»   » ಅಂತರ್ಜಾಲದಲ್ಲಿ ಭಾರೀ ಜನಪ್ರಿಯರ ಪಟ್ಟಿಯಲ್ಲಿ ನಮ್ಮವರಿಬ್ಬರು

ಅಂತರ್ಜಾಲದಲ್ಲಿ ಭಾರೀ ಜನಪ್ರಿಯರ ಪಟ್ಟಿಯಲ್ಲಿ ನಮ್ಮವರಿಬ್ಬರು

Posted By:
Subscribe to Filmibeat Kannada

ಸೆಲೆಬ್ರಿಟಿ ಜಗತ್ತು ಎನ್ನುವ ಲೋಕದಲ್ಲಿ ಜನಪ್ರಿಯತೆ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ರಾತ್ರೋರಾತ್ರಿ ಜನಪ್ರಿಯರಾಗಲು ಅದೃಷ್ಟ ಎನ್ನುವುದು ನಮ್ಮ ಜೊತೆಗಿದ್ದರೆ ಮಾತ್ರ ಸಾಧ್ಯ ಬಿಡಿ.

ವೀಣಾ ಮಲಿಕ್, ಪೂನಂ ಪಾಂಡೆಯಂತಹ ಸಕತ್ ಹಾಟ್ ನಟಿಯರು ಜನಪ್ರಿಯತೆಯ ಉತ್ತುಂಗಕ್ಕೆ ಹೇಗೆ ಏರಿದರು ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಬೇಕಾಗಿಲ್ಲ.

ಕೆಲವರು ವಿವಾದದಿಂದಲೇ ಜನಪ್ರಿಯರಾದರೆ, ಕೆಲವರು ಸದಭಿರುಚಿಯ ಚಿತ್ರವನ್ನು ಮಾಡಿ ಜನ ಮನ್ನಣೆ ಗಳಿಸುತ್ತಾರೆ. ಮತ್ತೆ ಕೆಲವರು ತಾವು ಆಯ್ದುಕೊಂಡ ಫೀಲ್ಡಿನಲ್ಲಿ ಪಂಟರಾಗಿರುತ್ತಾರೆ. ಯಾವುದೂ ಇಲ್ಲದವರು ಸೈಲೆಂಟಾಗಿ ಸೈಡಲ್ಲಿ ಇರಬೇಕಾಗುತ್ತದೆ.

Vuclip ಎನ್ನುವ ಸಂಸ್ಥೆ ಅಂತರ್ಜಾಲದಲ್ಲಿ ಯಾರು ಹೆಚ್ಚು ಜನಪ್ರಿಯರು ಅಂದರೆ ನೆಟ್ಟಿಗರು ಯಾರನ್ನು ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವುದರ ಬಗ್ಗೆ ಸರ್ವೇ ನಡೆಸಿದೆ. ಈ ವರ್ಷದ ಎರಡನೇ ಅವಧಿಗೆ ನಡೆಸಿದ ಈ ಸಮೀಕ್ಷೆಯಲ್ಲಿ ಹತ್ತು ಜನಗಳ ಪೈಕಿ ನಮ್ಮ ಬೆಂಗಳೂರಿನ ಇಬ್ಬರು ತಾರೆಯರು ಇರುವುದು ವಿಶೇಷ..

ಅವರ್ಯಾರು ಸ್ಲೈಡ್ ಪ್ಲೀಸ್..

ಸಲ್ಮಾನ್ ಖಾನ್

ವಿವಾದ ಸಲ್ಲು ಮಿಯಾ ಸುತ್ತ ಗಿರಿಗಿಟ್ಲೆ ಆಡುತ್ತಿದೆಯೋ ಅಥವಾ ಸಲ್ಲು ಅದರ ಹಿಂದೆ ಸುತ್ತುತ್ತಿದ್ದಾರೋ ಗೊತ್ತಿಲ್ಲ. ಹಿಂದಿ ಚಿತ್ರರಂಗದ ಬಾಕ್ಸ್ ಆಫೀಸ್ ಕಿಂಗ್, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಮೊದಲನೇ ಸ್ಥಾನದಲ್ಲಿದ್ದಾರೆ.

ಕತ್ರಿನಾ ಕೈಫ್

ಕೆಲ ದಿನಗಳ ಹಿಂದೆಯಷ್ಟೇ ರಣಬೀರ್ ಕಪೂರ್ ಜೊತೆ ಸ್ಪೈನ್ ಬೀಚಿನಲ್ಲಿ ಅಡ್ಡಾಡಿಕೊಂಡು ಬಂದ ಕತ್ರಿನಾ ಕೈಫ್ ಎರಡನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಸ್ಪೈನ್ ಬೀಚಿನಲ್ಲಿ ಬಿಕನಿ ಉಡುಗೆಯಲ್ಲಿ ಮೈತುಂಬಾ ಕಾಣಿಸಿಕೊಂಡ ನಂತರ ಕತ್ರಿನಾ ಇನ್ನಷ್ಟು ಜನಪ್ರಿಯರಾಗಿದ್ದಾರಂತೆ.

ಸಚಿನ್ ತೆಂಡೂಲ್ಕರ್

ಯಾವುದೇ ವಿವಾದದಲ್ಲಿ ಸಿಲುಕದೇ ತಾನು ಆಯ್ದುಕೊಂಡ ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯಾದ ಕ್ರಿಕೆಟಿನಲ್ಲಿ ಪಂಟರ್ ಆಗಿ ಮೆರೆದ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.

ರಣಬೀರ್ ಕಪೂರ್

ಸದಾ ಸುದ್ದಿಯಲ್ಲಿರುವ ಇನ್ನೊಬ್ಬ ನಟ ರಣಬೀರ್ ಕಪೂರ್. ಒಮ್ಮೆ ಕತ್ರಿನಾ ಜೊತೆ ಮತ್ತೊಮ್ಮೆ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳುವ ರಣಬೀರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕಿಮ್ ಕರ್ದೇಶಿಯನ್

ಹಾಲಿವುಡ್ ಜಗತ್ತಿನ ಜನಪ್ರಿಯ ನಟಿ ಕಿಮ್ ಕರ್ದೇಶಿಯನ್ ಐದನೇ ಸ್ಥಾನದಲ್ಲಿದ್ದಾರೆ. ಈಕೆ ಟಿವಿ ನಿರೂಪಕಿಯಾಗಿ ಕೂಡಾ ಜನಪ್ರಿಯತೆ ಗಳಿಸಿದ್ದಾರೆ.

ಅನುಷ್ಕಾಶರ್ಮಾ

ಬೆಂಗಳೂರಿನಲ್ಲಿ ಹುಟ್ಟಿದ ಈಕೆ ಇದುವರೆಗೆ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಲಿಲ್ಲ, ಆದರೆ ಕನ್ನಡ ಚೆನ್ನಾಗಿ ಮಾತನಾಡ ಬಲ್ಲಳು. ಅನುಷ್ಕಾ ಆರನೇ ಸ್ಥಾನದಲ್ಲಿದ್ದಾರೆ.

ಪ್ರಿಯಾಮಣಿ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರಿಯಾಮಣಿ ಏಳನೇ ಸ್ಥಾನದಲ್ಲಿದ್ದಾರೆ. ಚಾರುಲತಾ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಪ್ರಿಯಾಮಣಿಗೆ ಪ್ರತಿಷ್ಠಿತ ಫಿಲಂಫೇರ್ ಸೌತ್ ಪ್ರಶಸ್ತಿ ಲಭಿಸಿತ್ತು.

ಟೇಲರ್ ಸ್ವಿಫ್ಟ್

ಹಾಲಿವುಡ್ ಗಾಯಕಿ, ಸಾಹಿತಿ, ಏಳು ಬಾರಿ ಗ್ರಾಮಿ ಪ್ರಶಸ್ತಿ ಗೆದ್ದಿರುವ ಟೇಲರ್ ಸ್ವಿಫ್ಟ್ ಎಂಟನೇ ಸ್ಥಾನದಲ್ಲಿದ್ದಾರೆ.

ಕಾಜಲ್ ಅಗರವಾಲ್

ದಕ್ಷಿಣ ಭಾರತದ ಚಿತ್ರದಲ್ಲಿ ಹೆಚ್ಚಿನ ಜನಪ್ರಿಯಗಳಿಸಿರುವ ಕಾಜಲ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ನಿತ್ಯಾ ಮೆನನ್

ಲಾಸ್ಟ್ ಬಟ್ ನಾಟ್ ಲೀಸ್ಟ್, ಹತ್ತನೇ ಸ್ಥಾನದಲ್ಲಿ ಬೆಂಗಳೂರಿನ ಮತ್ತೊಬ್ಬ ಬೆಡಗಿ ನಿತ್ಯಾ ಮೆನನ್ ಇದ್ದಾರೆ. ಬೆಂಗಳೂರು - ಹೈದರಾಬಾದ್ ವಿಮಾನದ ಕಾಕ್ ಪಿಟ್ ನಲ್ಲಿ ಕೂತು ಪ್ರಯಾಣಿಸಿ ಪೈಲಟ್ ಗಳ ಸಸ್ಪೆಂಡಿಗೆ ಒಂದು ರೀತಿಯಲ್ಲಿ ಮೈನಾ ಬೆಡಗಿ ನಿತ್ಯಾ ಮೆನನ್ ಕಾರಣರಾಗಿದ್ದರು. ಇದೂ ಅವರ ಜನಪ್ರಿಯತೆಗೆ ಕಾರಣವಾಯಿತು.

English summary
A new survey conducted by Vuclip for the year's second quarter has revealed that Salman Khan one of the most eligible bachelor is most searched celebrity. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada