For Quick Alerts
  ALLOW NOTIFICATIONS  
  For Daily Alerts

  ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಅಪಹಾಸ್ಯ, ರಂಗಾಯಣ ಮುತ್ತಿಗೆಗೆ ನಿರ್ಧಾರ

  By ಮೈಸೂರು ಪ್ರತಿನಿಧಿ
  |

  ಮೈಸೂರು ರಂಗಾಯಣದಲ್ಲಿ ನಡೆದ ನಾಟಕದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಹಾಗೂ ನಿಂದನೆ ಮಾಡಿರುವುದನ್ನು ಖಂಡಿಸಿ ರಂಗಾಯಣಕ್ಕೆ ಮುತ್ತಿಗೆ ಹಾಕಲು ವಿವಿಧ ಸಂಘಟನೆಗಳ ಸ್ವಾಭಿಮಾನಿ ಹೋರಾಟ ಸಮಿತಿ ನಿರ್ಧರಿಸಿದೆ.

  ರಂಗಾಯಣದ ಭೂಮಿಗೀತದಲ್ಲಿ ನಾಗರತ್ನಮ್ಮ ಕಾರ್ಯಾಗಾರ ವಿದ್ಯಾರ್ಥಿಗಳು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ಚಂದ್ರಶೇಖರ ಕಂಬಾರ ರಚನೆಯ 'ಸಾಂಬಶಿವ ಪ್ರಹಸನ' ನಾಟಕ ಪ್ರಸ್ತುತಪಡಿಸಿದ್ದರು. ಈ ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಆರೋಪಿಸಿದೆ.

  ಅನ್ನ ಭಾಗ್ಯ, ಕಂಕಣ ಭಾಗ್ಯ ಸೇರಿದಂತೆ ವಿವಿಧ ಭಾಗ್ಯಗಳನ್ನು ನೀಡಿ ಜನರನ್ನು ಸೋಮಾರಿ ಮಾಡಲಾಗಿದೆ ಎಂಬ ಅಂಶವನ್ನು ನಾಟಕದಲ್ಲಿ ತೋರಿಸಲಾಗಿತ್ತು. ಅಲ್ಲದೆ, ಕೆಡಿ ಅಂಕಲ್ ಎಂಬ ಪಾತ್ರ ಸೃಷ್ಟಿಸಿ ಡಿ.ಕೆ.ಶಿವಕುಮಾರ್ ಅವರನ್ನು ಅವಮಾನಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಮಣ್ಯ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

  ಇದಲ್ಲದೆ, ಸ್ವತಃ ಚಂದ್ರಶೇಖರ ಕಂಬಾರ ಅವರು, ನನ್ನ ನಾಟಕ ಯಾವುದೇ ವ್ಯಕ್ತಿಯನ್ನು ಕುರಿತು ಬರೆದಿಲ್ಲ. ಈ ನಾಟಕ ಮಾಡಲು ರಂಗಾಯಣವಾಗಲಿ, ಅದರ ನಿರ್ದೇಶಕರಾಗಲಿ ನನ್ನ ಅನುಮತಿ ಪಡೆದಿಲ್ಲ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.

  ಅಂದು ಬೆಳಗ್ಗೆ 10 ಗಂಟೆಗೆ ಓವೆಲ್ ಮೈದಾನದಲ್ಲಿ ಖಂಡನಾ ಸಭೆಯನ್ನು ನಡೆಸಿ ಬಳಿಕ ಮೆರವಣಿಗೆ ಮೂಲಕ ರಂಗಾಯಣ ಕಡೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ನಗರದ ಪುರಭವನಲ್ಲಿ ಶನಿವಾರದಲ್ಲಿ ನಡೆದ ಸಭೆಯಲ್ಲಿ ನಗರದ ನಾನಾ ಸಂಘಟನೆಗಳ ಮುಖಂಡರು ಭಾಗವಹಿಸಿ ಸ್ವಾಭಿಮಾನಿ ಹೋರಾಟ ಸಮಿತಿ ನೇತೃತ್ವದಲ್ಲಿ ಜನವರಿ 10 ರಂದು ರಂಗಾಯಣಕ್ಕೆ ಮುತ್ತಿಗೆ ಹಾಕಲು ನಿರ್ಣಯ ಕೈಗೊಂಡಿದ್ದಾರೆ.

  ಇದರೊಂದಿಗೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಸಾಹಿತಿಗಳು ಮತ್ತು ಕಲಾವಿದರು ಸೇರಿದಂತಹ ಸ್ವಾಭಿಮಾನಿ ಹೋರಾಟ ಸಮಿತಿಯನ್ನು ಶಾಶ್ವತ ಹೋರಾಟ ಸಮಿತಿಯಾಗಿ ರಚಿಸಿ ಪಕ್ಷಾತೀತ ಮತ್ತು ಜಾತ್ಯಾತೀತ ಹೋರಾಟ ನಡೆಸಲು ಕರೆ ನೀಡಲಾಯಿತು.

  ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಲಕ್ಷ್ಮಣ್, ಕರ್ನಾಟಕರ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿದರು. ಮಾಜಿ ಮೇಯರ್ ನಾರಾಯಣ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಮಾಜಿ ಶಾಸಕ ವಾಸು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ರಂಗಾಯಣದ ಕಲಾವಿದ ಕೃಷ್ಣ ಪ್ರಸಾದ್ , ಮಾಜಿ ಮೇಯರ್‌ಗಳಾದ ನಾರಾಯಣ್, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್ ಮುಖಂಡರಾದ ಹರೀಶ್‌ಗೌಡ, ಪ್ರಶಾಂತ್‌ಗೌಡ, ಮಂಜುಳ ಮಾನಸ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಯೋಗೇಶ್ ಉಪ್ಪಾರ್ ಇದ್ದರು.

  English summary
  Mockery of former CM Siddaramaiah and DK Shivarkumar in one of the drama that played in Mysore Rangayana. Some organizations decided to protest against Rangayana.
  Sunday, January 8, 2023, 7:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X