For Quick Alerts
  ALLOW NOTIFICATIONS  
  For Daily Alerts

  ಐವರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ 2021 ಕಿರೀಟ

  |

  ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ನಿರ್ಮಲಾ, ಸುಪ್ರೀತಾ ಹಾಗೂ ಸಿಂಧು ಅವರು ಮಿಸೆಸ್ ಸೌತ್ ಇಂಡಿಯಾ 'ಐ ಆಮ್ ಪವರ್‌ಫುಲ್' ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

  ಹೋಟೆಲ್ ಶೆರಟನ್ ಗ್ರ್ಯಾಂಡ್‌ನಲ್ಲಿ ನಡೆದ ಮಿಸ್ ಹಾಗೂ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್ ಫ್ಯಾಷನ್ ಶೋ ಶುಕ್ರವಾರದ ಸಂಜೆ ಸಮಾಪ್ತಿಯಾಗಿತು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು.

  ಗೌನ್ ಹಾಗೂ ಸೀರೆಯಲ್ಲಿ ಮಿಂಚಿದ ಮಿಸೆಸ್ ಹಾಗೂ ಮಿಸ್ ವಿಭಾಗದ ರೂಪದರ್ಶಿಯರು ಹೆಜ್ಜೆ ಹಾಕಿದರು. ಯುವತಿಯರಿಗೆ ಕಡಿಮೆ ಇಲ್ಲದಂತೆ ಮಿಸ್ಟರ್ ವಿಭಾಗದಲ್ಲಿ ಯುವಕರೂ ಸಹ ಹೆಜ್ಜೆ ಹಾಕಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

  ಮಿಸೆಸ್ ಸೌತ್ ಇಂಡಿಯಾ ಕರ್ವಿ ವಿಭಾಗದಲ್ಲಿ ಹೇಮಾ, ಕಾವ್ಯ, ಸ್ನೇಹಾ ಕಿರೀಟ ಗೆದ್ದರು. ಮಿಸ್ಟರ್ ವಿಭಾಗದಲ್ಲಿ ಪವನ್, ಯೋಗೇಶ್, ರೇಹಂತ್ ಮೊದಲಿಗರಾದರು. ಮಿಸ್ ವಿಭಾಗದ ಕಿರೀಟ ಕೃಪಾ, ಸೋನಾಲಿ, ಗುಂಜನ್‌ ಅವರುಗಳು ತಮ್ಮ ಮುಡಿಗೇರಿಸಿಕೊಂಡರು.

  ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ದಕ್ಷಿಣ ಭಾರತದ 70 ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು. ಅವರ ಬೆಕ್ಕಿನ ನಡಿಗೆಗೆ ನೆರೆದಿದ್ದರೆಲ್ಲ ಉತ್ಸಾಹ ಭರಿತರಾಗಿ ಕರತಾಡನ ಮಾಡಿ ರೂಪದರ್ಶಿಯರನ್ನು ಹುರಿದುಂಬಿಸಿದರು.

  ಸೌಂದರ್ಯ ಸ್ಪರ್ಧೆ ಎಂದರೆ ತೆಳ್ಳಗೆ, ಬೆಳ್ಳಗೆ ಇರುವವರಿಗೆ ಮಾತ್ರ ಎನ್ನುವ ಮೂಡನಂಬಿಕೆಯನ್ನು ಕೈಬಿಡುವ ಉದ್ದೇಶದಿಂದ ಮಿಸೆಸ್ ಕರ್ವಿ ವಿಭಾಗವನ್ನು ಕೂಡ ಆಯೋಜಿಸಲಾಗಿತ್ತು. ಮಿಸೆಸ್ ಸೌತ್ ಇಂಡಿಯಾ ವಿಭಾಗದಲ್ಲಿ 30, ಮಿಸ್ ವಿಭಾಗದಲ್ಲಿ 20, ಮಿಸ್ಟರ್ ವಿಭಾಗದಲ್ಲಿ 20 ಸ್ಪರ್ಧಿಗಳು ಈ ವಿಭಾಗದಲ್ಲಿ ಭಾಗವಹಿಸಿದರು.

  ವಿವಾಹಿತ ಮಹಿಳೆಯರಿಗೂ ಶೋನಲ್ಲಿ ಭಾಗವಹಿಸುವ ಅವಕಾಶವಿತ್ತು. ಮಿಸೆಸ್ ವಿಭಾಗದಲ್ಲಿ ಐವರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಮಿಸ್‌ನಲ್ಲಿ ಮೂವರು ಹಾಗೂ ಮಿಸ್ಟರ್ ವಿಭಾಗದಲ್ಲೂ ಮೂವರು ಗೆಲುವಿನ ಸಂಭ್ರಮ ಆಚರಿಸಿದರು.

  Miss South India 2021: Five Won The Title

  ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, "ಫ್ಯಾಷನ್ ಶೋ ಎಂದರೆ ಕೇವಲ ಸೌಂದರ್ಯದ ಅನಾವರಣ ಅಲ್ಲ. ಕೊರೊನಾ ಈ ಸಂಕಷ್ಟದ ಸಂದರ್ಭದಲ್ಲಿ ಕೆಲವರ ಮುಖದಲ್ಲಿ ಸಂತೋಷ ಕಾಣುವಂತೆ ಮಾಡುವುದು ಈ ಶೋನ ಉದ್ದೇಶ. ಮದುವೆಯಾದ ನಂತರ ಕೂಡ ತಮಗೆ ರ್ಯಾಂಪ್‌ ಮೇಲೆ ಹೆಜ್ಜೆಹಾಕುವ ಅವಕಾಶ ಸಿಕ್ಕಿದ್ದಕ್ಕೆ ಮಿಸೆಸ್ ವಿಭಾಗದ ಸ್ಪರ್ಧಿಗಳು ಸಂಭ್ರಮಿಸುತ್ತಿದ್ದಾರೆ. ನಾನು ಅವರಿಗೆಲ್ಲಾ ಅಭಿನಂದನೆ ಹೇಳುತ್ತೇನೆ'' ಎಂದರು.

  ಕಾರ್ಯಕ್ರಮದ ಅತಿಥಿ ಹಾಗೂ ನಟ ಜೆ.ಕೆ ಮಾತನಾಡಿ, "ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಎಲ್ಲರ ಆತ್ಮವಿಶ್ವಾಸ ನೋಡಿ ಖುಷಿಯಾಯಿತು. ಫ್ಯಾಷನ್ ಶೋಗೆ ಬರಲು ನನಗೆ ಖುಷಿಯಾಗುತ್ತದೆ. ಮಿಸ್ಟರ್ ವಿಭಾಗದವರೂ ವಿನೂತನ ರೀತಿಯಲ್ಲಿ ತಯಾರಿ ನಡೆಸಿಕೊಂಡು ಬಂದಿದ್ದರು. ಅವರೆಲ್ಲರಿಗೂ ಅಭಿನಂದನೆಗಳು' ಎಂದು ಚುಟುಕಾಗಿ ಮಾತು ಮುಗಿಸಿದರು.

  ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್‌ನಲ್ಲಿ ಗೆದ್ದ ಸ್ಪರ್ಧಿಗಳು ಜೈಪುರದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಗೆದ್ದವರು ಸಿಂಗಪೂರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

  ವಿಜೇತರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು. ಗೆದ್ದ ಸ್ಪರ್ಧಿಗಳು ಅತಿಥಿಗಳೊಟ್ಟಿಗೆ, ಕುಟುಂಬದವರೊಂದಿಗೆ ಫೊಟೊಕ್ಕೆ ಫೋಸು ನೀಡಿ ಸಂಭ್ರಮಿಸಿದರು.

  ಕೊರೊನಾಕ್ಕೆ ಮುಂಚೆ ಬೆಂಗಳೂರಿನಲ್ಲಿ ಹಲವು ಫ್ಯಾಷನ್‌ ಶೋಗಳು, ಸೌಂದರ್ಯ ಸ್ಪರ್ಧೆಗಳು ನಡೆಯುತ್ತಲೇ ಇದ್ದವು. ಆದರೆ ಕೊರೊನಾ ಕಾರಣದಿಂದ ಫ್ಯಾಷನ್ ಶೋಗಳು ಬಂದ್ ಆಗಿದ್ದವು. ಇದೀಗ ಶೋಗಳು ಪುನಃ ಆರಂಭವಾಗಿವೆ.

  ಪ್ರಸ್ತುತ ಮಿಸ್ ಇಂಡಿಯಾ ಮಾನಸಾ ವಾರಣಾಸಿ ಆಗಿದ್ದಾರೆ. ಅವರು 2020ರಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. 2017ರಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದ್ದರು. ಭಾರತದಲ್ಲಿ ಈವರೆಗೆ ಹಲವಾರು ಮಂದಿ ವಿಶ್ವ ಸುಂದರಿ ಆಗಿ ಮಿಂಚಿದ್ದಾರೆ.

  English summary
  Miss south India 2021 computation held in Bengaluru. Five contestants own the title. Actor JK participated as guest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X