ' , 'ವಿನಾಯಕ ಗೆಳೆಯರ ಬಳಗ', 'ತುಘ್ಲಕ್', 'ಚಾರ್ ಮಿನಾರ್' ಚಿತ್ರಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ಮೇಘನಾ ಗಾಂವ್ಕರ್. ಚಿತ್ರರಂಗಕ್ಕೆ ಬಂದು ಎಂಟು ವರ್ಷಗಳಾದರೂ ಅಭಿನಯಿಸಿದ್ದು ಮಾತ್ರ ಕೆಲವೇ ಸಿನಿಮಾಗಳಲ್ಲಿ.

  ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನೋ ನಿರ್ಧಾರವಿರುವ ಮೇಘನಾ ತಮಗಿಷ್ಟವಾದ ಕೆಲಸವನ್ನ ಮಾತ್ರ ಮಾಡುವುದು ಎಂದು ನೇರವಾಗಿ ಹೇಳುವ ನಟಿ. 'ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾದ ನಂತರ ಯಾವುದೇ ಚಿತ್ರವನ್ನೂ ಒಪ್ಪಿಕೊಳ್ಳದ ಮೇಘನಾ ಸದ್ಯ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ.

  ಟ್ವಿಟ್ಟರ್ ನಲ್ಲಿ "ಹಲೋ ನಾನು ಇಂದಿನಿಂದ ಫೇಸ್ ಬುಕ್ ನಲ್ಲಿ ಇರುವುದಿಲ್ಲ. ನನ್ನ ಹೆಸರಿನಲ್ಲಿ ಫೆಸ್ ಬುಕ್ ನಲ್ಲಿ ಅಕೌಂಟ್ ನೋಡಬಹುದು ಆದರೆ ಅದು ನನ್ನ ಅಕೌಂಟ್ ಅಲ್ಲ. ಆದರೆ ನಾನು ನಿಮ್ಮನ್ನ ಇನ್‌ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಮೂಲಕ ನನ್ನ ಬಗ್ಗೆ ವಿಚಾರಗಳನ್ನು ತಿಳಿಸುತ್ತೇನೆ. ಕೆಲ ಹವ್ಯಾಸಗಳನ್ನ ನಿಲ್ಲಿಸಬೇಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ". ಎಂದು ಮೇಘನಾ ಗಾಂವ್ಕರ್ ಟ್ವಿಟ್ ಮಾಡಿದ್ದಾರೆ.

  ತಾವು ಅಭಿನಯಿಸುವ ಮುಂದಿನ ಚಿತ್ರಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಮಾಹಿತಿಯನ್ನ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದ ಮೇಘನಾ ಇನ್ನು ಮುಂದೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಸಿಗುತ್ತಾರೆ. ಅದರ ಜೊತೆಯಲ್ಲಿ ಇನ್‌ಸ್ಟಾಗ್ರಾಂ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

  English summary
  Kannada actress Meghna Gaonkar has closed her Facebook account. The decision was made to Trying to cut down on some habits

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X