For Quick Alerts
  ALLOW NOTIFICATIONS  
  For Daily Alerts

  ಎಂಟು ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಮಿಲನಾ-ಕೃಷ್ಣ

  |

  ಎಂಟು ವರ್ಷದಿಂದ ಪ್ರೀತಿಸುತ್ತಿದ್ದ ತಾರಾ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಇಂದು ವಿವಾಹವಾದರು.

  ಮಿಲನ ಆಸೆ ಪೂರೈಸಿದ ಡಾರ್ಲಿಂಗ್ ಕೃಷ್ಣ | Filmibeat Kannada

  ಖಾಸಗಿ ರೆಸಾರ್ಟ್‌ನಲ್ಲಿ ಇಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

  ಮಿಲನ ನಾಗರಾಜ್ ಹಾಗೂ ಕೃಷ್ಣ ಅವರು ಸುಮಾರು ಎಂಟು ವರ್ಷದಿಂದಲೂ ಪ್ರೀತಿಯಲ್ಲಿದ್ದರು. ಈಗ ಕುಟುಂಬದವರ ಒಪ್ಪಿಗೆ ಮೇರಿಗೆ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.

  ಕಳೆದ ವರ್ಷ ಈ ಜೋಡಿಯ 'ಲವ್ ಮಾಕ್ಟೆಲ್' ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಈಗ ಲವ್ ಮಾಕ್ಟೆಲ್ 2 ಸಹ ನಿರ್ಮಾಣವಾಗುತ್ತಿದೆ. ಈ ಇಬ್ಬರೂ ಒಟ್ಟಿಗೆ ಕತೆ ಬರೆದು, ಡಾರ್ಲಿಂಗ್ ಕೃಷ್ಣ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

  ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ

  ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ

  ಇದೇ ದಿನ ಸಂಜೆ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ವುಡ್‌ನ ಸ್ಟಾರ್ ನಟ-ನಟಿಯರು ಈ ಇಬ್ಬರ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ಹಲವು ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಲಾಗಿದೆ

  ಹಲವು ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಲಾಗಿದೆ

  ಶಿವರಾಜ್ ಕುಮಾರ್,ಪುನೀತ್ ರಾಜ್‌ಕುಮಾರ್, ಸುದೀಪ್, ರಕ್ಷಿತ್ ಶೆಟ್ಟಿ, ರವಿಚಂದ್ರನ್, ನಿಖಿಲ್ ಕುಮಾರಸ್ವಾಮಿ, ನಟಿ ತಮನ್ನಾ ಇನ್ನೂ ಹಲವಾರು ಸೆಲೆಬ್ರಿಟಿಗಳನ್ನು ಮದುವೆಗೆ ಕರೆದಿದ್ದಾರೆ ಈ ಜೋಡಿ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ನೆರೆಯ ಸಿನಿಮಾರಂಗಗಳಿಂದಲೂ ಅತಿಥಿಗಳು ಆಗಮಿಸಲಿದ್ದಾರೆ.

  ಲವ್ ಮಾಕ್ಟೆಲ್ 2 ಸಿನಿಮಾದ ಹಾಡು ಬಿಡುಗಡೆ

  ಲವ್ ಮಾಕ್ಟೆಲ್ 2 ಸಿನಿಮಾದ ಹಾಡು ಬಿಡುಗಡೆ

  ಮದುವೆಯ ಈ ದಿನವೇ ಲವ್ ಮಾಕ್ಟೆಲ್ 2 ಸಿನಿಮಾದ ಲಿರಿಕಲ್ ಹಾಡು ಸಹ ಬಿಡುಗಡೆ ಆಗಲಿದ್ದು, ಈ ಜೋಡಿಯು ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಲವ್ ಮಾಕ್ಟೆಲ್‌ 2 ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ.

  ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಿಲನಾ-ಕೃಷ್ಣ

  ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಿಲನಾ-ಕೃಷ್ಣ

  ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರೂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೆಲ್ 2 ಸಿನಿಮಾದ ನಂತರ ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಲಿದ್ದಾರೆ. ಇನ್ನು ಮಿಲನ ನಾಗರಾಜ್ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಜೊತೆ ಸಿನಿಮಾ ಮಾಡಲಿದ್ದಾರೆ.

  English summary
  Actress Milana Nagaraj and Darling Krishna get married today. Both were in love from last 8 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X