twitter
    For Quick Alerts
    ALLOW NOTIFICATIONS  
    For Daily Alerts

    2019 ಮುಗಿತು, 2020ರಲ್ಲಿ ಇಂಡಸ್ಟ್ರಿ ರೂಲ್ ಮಾಡೋದು ಯಾರು?

    |

    2019ನೇ ವರ್ಷ ಕನ್ನಡ ಇಂಡಸ್ಟ್ರಿಗೆ ಸಿಹಿ ತಂದಿತ್ತು. ಸೂಪರ್ ಹಿಟ್ ಚಿತ್ರಗಳು ಬಂದ್ವು, ಗಡಿಯಾಚೆಯೂ ಸದ್ದು ಮಾಡಿದ್ವು. ಕೆಜಿಎಫ್ ಸಿನಿಮಾ ಬಳಿಕ ಮತ್ತಷ್ಟು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ ಸಂಭ್ರಮ ಆಚರಿಸಿದ್ದವು.

    ದರ್ಶನ್ ನಟನೆಯ ಯಜಮಾನ, ಕುರುಕ್ಷೇತ್ರ, ಸುದೀಪ್ ನಟನೆಯ ಪೈಲ್ವಾನ್, ರಿಷಬ್ ಶೆಟ್ಟಿಯ ಬೆಲ್ ಬಾಟಂ, ಜಗ್ಗೇಶ್ ನಟನೆಯ ಕಾಳಿದಾಸ ಕನ್ನಡ ಮೇಷ್ಟ್ರು, ಪ್ರೀಮಿಯರ್ ಪದ್ಮಿನಿ, ಸತೀಶ್ ನೀನಾಸಂ ಬ್ರಹ್ಮಾಚಾರಿ, ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ ಅಂತಹ ಸಿನಿಮಾಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು.

    ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಿವುಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಿವು

    ಇದೀಗ, 2020ನೇ ವರ್ಷಕ್ಕೆ ಮತ್ತಷ್ಟು ನಿರೀಕ್ಷೆಯ, ಬಾಕ್ಸ್ ಧೂಳೆಬ್ಬಿಸುವ, ಪ್ರೇಕ್ಷಕರನ್ನು ರಂಜಿಸುವಂತಹ ಮೆಗಾ ಸಿನಿಮಾಗಳು ಸಜ್ಜಾಗುತ್ತಿದೆ. ಹಾಗಿದ್ರೆ, ಈ ವರ್ಷ ಬಹುನಿರೀಕ್ಷೆಯ ಚಿತ್ರಗಳು ಯಾವುದು ಎಂಬ ಪಟ್ಟಿ ಇಲ್ಲಿದೆ ನೋಡಿ....

    ಕೆಜಿಎಫ್ ಚಾಪ್ಟರ್ 2

    ಕೆಜಿಎಫ್ ಚಾಪ್ಟರ್ 2

    ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ಈ ವರ್ಷದ ಅತಿ ದೊಡ್ಡ ಸಿನಿಮಾ. ಭರದಿಂದ ಶೂಟಿಂಗ್ ಸಾಗುತ್ತಿದ್ದು, ಈ ವರ್ಷದ ಮಧ್ಯದಲ್ಲಿ ತೆರೆಗೆ ಬರಲು ತಯಾರಿ ನಡೆಸಿದೆ. ಕೆಜಿಎಫ್ 2 ಸಿನಿಮಾದ ಬಳಿಕ ಕನ್ನಡ ಇಂಡಸ್ಟ್ರಿಯ ಹಿರಿಮೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ನಂಬಿಕೆ ಇದೆ. ಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಬಹುದು ಎಂಬ ಅಭಿಪ್ರಾಯವೂ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನ ಹೊಂಬಾಳೆ ಫಿಲಂಸ್ ನಿರ್ಮಿಸಿದ್ದಾರೆ.

    ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?

    ದರ್ಶನ್ 'ರಾಬರ್ಟ್'

    ದರ್ಶನ್ 'ರಾಬರ್ಟ್'

    ಕಳೆದ ವರ್ಷ ಸಕ್ಸಸ್ ಫುಲ್ ನಟ ಎನಿಸಿಕೊಂಡಿದ್ದ ದರ್ಶನ್, ಈ ವರ್ಷಕ್ಕೂ ಭಾರಿ ಪ್ರಾಜೆಕ್ಟ್ ಗಳೊಂದಿಗೆ ಬರ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ರಾಬರ್ಟ್ ಸಿನಿಮಾ ಮೇಲೂ ಪ್ರೇಕ್ಷಕರ ಕಣ್ಣಿದೆ. ಈಗಾಗಲೇ ಪೋಸ್ಟರ್, ದರ್ಶನ್ ಅವರ ಲುಕ್ ನಿಂದ ಭಾರಿ ಚರ್ಚೆಗೆ ಕಾರಣವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾನೂ ದಾಖಲೆ ಬರೆಯಬಹುದು ಎಂಬ ನಿರೀಕ್ಷೆ ಇದೆ.

    2019ರ 'ಬುಕ್ ಮೈ ಶೋ' ಟಾಪ್ ರೇಟ್ ಚಿತ್ರಗಳ ಪಟ್ಟಿಯಲ್ಲಿ 'ಕೆಜಿಎಫ್'ಗೆ ಎಷ್ಟನೇ ಸ್ಥಾನ?2019ರ 'ಬುಕ್ ಮೈ ಶೋ' ಟಾಪ್ ರೇಟ್ ಚಿತ್ರಗಳ ಪಟ್ಟಿಯಲ್ಲಿ 'ಕೆಜಿಎಫ್'ಗೆ ಎಷ್ಟನೇ ಸ್ಥಾನ?

    ರಾಜವೀರ ಮದಕರಿ ನಾಯಕ

    ರಾಜವೀರ ಮದಕರಿ ನಾಯಕ

    ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಮಾಡ್ತೀನಿ ಎಂದು ಸ್ವತಃ ದರ್ಶನ್ ಅವರೇ ಹೇಳಿರುವುದನ್ನು ಗಮನಿಸಿದ್ರೆ 'ರಾಜವೀರ ಮದಕರಿ ನಾಯಕ' ಚಿತ್ರವೂ ಇದೇ ವರ್ಷದಲ್ಲಿ ತೆರೆಕಾಣಬಹುದು ಎನ್ನಲಾಗುತ್ತಿದೆ. ಐತಿಹಾಸಿಕ ಚಿತ್ರವಾಗಿರುವುದರಿಂದ ಈ ಸಿನಿಮಾನೂ ಮೇಲೂ ಸ್ಯಾಂಡಲ್ವುಡ್ ಇಂಡಸ್ಟ್ರಿ ಭರವಸೆ ಇಟ್ಟುಕೊಂಡಿದೆ.

    ಕಿಚ್ಚನ ಕೋಟಿಗೊಬ್ಬ 3

    ಕಿಚ್ಚನ ಕೋಟಿಗೊಬ್ಬ 3

    ಸುದೀಪ್ ನಟಿಸುತ್ತಿರುವ ಕೋಟಿಗೊಬ್ಬ-3 ಸಿನಿಮಾ ಕೂಡ ಈ ವರ್ಷದ ಬಿಗ್ಗೆಸ್ಟ್ ಚಿತ್ರಗಳಲ್ಲಿ ಒಂದು. ಹಾಲಿವುಡ್ ಸ್ಟೈಲ್ ನಲ್ಲಿ ಮೇಕಿಂಗ್ ಆಗುತ್ತಿದೆ ಎಂಬ ಕುತೂಹಲ ಹುಟ್ಟಿಕೊಂಡಿದೆ. ಬಹುಶಃ ಅನೂಪ್ ಭಂಡಾರಿ ಜೊತೆ ಮಾಡಲಿರುವ ಫ್ಯಾಂಟಮ್ ಸಿನಿಮಾ ಕೂಡ ಈ ವರ್ಷವೇ ಬರುವ ಸಾಧ್ಯತೆ ಇದೆ.

    ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?

    ಪುನೀತ್ 'ಯುವರತ್ನ'

    ಪುನೀತ್ 'ಯುವರತ್ನ'

    ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಈ ವರ್ಷ ನಿರೀಕ್ಷೆಯ ಚಿತ್ರ. ಬಹಳ ವರ್ಷದ ನಂತರ ಕಾಲೇಜ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಈ ಸಿನಿಮಾ ಅಪ್ಪು ಫ್ಯಾನ್ಸ್ ಗೆ ಥ್ರಿಲ್ ಹೆಚ್ಚಿಸಿದೆ. ಇನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನವಿರುವುದರಿಂದ ಸೌಂಡು ಸ್ವಲ್ಪ ಜಾಸ್ತಿನೇ ಇದೆ.

    ಶಿವಣ್ಣನ ಭಜರಂಗಿ 2

    ಶಿವಣ್ಣನ ಭಜರಂಗಿ 2

    ಸಂಪ್ರದಾಯದಂತೆ ಈ ವರ್ಷವೂ ಶಿವಣ್ಣನ ಹಲವು ಚಿತ್ರಗಳು ತಯಾರಾಗುತ್ತಿದೆ. ಅದರಲ್ಲೂ ಭಜರಂಗಿ 2 ಚಿತ್ರದ ಮೇಲೆ ಸ್ವಲ್ಪ ನಿರೀಕ್ಷೆ ಹೆಚ್ಚಿದೆ. ಇದರ ಜೊತೆಗೆ ದ್ರೋಣ, ಎಸ್ ಆರ್ ಕೆ ಸಿನಿಮಾಗಳು ಸಾಲಿನಲ್ಲಿದೆ.

    2019 ಫ್ಲ್ಯಾಶ್ ಬ್ಯಾಕ್: ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ವಿವಾದಗಳಿವು2019 ಫ್ಲ್ಯಾಶ್ ಬ್ಯಾಕ್: ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ವಿವಾದಗಳಿವು

    ರಕ್ಷಿತ್ 'ಚಾರ್ಲಿ 777'

    ರಕ್ಷಿತ್ 'ಚಾರ್ಲಿ 777'

    'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಯಶಸ್ಸಿನ ನಂತರ ಬರುತ್ತಿರುವ ಚಾರ್ಲಿ 777 ಸಿನಿಮಾ ಈ ವರ್ಷದ ಪ್ರಮುಖ ಸಿನಿಮಾಗಳಲ್ಲಿ ಒಂದು. ಈಗಾಗಲೇ ಈ ಸಿನಿಮಾದ ಚಿತ್ರೀಕರಣವೂ ಬಹುತೇಕ ಮುಗಿದಿದೆ.

    ದುನಿಯಾ 'ಸಲಗ'

    ದುನಿಯಾ 'ಸಲಗ'

    ದುನಿಯಾ ವಿಜಯ್ ಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಸಲಗ. ಮೇಕಿಂಗ್ ಮೂಲಕ ಭಾರಿ ಸದ್ದು ಮಾಡ್ತಿರುವ ಈ ಚಿತ್ರ 2020ರಲ್ಲಿ ಬಿಡುಗಡೆಯಾಗಲಿದೆ. ಧನಂಜಯ್ ಮತ್ತು ವಿಜಿ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಕಾತುರತೆ ಹೆಚ್ಚಿಸಿದೆ. ಇದರ ಜೊತೆಗೆ ಧನಂಜಯ್ ನಟನೆ ಹಾಗೂ ದುನಿಯಾ ಸೂರಿ ಕಾಂಬಿನೇಷನ್ನಲ್ಲಿ ಬರ್ತಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಕೂಡ ಕುತೂಹಲ ಮೂಡಿಸಿದೆ.

    ಧ್ರುವ ಸರ್ಜಾ 'ಪೊಗರು'

    ಧ್ರುವ ಸರ್ಜಾ 'ಪೊಗರು'

    ಎರಡು ವರ್ಷದಿಂದ ಸಿನಿಮಾ ಇಲ್ಲದೇ ಕಾಯಿಸುತ್ತಿರುವ ಧ್ರುವ ಸರ್ಜಾ, ಈ ವರ್ಷ ಪೊಗರು ಮೂಲಕ ತೆರೆಮೇಲೆ ಬರೋದು ಖಚಿತ. ಈಗಾಗಲೇ ಡೈಲಾಗ್ ಟ್ರೈಲರ್ ಮೂಲಕ ಸದ್ದು ಮಾಡ್ತಿರುವ ಪೊಗರು 2020ರ ಬಿಗ್ ಪ್ರಾಜೆಕ್ಟ್.

    ಉಪ್ಪಿಯ 'ಕಬ್ಜ'

    ಉಪ್ಪಿಯ 'ಕಬ್ಜ'

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಜೋಡಿಯಿಂದ ಬರ್ತಿರುವ ಮತ್ತೊಂದು ಕಬ್ಜ. ಏಳು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೇಲೆ ಅತಿಯಾದ ನಿರೀಕ್ಷೆ ಇದೆ. ಈ ಸಿನಿಮಾನೂ ಈ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಉಪ್ಪಿ ಬುದ್ದಿವಂತ 2, ಹೋಮ್ ಮಿನಿಸ್ಟರ್ ಸಿನಿಮಾಗಳು ಬರಬಹುದು.

    ಗಾಳಿಪಟ 2

    ಗಾಳಿಪಟ 2

    ಯೋಗರಾಜ್ ಭಟ್ಟರು ಘೋಷಣೆ ಮಾಡಿರುವ ಗಾಳಿಪಟ 2 ಸಿನಿಮಾದ ಮೇಲೂ ಪ್ರೇಕ್ಷಕರಲ್ಲಿ ಕಾತುರತೆ ಇದೆ. ಮತ್ತೊಮ್ಮೆ ಗಣೇಶ್ ಮತ್ತು ಯೋಗರಾಜ್ ಭಟ್ ಜೊತೆಯಾಗಿರುವುದು ಈ ಸಿನಿಮಾದ ವಿಶೇಷತೆ. ಎಲ್ಲ ಅಂದುಕೊಂಡಂತೆ ಆದರೆ ಈ ವರ್ಷ ಗಾಳಿಪಟ 2 ಹಾರಾಡಲಿದೆ.

    ಉಳಿದಂತೆ ಯಾವ ಚಿತ್ರಗಳು

    ಉಳಿದಂತೆ ಯಾವ ಚಿತ್ರಗಳು

    ಭರಾಟೆ ಮುಗಿಸಿರುವ ಶ್ರೀಮುರಳಿ ಮದಗಜ ಕೈಗೆತ್ತಿಕೊಳ್ಳಬಹುದು. ಧೀರನ್ ರಾಮ್ ಕುಮಾರ್ ನಟನೆಯ ಶಿವು 143, ಜಮೀರ್ ಅಹ್ಮದ್ ಖಾನ್ ಮಗ ನಟಿಸುತ್ತಿರುವ ಬನಾರಸ್, ಸುದೀಪ್ ಸಂಬಂಧಿ ಸಂಚಿತ್ ಸಂಜೀವ್ ಸಿನಿಮಾ, ಮಾಯಾಬಜಾರ್, ಪರಿಮಳ ಲಾಡ್ಜ ಅಂತಹ ಚಿತ್ರಗಳು ಈ ವರ್ಷದ ಪಟ್ಟಿಯಲ್ಲಿದೆ.

    English summary
    Sandalwood finished 2019 in great way. now, kannada stars ready to welcoming 2020. here is the most expected kannada movies of the 2020.
    Wednesday, January 1, 2020, 13:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X