»   » ವಿವಾದಕ್ಕೆ ಫುಲ್ ಸ್ಟಾಪ್; ಶುರು 'ಐರಾವತ' ಸಾಂಗ್ ಶೂಟ್

ವಿವಾದಕ್ಕೆ ಫುಲ್ ಸ್ಟಾಪ್; ಶುರು 'ಐರಾವತ' ಸಾಂಗ್ ಶೂಟ್

Posted By:
Subscribe to Filmibeat Kannada

ಬೇಜಾನ್ ಬಿಲ್ಡಪ್ ಪಡೆದುಕೊಂಡಿದ್ದ 'ಅಂಬರೀಶ' ಹೇಳದೆ ಕೇಳದೆ ಥಿಯೇಟರ್ ನಿಂದ ಎತ್ತಂಗಡಿಯಾದ ಮೇಲೆ ಹೊಸದಾಗಿ ಬರುತ್ತಾ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವತ' ಅಲಿಯಾಸ್ 'ಮಿಸ್ಟರ್ ಐರಾವತ' ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ.

ವರ್ಷದಿಂದ ಚಿತ್ರೀಕರಣ ಹಂತದಲ್ಲೇ ಇರುವ 'ಮಿಸ್ಟರ್ ಐರಾವತ' ಈಗ ಡಬ್ಬಿಂಗ್ ಸ್ಟೇಜ್ ತಲುಪಿದೆ. ನಿರ್ದೇಶಕ ಅರ್ಜುನ್-ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ದರ್ಶನ್ ನಡುವೆ ಭುಗಿಲೆದ್ದಿದ್ದ ವಿರಸಗಳೆಲ್ಲಾ ಬಗೆಹರಿದು ವಾಯ್ಸ್ ಡಬ್ ಮಾಡೋಕೆ ಶುರುಮಾಡಿದ್ದಾರೆ ದರ್ಶನ್. ['ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]


Misunderstanding ends; Darshan starts 'Airavata' song shoot

'ಮಿಸ್ಟರ್ ಐರಾವತ' ಚಿತ್ರಕ್ಕಾಗಿ ಹಗಲಿರುಳು ಬೆವರು ಹರಿಸುತ್ತಿರುವ ದರ್ಶನ್, ಡಬ್ಬಿಂಗ್ ನಂತ್ರ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳಲಿದ್ದಾರೆ. ಜುಲೈ ಮೊದಲ ವಾರದಲ್ಲಿ ಸಾಂಗ್ ಶೂಟಿಂಗ್ ನಡೆಯಲಿದೆ. [ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?]


ಕೆ.ಜಿ.ಎಫ್ ನಲ್ಲಿ ನಡೆಯುವ ಈ ಹಾಡಿನ ಚಿತ್ರೀಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಾಯಕಿ ಊರ್ವಶಿ ಜೊತೆ ನೂರಕ್ಕೂ ಹೆಚ್ಚು ನೃತ್ಯಗಾರರು ಇರಲಿದ್ದಾರೆ. ಗಣೇಶ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. [ಕಿರಿಕ್ ನಂತ್ರ 'ನೈಸಾಗಿ' ಶೂಟಿಂಗಿಗೆ ಬಂದ ಐರಾವತ]


Misunderstanding ends; Darshan starts 'Airavata' song shoot

'ಅಂಬಾರಿ', 'ಅದ್ದೂರಿ' ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಎ.ಪಿ ಅರ್ಜುನ್ ಅತಿ ಹೆಚ್ಚು ಸಮಯ ತೆಗೆದುಕೊಂಡು 'ಮಿಸ್ಟರ್ ಐರಾವತ' ರೆಡಿ ಮಾಡುತ್ತಿದ್ದಾರೆ. ಇಲ್ಲೂ ಅವರ ಕಮಾಲ್ ಮುಂದುವರಿಯುತ್ತಾ ಅನ್ನೋದನ್ನ ಸದ್ಯದಲ್ಲೇ ನೀವೇ ನೋಡ್ತಿರಲ್ಲಾ...

English summary
Challenging Star Darshan has put an end to all misunderstanding between Director A.P.Arjun and has given kick start to Song Shoot and Dubbing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada