For Quick Alerts
  ALLOW NOTIFICATIONS  
  For Daily Alerts

  'ಮಿಸ್ಸಿಂಗ್ ಬಾಯ್' ಬೆನ್ನು ತಟ್ಟಿದ ಕಿಚ್ಚ, ಸಂತೋಷ್, ಕಾರ್ತಿಕ್

  |

  'ಮಿಸ್ಸಿಂಗ್ ಬಾಯ್' ಸಿನಿಮಾ ಇಂದು ರಾಜ್ಯಾದಂತ್ಯ ಬಿಡುಗಡೆಯಾಗಿದೆ. ತಾಯಿ ಮಗನ ಕಥೆ ಪ್ರೇಕ್ಷಕರ ಪ್ರೀತಿ ಪಡೆದಿದೆ. ಪ್ರೇಕ್ಷಕರ ಜೊತೆಗೆ ವಿಮರ್ಶಕರು ಕೂಡ ಸಿನಿಮಾವನ್ನು ಹೊಗಳುತ್ತಿದ್ದಾರೆ.

  ಯಾವುದೇ ಸಿನಿಮಾ ಆಗಿರಲಿ ಪ್ರೇಕ್ಷಕರ ಜೊತೆಗೆ ವಿಮರ್ಶಕರ ಸಾಥ್ ಸಿಕ್ಕರೆ ಸಿನಿಮಾಗೆ ದೊಡ್ಡ ಬಲ ಬಂದಂತೆ ಆಗುತ್ತದೆ. 'ಮಿಸ್ಸಿಂಗ್ ಬಾಯ್'ನನ್ನು ಇಬ್ಬರು ಸಿನಿಮಾ ನೋಡಿ ಇಷ್ಟ ಪಟ್ಟಿದ್ದಾರೆ. ಇದಕ್ಕೆ ಪ್ಲಾಸ್ ಎನ್ನುವ ಹಾಗೆ, ಸಿನಿಮಾಗೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಟ ಸುದೀಪ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಕಾರ್ತಿಕ್ ಗೌಡ ಮಾತಾಡಿದ್ದಾರೆ.

  Missing Boy Review : ಸಿನಿಮಾ ಶುದ್ಧ.. ತಾಯಿ ಪ್ರೀತಿ ಪರಿಶುದ್ಧ..

  ಮದರ್ ಸೆಂಟಿಮೆಂಟ್ ಇರುವ ಈ ಸಿನಿಮಾದ ಮೇಲೆ ಸುದೀಪ್, ಸಂತೋಷ್ ಹಾಗು ಕಾರ್ತಿಕ್ ಮಮತೆ ತೋರಿದ್ದಾರೆ. ಮುಂದೆ ಓದಿ...

  ಟ್ವೀಟ್ ಮೂಲಕ ಸುದೀಪ್ ಶುಭಾಶಯ

  ನಟ ಸುದೀಪ್ 'ಮಿಸ್ಸಿಂಗ್ ಬಾಯ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದರು. ಇದೀಗ ಸಿನಿಮಾದ ಬಿಡುಗಡೆ ನಂತರವೂ ಅದರ ಬಗ್ಗೆ ಮಾತನಾಡಿದ್ದಾರೆ. ''ಮಿಸ್ಸಿಂಗ್ ಬಾಯ್' ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳನ್ನು ಕೇಳುತ್ತಿದ್ದೇನೆ. ಈ ಸಿನಿಮಾ ಆ ಅರ್ಹತೆಯನ್ನು ಹೊಂದಿದೆ. ಚಿತ್ರಕ್ಕೆ ನನ್ನ ಶುಭಾಶಯಗಳು.'' ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

  ಒಳ್ಳೆಯ ಕಥೆಯ ಸಿನಿಮಾ - ಸಂತೋಷ್ ಆನಂದ್ ರಾಮ್

  ಸಿನಿಮಾ ಬಗ್ಗೆ ಮಾತನಾಡಿರುವ ಸಂತೋಷ್ ಆನಂದ್ ರಾಮ್ ''ಇಂದು ರಾಜ್ಯಾದಂತ್ಯ 'ಮಿಸ್ಸಿಂಗ್ ಬಾಯ್' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಮ್ಮ ಬದುಕಿನ ಬೇರನ್ನು ಹುಡುಕಿಕೊಂಡು ಬರುವ ಕಥೆ ಇದಾಗಿದೆ. ನೀವು ಸಿನಿಮಾ ನೋಡಿ. ನಾನು ಈ ವಾರಾಂತ್ಯ ಸಿನಿಮಾ ನೋಡುತ್ತಿದ್ದೇನೆ. ಒಂದು ಒಳ್ಳೆಯ ಕಥೆ ಇರುವ ಸಿನಿಮಾ ಇದು. ಇಡೀ ತಂಡಕ್ಕೆ ಒಳ್ಳೆಯದಾಗಲಿ.'' ಎಂದು ಹೇಳಿದ್ದಾರೆ.

  ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ - ಕಾರ್ತಿಕ್ ಗೌಡ

  ಚಿತ್ರದ ರೆಸ್ಪಾನ್ಸ್ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಕಾರ್ತಿಕ್ ಗೌಡ ''ಮಿಸ್ಸಿಂಗ್ ಬಾಯ್' ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗುತ್ತಿದೆ. ತಂದೆ ತಾಯಿಯನ್ನು ಹುಡುಕಿ ಹೊರಡುವ ಒಂದು ಭಾವನಾತ್ಮಕ ಸಿನಿಮಾ ಇದಾಗಿದೆ. ಇಂತಹ ಚಿತ್ರವನ್ನು ನೀವು ನೋಡಿ.'' ಎಂದಿದ್ದಾರೆ. 'ಕೆಜಿಎಫ್' ಚಿತ್ರದ ಖ್ಯಾತಿಯ ಕಾರ್ತಿಕ್ ಗೌಡ ಅವರೇ ಈ ಚಿತ್ರದ ಹಂಚಿಕೆ ಮಾಡಿದ್ದಾರೆ.

  ಹೇಗಿದೆ ಸಿನಿಮಾ ?

  ಹೇಗಿದೆ ಸಿನಿಮಾ ?

  ''ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಯುಗ ಉರುಳಿ ಕಳೆದೋದರು.. ಹಣೆ ಬರಹ ಬದಲಾದರು..'' ಎನ್ನುವ 'ಜೋಗಿ' ಸಿನಿಮಾದ ಹಾಡನ್ನು 'ಮಿಸ್ಸಿಂಗ್ ಬಾಯ್'ನಲ್ಲಿ ಬಳಸಲಾಗಿದೆ. ಈ ಹಾಡಿನ ರೀತಿಯೇ ಸಿನಿಮಾದಲ್ಲಿ ತಾಯಿ ಮಗನ ನಡುವಿನ ಬಾಂದವ್ಯವನ್ನು ಸುಂದರವಾಗಿ ತೋರಿಸಿದ್ದಾರೆ. ಈ ಹಿಂದೆ ತೆರೆ ಮೇಲೆ ಎಷ್ಟೋ ಬಾರಿ ತಾಯಿ ಪ್ರೀತಿಯನ್ನು ನೋಡಿದ್ದರು ಮತ್ತೆ ನೋಡಬೇಕು ಅನಿಸುತ್ತದೆ. ಅಂತಹ ಭಾವನಾತ್ಮಕ ಸಿನಿಮಾ 'ಮಿಸ್ಸಿಂಗ್ ಬಾಯ್'. ತಾಯಿ ಸೆಂಟಿಮೆಂಟ್ ಸಿನಿಮಾಗಳನ್ನು ಇಷ್ಟ ಪಡುವವರು ಮಿಸ್ ಮಾಡದೆ 'ಮಿಸ್ಸಿಂಗ್ ಬಾಯ್' ನೋಡಿ.

  English summary
  Actor Gurunandan's Missing Boy kannada movie getting good reviews. The movie has a real story of a 5 years old boy. It have emotional content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X