ನಾಳೆ ರಾಜ್ಯಾದ್ಯಂತ 'ಮಿಸ್ಸಿಂಗ್ ಬಾಯ್' ಚಿತ್ರ ಬಿಡುಗಡೆ
ರಘುರಾಮ್ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ನೈಜ ಘಟನೆ ಆಧಾರವಾಗಿಟ್ಟುಕೊಂಡು ಮಾಡಿದ್ದ ಈ ಸಿನಿಮಾ ನಾಳೆಯಿಂದ ಪ್ರೇಕ್ಷಕರ ಮುಂದೆ ಬರುತ್ತಿದೆ.
'ಮಿಸ್ಸಿಂಗ್ ಬಾಯ್' ಒಂದು ಸಾಮಾನ್ಯ ಕಮರ್ಷಿಯಲ್ ಕಥೆಯಲ್ಲ. ಈ ಸಿನಿಮಾದ ಕಥೆ ಕೇಳಿದರೆ ಎಲ್ಲರಿಗೂ ಒಂದು ಕ್ಷಣ ಶಾಕ್ ಆಗುತ್ತದೆ. 1973-74 ರಲ್ಲಿ ನಡೆದ ರೋಚಕ ಕಥೆಯು ಪರದೆ ಮೇಲೆ ಮೂಡಿದೆ. ಜೋನಾಥನ್ ಎಂಬ ಹುಡುಗ ಬಗ್ಗೆ ಚಿತ್ರದ ಕಥೆ ಇದೆ. ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದ ಒಂದು ಊರಿನಲ್ಲಿ ಜೋನಾಥನ್ ಹುಟ್ಟುತ್ತಾನೆ. ರೈಲ್ವೆ ನಿಲ್ದಾಣದಿಂದ ಮಿಸ್ ಆಗುವ ಈ ಹುಡುಗನ ಕಥೆ ಈ ಸಿನಿಮಾವಾಗಿದೆ.

ನಟ ಗುರುನಂದನ್, ಮಲೆಯಾಳಂ ನಟಿ ಅರ್ಜನಾ ಜಯಕೃಷ್ಣನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಟ್ರೇಲರ್ ಕುತೂಹಲ ಮೂಡಿಸಿದೆ. ಶಿವರಾಜ್ ಕುಮಾರ್ ಚಿತ್ರದ ಟ್ರೇಲರ್ ಗೆ ಧ್ವನಿ ನೀಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಿನಿಮಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶದ ಜವಾಬ್ದಾರಿ ರಘುರಾಮ್ ತೆಗೆದುಕೊಂಡಿದ್ದಾರೆ.
ಸಿನಿಮಾಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿ ಪರಮೇಶ್ವರ್ ಆರ್ ಅಶೋಕ್ ಶುಭ ಕೋರಿದ್ದಾರೆ.


Click it and Unblock the Notifications











